Advertisement

ಕಪ್ಪುರೆಕ್ಕೆ ತುದಿಯ ಬಿಳಿ ಕೊಕ್ಕರೆ

02:58 PM Mar 04, 2017 | |

ಒಂದು ಗುಂಪಿನಲ್ಲಿ 50 ಕ್ಕಿಂತ ಹೆಚ್ಚು ಹಕ್ಕಿಗ‌ಳಿರುವವು. ಕೆಲವೊಮ್ಮ ಗುಂಪಾಗಿ ಇವು ಇತರ ಕೊಕ್ಕರೆಯಂತೆ ಸುಮ್ಮನೆ ಕುಳಿತಿರುತ್ತವೆ. European white Strok (CiconiaCiconia ) M  Vulture +ಕಪ್ಪೆ ಇಲ್ಲವೇ ಮೀನು ಹತ್ತಿರ ಬಂದಾಗ ಕುತ್ತಿಗೆಯನ್ನು ಮುಂದೆ ಚಾಚಿತಟ್ಟನೆ ಹರಿತವಾದ ಕೊಕ್ಕಿನ ಸಹಾಯದಿಂದ ಅವುಗಳನ್ನು ಬೇಟೆಯಾಡುವುದು ಇದರ ವೈಶಿಷ್ಟ್ಯ. 

Advertisement

ಬಿಳಿಬಣ್ಣ ಎದ್ದು ಕಾಣುವದೊಡ್ಡ, ಎತ್ತರದಕೊಕ್ಕರೆ. 106 ಸೆಂ.ಮೀ. ಎತ್ತರ ಇರುತ್ತದೆ. ಶಂಕುವಿನಾಕಾರದ ಬಲವಾದ ಕೆಂಪು ಬಣ್ಣದ ಕೊಕ್ಕು ಎದ್ದು ಕಾಣುತ್ತದೆ. ಉದ್ದಕುತ್ತಿಗೆ ,ಉದದ್ದ ಕಾಲೂ ಕೆಂಪು ಬಣ್ಣದ್ದೆ. ಚಿಕ್ಕ ಬೆರಳಗಳು. ಅದರ ತುದಿಯಲ್ಲಿ ಕಂದು ಬಣ್ಣದ ಉಗುರಿದೆ. ತಲೆ, ಕುತ್ತಿಗೆ, ಎದೆ, ರೆಕ್ಕೆಯ ಬುಡ ಬಿಳಿ ಬಣ್ಣದಿಂದ ಕೂಡಿದೆ. ರೆಕ್ಕೆಯ ತುದಿ ಮಾತ್ರಕಪ್ಪು ಬಣ್ಣದ ಗರಿಗಳಿಂದ ಕೂಡಿರುತ್ತದೆ. ಇದು ಹಾರುವಾಗ ರೆಕ್ಕೆಯ ಕೆಳಭಾಗದ ಗರಿಕಪ್ಪು ಬಣ್ಣದ ಬೀಸಣಿಕೆಯಂತೆ ಕಾಣುತ್ತದೆ. 
ರೆಕ್ಕೆ ಬುಡದಲ್ಲಿ ಬಿಳಿಬಣ್ಣ ಇದೆ. ಇದು “ಸಿಕೋನಿಡೇ’ ಕುಟುಂಬಕ್ಕೆ ಸೇರಿದೆ. ರೆಕ್ಕೆ ಬಿಚ್ಚಿದಾಗ ರೆಕ್ಕೆಯ ಅಗಲ 155 ರಿಂದ 165 ಸೆಂ.ಮೀ. ಇರುತ್ತದೆ. ಇದರ ಭಾರ ನಾಲ್ಕು ಕೆಜಿ. ಇದರಲ್ಲಿ ಎರಡು ಉಪಜಾತಿಗಳಿವೆ. ಯುರೋಪಿನ ದೇಶಗಳಾದ ಫಿನ್‌ಲಾÂಂಡ್‌, ಆಫ್ರಿಕಾದ ಉತ್ತರದ ಪಶ್ಚಿಮಭಾಗ, ರಾಜಸ್ಥಾನಗಳಲ್ಲಿರುವ ಹಕ್ಕಿ ಚಿಕ್ಕದಾಗಿದೆ. ಅದರ ಚುಂಚು ಮತ್ತು ಕಾಲು ಕಂದು ಬಣ್ಣದ್ದು. ಉಳಿದೆಲ್ಲ ಕಪ್ಪುರೆಕ್ಕೆ ಬಿಳಿ ಕೊಕ್ಕರೆಯಂತೆ ಇರುವುದು. ನಡುಗಡ್ಡೆ ಪ್ರದೇಶಗಳಿಗೆ ಬೇಸಿಗೆಯಲ್ಲಿ ವಲಸೆ ಬರುವ ಕೊಕ್ಕರೆಗಳು ಕೆಂಪು ಕೊಕ್ಕು, ಕೆಂಪು ಕಾಲು, ಬಿಳಿ ತಲೆ, ಬಿಳಿರೆಕ್ಕೆ ಬುಡ ಇದೆ. ಕಣ್ಣಿನ ಸುತ್ತ ಕಪ್ಪುಚರ್ಮದಿಂದ ಕೂಡಿರುತ್ತದೆ. ಗಂಡು – ಹೆಣ್ಣು ಒಂದೇ ರೀತಿ ಇದ್ದರೂ ಸಹ, ಗಂಡು ಹಕ್ಕಿ ಗಾತ್ರದಲ್ಲಿ ಹೆಣ್ಣಿಗಿಂತ ದೊಡ್ಡದೆ. ಚಿಕ್ಕ ಮೀನು, ಕಪ್ಪೆ, ಶಂಖದ ಹುಳು, ಮೃದ್ವಂಗಿಗಳು, ಕೆಸರಿನ ಹುಳ,  ಹಾವು, ಮೊಲಗಳನ್ನು ಸಹ ತಿನ್ನುತ್ತದೆ. ಕೆಲವೊಮ್ಮೆ ಚಿಕ್ಕ ಹಕ್ಕಿಗಳನ್ನು ತಿಂದ ಉದಾಹರಣೆ ಇದೆ. ಇವು ಸಾಮಾನ್ಯವಾಗಿ ಜೋಡಿಯಾಗಿ ಬದುಕುತ್ತದೆ. 

ಒಂದು ಗುಂಪಿನಲ್ಲಿ 50 ಕ್ಕಿಂತ ಹೆಚ್ಚು ಹಕ್ಕಿಗ‌ಳಿರುವವು. ಕೆಲವೊಮ್ಮ ಗುಂಪಾಗಿ ಇದು ಇತರ ಕೊಕ್ಕರೆಯಂತೆ ಸುಮ್ಮನೆ ಕುಳಿತಿರುತ್ತವೆ. ಹತ್ತಿರ ಕಪ್ಪೆ ಇಲ್ಲವೇ ಮೀನು ಬಂದಾಗ ಕುತ್ತಿಗೆಯನ್ನು ಮುಂದೆ ಚಾಚಿತಟ್ಟನೆ ಹರಿತವಾದ ತನ್ನ ಕೊಕ್ಕಿನ ಸಹಾಯದಿಂದ ಅವುಗಳನ್ನು ಬೇಟೆಯಾಡುವುದು ಇದರ ವೈಶಿಷ್ಟ್ಯ.  ಗರಿಗಳಿಲ್ಲದ ಬೋಳಾದ ಕಾಲಿದೆ. ಕುತ್ತಿಗೆ ಕೆಳಗೆ ಮತ್ತು ಎದೆಯಲ್ಲಿ ಮರಿಮಾಡುವ ಸಮಯದಲ್ಲಿ ಗರಿ ಮೂಡುವುದು. ‘ಜುನಿಲ’ ತಳಿಗಳಲ್ಲಿ ಗರಿಗಳು ಮಸುಕಾಗಿರುತ್ತದೆ. ಪ್ರಬುದ್ಧಾವಸ್ಥೆ ತಲುಪಿದಂತೆ ಇದರ ಬಣ್ಣ ಬದಲಾಗುತ್ತದೆ. ಇದರಿಂದ ಹಕ್ಕಿ ಎಷ್ಟು ವಯಸ್ಸಿನದು ಎಂಬುದನ್ನು ತಿಳಿಯಬಹುದು.  ಕಪ್ಪುರೆಕ್ಕೆ ಬಿಳಿ ಕೊಕ್ಕರೆ ಮೌನಿಯಾಗಿರುವುದು. ಹೆಣ್ಣು ತನ್ನ ಭಾವನೆಗಳನ್ನು ಹಂಚಿಕೊಳ್ಳುವುದು, ಗೂಡು ನಿರ್ಮಿಸುವ ಪ್ರದೇಶ ಆರಿಸುವುದು, ಚುಂಚನ್ನು ತಿಕ್ಕುವುದು, ಕುತ್ತಿಗೆಯನ್ನು ಅಪ್ಪಿಕೊಳ್ಳುವುದು ಮೊದಲಾದ ಪ್ರಣಯ ಲೀಲೆಗಳನ್ನು ಪ್ರಕಟಿಸುತ್ತದೆ. ಜುವೆನಿಲಿಸ್‌ ತಳಿಯಲ್ಲಿ ಮಾತ್ರ ದನಿಯ ಭಿನ್ನತೆ ಇದೆ. ಸಿಳ್ಳಿನಂತಿರುವ ದನಿ ತೆಗೆಯುವುದು. ಕೆಲವೊಮ್ಮೆ ಕ್ರೋಕ್‌ಎಂದು ದನಿ ಹೊರಡಿಸುವುದು ಮತ್ತು ಮರಿಮಾಡುವ ಸಮಯದಲ್ಲಿ ಗಂಡು ಹೆಣ್ಣು ಚುಂಚನ್ನು ತಿಕ್ಕುತ್ತವೆ. ಪುರಾಣ ಕಥೆಗಳಲ್ಲಿ ಇವುಗಳ ಉಲ್ಲೇಖ ಇದೆ ಇದರಿಂದಾಗಿ ಇವು ಮಕ್ಕಳಿಗೆ ಅತಿಪರಿಚಿತ ಮತ್ತು ಪ್ರೀತಿಯ ಹಕ್ಕಿ ಎಂದರೆ ತಪ್ಪಾಗಲಾರದು. 

ಇದು ಒಂದೇ ಮರದಲಿ ಇಲ್ಲವೇ ಕಟ್ಟಡಗಳು, ವಿದ್ಯುತ್‌ ತಂತಿಯ ಕಂಬ ,ಕಲ್ಲುಬಂಡೆಯ ಕೊರಕಲು ಇತ್ಯಾದಿ ಜಾಗಗಳಲ್ಲಿ ಕಟ್ಟಿಗೆ ತುಂಡನ್ನು ಸೇರಿಸಿ, ಗುಡಿಸಲಾಕೃತಿ ನಿರ್ಮಿಸಿ, ಅದರ ಮಧ್ಯ ಮೊಟ್ಟೆ ಇಡುತ್ತದೆ. ಒಂದೇ ಸ್ಥಳದಲ್ಲಿ 7 ಕ್ಕಿಂತ ಹೆಚ್ಚು ಗೂಡು ನಿರ್ಮಿಸಿರುವುದು ಇದೆ. ಇದು ಸಾಮಾನ್ಯವಾಗಿ ಪಾಶ್ಚಾತ್ಯದೇಶದಲ್ಲೆ ಗೂಡುಕಟ್ಟಿ ಮರಿಮಾಡುವುದು ಹೆಚ್ಚು. ಯುರೋಪಿನ ಚಳಿಯಿಂದ ರಕ್ಷಣೆ ಹಾಗೂ ಆಹಾರಕ್ಕಾಗಿ ಬಹುದೂರ ವಲಸೆ ಹೋಗುವ ಹಕ್ಕಿ ಎಂದರೆ ತಪ್ಪಲ್ಲ. ಒಮ್ಮೆ ಪ್ರೀತಿಯಿಂದ ಒಂದಾದ ಹಕ್ಕಿ ವರ್ಷ ಪೂರ್ತಿ ಜೊತೆಯಲ್ಲೆ ಇರುತ್ತದೆಯ. ಇದು ಜೀವಮಾನ ಪೂರ್ತಿ ಅದೇ ಗಂಡು ಹಕ್ಕಿಯನ್ನು ಅನುಸರಿಸಿ ಇರುವುದೋ ಅಥವಾ ಕೇವಲ ಒಂದು ವರ್ಷ ಮಾತ್ರ ಒಟ್ಟಿಗಿದು ಇಂತರ ಬೇರೆ ಹಕ್ಕಿಯನ್ನು ತನ್ನ ಪ್ರಿಯತಮನನ್ನಾಗಿ ಆರಿಸುವುದೋ ತಿಳಿದಿಲ. ಈ ಕುರಿತುಅಧ್ಯಯನ ನಡೆಯಬೇಕಿದೆ. ಗೂಡುಕಟ್ಟುವಾಗ ಮತ್ತು ತನ್ನ ಪ್ರಿಯತಮೆಯನ್ನು ಒಲಿಸಿಕೊಳ್ಳುವಾಗ ಗಂಡು ತನ್ನ ಕುತ್ತಿಗೆಯ ಗರಿಯನ್ನು ಕುಣಿಸುವುದು ಮತ್ತು ತನ್ನ ಚುಂಚನ್ನು ಹೆಣ್ಣಿನ ಕುತ್ತಿಗೆಯ ಸುತ್ತುಚಾಚುತ್ತದೆ.

ಇದು ಬಿಳಿಬಣ್ಣದ 3-5 ಮೊಟ್ಟೆ ಇಡುತ್ತದೆ. 33 ರಿಂದ 34 ದಿನ ಕಾವು ಕೊಟ್ಟು ಮರಿಮಾಡುತ್ತವೆ. ಮರಿಗಳಿಗೆ ಅದರ ದೇಹ ತೂಕದ ಶೇ.60ರಷ್ಟು ಆಹಾರದ ಗುಟಕನ್ನು ಪ್ರತಿದಿನ ನೀಡುತ್ತವೆ. ಮರಿಯಾಗಿ 9 ವಾರ ಅಂದರೆ 63 ರಿಂದ 65 ದಿನಗಳಲ್ಲಿ ಮರಿಗಳು ಗೂಡು ಬಿಟ್ಟು ಹಾರಿಬಿಡುತ್ತವೆ. ಮತ್ತೆ 7 ರಿಂದ 20 ದಿನ ತಂದೆ ತಾಯಿ ಆರೈಕೆಯಲ್ಲಿ ಕಳೆಯುತ್ತದೆ. ಇದೊಂದು ಅತಿ ಶೇಷ ವಲಸೆ ಹಕ್ಕಿ.  ವಲಸೆ ಬಂದಾಗಿನ ಇವುಗಳ ಇರುನೆಲೆಗಳ ರಕ್ಷಣೆ ಅವಶ್ಯಕ. ಹಾಗಾದಲ್ಲಿ ಮಾತ್ರ ಇಂತಹ ಹಕ್ಕಿಗಳು ಮುಂದಿನ ಪೀಳಿಗೆ ಉಳಿದಾವು. 

Advertisement
Advertisement

Udayavani is now on Telegram. Click here to join our channel and stay updated with the latest news.

Next