Advertisement

EV charging: ಇವಿ ಚಾರ್ಜಿಂಗ್‌; ಯೂನಿಟ್‌ಗೆ 7 ಪೈಸೆ ಹೆಚ್ಚಳ

11:13 AM Aug 01, 2024 | Team Udayavani |

ಬೆಂಗಳೂರು: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ವಿದ್ಯುತ್‌ಚಾಲಿತ ಚಾರ್ಜಿಂಗ್‌ ಕೇಂದ್ರಗಳ ದರ ಪರಿಷ್ಕರಣೆ ಮಾಡಲಾಗಿದ್ದು, ಹಿಂದಿನ ದರಕ್ಕೆ ಹೋಲಿಸಿದರೆ ಪ್ರತಿ ಯೂನಿಟ್‌ಗೆ ಸರಾಸರಿ 7 ಪೈಸೆ ಹೆಚ್ಚಳ ಆಗಿದೆ.

Advertisement

ಆಗಸ್ಟ್‌ 1ರಿಂದ (ಗುರುವಾರ) ಹೊಸ ದರ ಅನ್ವಯ ಆಗಲಿದೆ. 25 ಕಿ.ವ್ಯಾ. ಸಾಮರ್ಥ್ಯದ ಅಂದರೆ ವೇಗದ ಚಾರ್ಜಿಂಗ್‌ಗೆ ಪ್ರತಿ ಯೂನಿಟ್‌ಗೆ 7.67 ರೂ. ನಿಗದಿಪಡಿಸಲಾಗಿದೆ. ಅದೇ ರೀತಿ, 15 ಕಿ.ವ್ಯಾ. ಸಾಮರ್ಥ್ಯದ ಚಾರ್ಜಿಂಗ್‌ ಸ್ಟೇಷನ್‌ ಸಾಮಾನ್ಯ ಚಾರ್ಜಿಂಗ್‌ಗೆ (ಡೈರೆಕ್ಟ್ ಕರೆಂಟ್‌) ಪ್ರತಿ ಯೂನಿಟ್‌ ಗೆ 7 ರೂ. ಮತ್ತು 3.3 ಕಿ.ವ್ಯಾ. ಸಾಮರ್ಥ್ಯದ ಚಾರ್ಜಿಂಗ್‌ಗೆ (ಅಲ್ಟರ್‌ನೆàಟ್‌ ಕರೆಂಟ್‌) ಪ್ರತಿ ಯೂನಿಟ್‌ಗೆ 6.86 ರೂ. ನಿಗದಿಪಡಿಸಲಾಗಿದೆ. ತಲಾ 12 ಪೈಸೆ ರಾಜ್ಯ ಮತ್ತು ಕೇಂದ್ರ ತೆರಿಗೆಯೂ ಸೇರಿದೆ. ಸರ್ಕಾರಿ ಚಾರ್ಜಿಂಗ್‌ ಸ್ಟೇಷನ್‌ಗೆ ಹೋಲಿಸಿದರೆ ಖಾಸಗಿಯಲ್ಲಿ 20 ರೂ. ಪ್ರತಿ ಯೂನಿಟ್‌ಗೆ ಜಾಸ್ತಿಯಾಗಲಿದೆ.

5,059 ಚಾರ್ಜಿಂಗ್‌ ಸ್ಟೇಷನ್‌ಗಳು: ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸೂಚನೆ ಮೇರೆಗೆ ಇವಿ ಅನುಷ್ಠಾನಕ್ಕೆ ಸಂಬಂಧಿಸಿದ ನೋಡಲ್‌ ಏಜೆನ್ಸಿ ಆಗಿರುವ ಬೆಸ್ಕಾಂ ಈ ಆದೇಶ ಹೊರಡಿಸಿದೆ. ರಾಜ್ಯದಲ್ಲಿ 5,059 ವಿದ್ಯುತ್‌ಚಾಲಿತ ವಾಹನಗಳ ಚಾರ್ಜಿಂಗ್‌ ಕೇಂದ್ರಗಳಿದ್ದು, ಮುಂಬರುವ ದಿನಗಳಲ್ಲಿ ಇವುಗಳ ಸಂಖ್ಯೆಯನ್ನು 2,380ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಪೈಕಿ 1,190 ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಮಧ್ಯೆ ಇವಿ ಮಿತ್ರ ಆ್ಯಪ್‌ ಅನ್ನು ಕೂಡ ಬೆಸ್ಕಾಂ ಪರಿಚಯಿಸಿದ್ದು, ವಿದ್ಯುತ್‌ಚಾಲಿತ ವಾಹನ ಬಳಕೆದಾರರು ಸುಲಭವಾಗಿ ಚಾರ್ಜಿಂಗ್‌ ಸೌಲಭ್ಯ ಪಡೆಯಬಹುದಾಗಿದೆ.

ಆ್ಯಪ್‌ ಓಪನ್‌ ಮಾಡಿದ ತಕ್ಷಣ ಸಮೀಪದ ಇವಿ ಚಾರ್ಜಿಂಗ್‌ ಸ್ಟೇಷನ್‌ ಜಿಪಿಎಸ್‌ ಮಾಹಿತಿ ದೊರೆಯುತ್ತದೆ. ಅದನ್ನು ಆಧರಿಸಿ ವಾಹನ ಸವಾರರು ಹತ್ತಿರದ ಚಾರ್ಜಿಂಗ್‌ ಪಾಯಿಂಟ್‌ಗೆ ಭೇಟಿ ನೀಡಿ, ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ಹಣ ಪಾವತಿಸಿ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.