Advertisement

Kerala Style Recipe ಆಹಾ ಎಂಥಾ ರುಚಿ! ಕೇರಳದ ಪ್ರಸಿದ್ಧ ಖಾದ್ಯ ‘ಏತಕ್ಕ ಅಪ್ಪಂ’

05:39 PM Jul 12, 2024 | Team Udayavani |

ನೇಂದ್ರ ಬಾಳೆಯನ್ನು ಸಾಮಾನ್ಯವಾಗಿ ಬಾಳೆಹಣ್ಣಿನ ರಾಜ ಎಂದು ಕರೆಯುತ್ತಾರೆ. ಇದು ಭಾರತದ ಕೇರಳದಲ್ಲಿ ಅತ್ಯಂತ ಜನಪ್ರಿಯ ಬಾಳೆಹಣ್ಣಾಗಿದೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ. ಈ ಬಾಳೆ ಹಣ್ಣು ತಿನ್ನುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ಸಹಾಯ ಮಾಡುವುದರ ಜೊತೆಗೆ, ಪೊಟ್ಯಾಷಿಯಂ,ವಿಟಮಿನ್‌ ಎ,ಬಿ6, ಖನಿಜಾಂಶ ಮತ್ತು ನಾರಿನಾಂಶ ಹೆಚ್ಚು ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.ಈ ಬಾಳೆ ಹಣ್ಣಿನಿಂದ  ಹಲವು ಬಗೆಯ ತಿಂಡಿ-ತಿನಿಸುಗಳನ್ನು ಮಾಡುತ್ತಾರೆ. ಉದಾಃ ಚಿಪ್ಸ್‌, ಜಾಮೂನ್‌, ಫ್ರೈ, ಪೋಡಿ(ಬಜ್ಜಿ) ಹೀಗೆ ಹತ್ತು ಹಲವು..

Advertisement

ಇಂದು ನಾವು ನಿಮಗಾಗಿ ಕೇರಳದ ಪ್ರಸಿದ್ಧ ಖಾದ್ಯವಾದ ‘ಏತಕ್ಕ ಅಪ್ಪಂ‘ ಹೇಗೆ ತಯಾರಿಸುವುದು ಎಂಬುದನ್ನು ತಿಳಿಸುತ್ತೇವೆ ಬನ್ನಿ…

ಏತಕ್ಕ ಅಪ್ಪಂ
ಬೇಕಾಗುವ ಸಾಮಗ್ರಿಗಳು
ನೇಂದ್ರ ಬಾಳೆಹಣ್ಣು-4, ಮೈದಾಹಿಟ್ಟು-1ಕಪ್‌, ಅಕ್ಕಿ ಹಿಟ್ಟು-2ಚಮಚ, ಜೀರಿಗೆ-ಅರ್ಧ ಟೀ ಸ್ಪೂನ್‌, ಕಪ್ಪು ಎಳ್ಳು-1ಚಮಚ, ಅರಿಶಿನ ಪುಡಿ-ಅರ್ಧ ಟೀ ಸ್ಪೂನ್‌, ಸಕ್ಕರೆ-2ಚಮಚ, ಕರಿಯಲು-ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.(ಮೈದಾ ಬದಲು ಗೋಧಿ ಹಿಟ್ಟು ಹಾಕಬಹುದು).

ತಯಾರಿಸುವ ವಿಧಾನ
ಮೊದಲಿಗೆ ನೇಂದ್ರ ಬಾಳೆ ಹಣ್ಣಿನ ಸಿಪ್ಪೆಯನ್ನು ತೆಗೆದು ಮಧ್ಯ ಭಾಗದಲ್ಲಿ ಕಟ್‌ ಮಾಡಿ ಉದ್ದನೆ ಸೀಳಿ ಇಟ್ಟುಕೊಳ್ಳಿ. ನಂತರ ಒಂದು ಬೌಲ್‌ಗೆ ಮೈದಾ, ಅಕ್ಕಿ ಹಿಟ್ಟು, ಜೀರಿಗೆ, ಕಪ್ಪು ಎಳ್ಳು, ಅರಿಶಿನ ಪುಡಿ, ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.(ಹಿಟ್ಟು ತುಂಬಾ ನೀರಾಗಬಾರದು).

ತದನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಹೆಚ್ಚಿಟ್ಟುಕೊಂಡ ನೇಂದ್ರ ಬಾಳೆ ಹಣ್ಣುನ್ನು ಮಾಡಿಟ್ಟ ಹಿಟ್ಟಿನ ಮಿಶ್ರಣಕ್ಕೆ ಮುಳುಗಿಸಿ ಎಣ್ಣೆಗೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಕರಿಯಿರಿ.

Advertisement

ಬಿಸಿ-ಬಿಸಿಯಾಗಿ ಟೇಸ್ಟಿಯಾದ ಏತಕ್ಕ ಅಪ್ಪಂ ನ್ನು ಟೀ, ಕಾಫಿ ಜೊತೆ ತಿನ್ನುತ್ತಿದ್ದರೆ ಸೂಪರ್ ಆಗಿರುತ್ತದೆ. ತಪ್ಪದೇ ಇಂದೇ ಟ್ರೈ ಮಾಡಿ ಹೇಗಿದೆ ಎಂದು ಕಾಮೆಂಟ್ ಮಾಡಿ.

-ಶ್ರೀರಾಮ್ ಜಿ. ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next