Advertisement

ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆ ಶೀಘ್ರ

08:09 PM Jan 01, 2022 | Team Udayavani |

ದಾವಣಗೆರೆ : ಅಖೀಲ ಭಾರತ ವಿಶ್ವಕರ್ಮ ಪರಿಷತ್ತಿನ ಗೌರವ ಉಪಾಧ್ಯಕ್ಷರನ್ನಾಗಿ ಮಾಜಿ ರಾಷ್ಟ್ರಪತಿ ಜೈಲ್‌ಸಿಂಗ್‌ ಅವರ ಮೊಮ್ಮಗ ಇಂದ್ರಜಿತ್‌ ಸಿಂಗ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಎಚ್‌.ವಿ. ಸತೀಶ್‌ ಕುಮಾರ್‌ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು,ರಾಷ್ಟ್ರಮಟ್ಟದಲ್ಲಿ ವಿಶ Ìಕರ್ಮ ಸಮಾಜವನ್ನು ಹೆಚ್ಚಿನ ಮಟ್ಟದಲ್ಲಿಸಂಘಟಿಸುವಉದ್ದೇಶದಿಂದ ಗೌರವ ಉಪಾಧ್ಯಕ್ಷರನ್ನಾಗಿ ಹರಿಯಾಣದ ರಾಮಚಂದ್ರ ಜಹಾಂಗೀರ್‌, ಹೀರಾಲಾಲ್‌ ವಿಶ್ವಕರ್ಮ ಮುಂತಾದವರನ್ನು ನೇಮಕ ಮಾಡಲಾಗಿದೆ. ಪರಿಷತ್ತು ಪ್ರಾರಂಭವಾದ ನಾಲ್ಕು ತಿಂಗಳಲ್ಲಿ 16 ರಾಜ್ಯಗಳ ಅಧ್ಯಕ್ಷರ ನೇಮಕ ಮಾಡಲಾಗಿದೆ ಎಂದರು.

Advertisement

ಅಖೀಲ ಭಾರತ ವಿಶ್ವ ಕರ್ಮಪರಿಷತ್ತಿನಿಂದ “ನಮ್ಮ ನಡಿಗೆ ಹಳ್ಳಿ ಕಡೆಗೆ’ ಕಾರ್ಯಕ್ರಮದ ಅಂಗವಾಗಿ ಚನ್ನಗಿರಿ ತಾಲೂಕಿನ ಗ್ರಾಮವೊಂದರಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಸಮಾಜ ಬಾಂಧವರ ಸ್ಥಿತಿಗತಿ, ಸರ್ಕಾರ, ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ದೊರೆತಿರುವ, ದೊರೆಯದಿರುವ ಸಾಲ ಮತ್ತಿತರ ಸವಲತ್ತುಗಳ ಬಗ್ಗೆ ಮಾಹಿತಿ ಪಡೆಯಲಾಗುವುದು. ಒಂದೊಮ್ಮೆ ಸೌಲಭ್ಯ ದೊರೆಯದಿದ್ದವರಿಗೆ ಪರಿಷತ್ತು ಕಡೆಯಿಂದ ಕೊಡಿಸುವ ವ್ಯವಸ್ಥೆ ಮಾಡಲಾಗುವುದು.

ಸಮಾಜದ ಕಡುಬಡವರ ಮನೆಯಲ್ಲಿ ವಾಸ್ತವ್ಯ ಮಾಡಲಾಗುವುದು. ಗ್ರಾಮ ವಾಸ್ತವ್ಯದ ನಂತರ ಚನ್ನಗಿರಿ ತಾಲೂಕು ಕಚೇರಿಯಲ್ಲಿನಡೆಯುವಜಕಣಾಚಾರಿ ಸ್ಮರಣೋತ್ಸವದಲ್ಲಿ ಭಾಗವಹಿಸ ಲಾಗುವುದು ಎಂದು ಹೇಳಿದರು. ಪ್ರತಿ ರಾಜ್ಯದಲ್ಲಿ ವಿಶ್ವಕರ್ಮ ಸಮಾಜದ ಪಂಚಕುಲ ಕಸುಬು ಉನ್ನತೀಕರಣಕ್ಕೆ ಅನುಕೂಲ ಆಗುವಂತೆ ತರಬೇತಿ ಕೇಂದ್ರ ಪ್ರಾರಂಭಿಸುವ ಚಿಂತನೆಇದೆ.

ದಾವಣಗೆರೆ ತಾಲೂಕಿನ ಮುದಹದಡಿ ಗ್ರಾಪಂ ವ್ಯಾಪ್ತಿಯಲ್ಲಿ 10 ಗುಂಟೆ ಜಾಗ ದೊರೆಯುವ ನಿರೀಕ್ಷೆಇದೆ.ಕೌಶಲ್ಯಾಭಿವೃದ್ಧಿತರಬೇತಿ ಕೇಂದ್ರ ಪ್ರಾರಂಭಿಸಿ ಶಿಲ್ಪ, ಬಾಗಿಲು ಇತರೆ ನಿರ್ಮಾಣದ ತರಬೇತಿ ನೀಡಲಾಗುವುದು. ಅಭಿವೃದ್ಧಿ ನಿಗಮದಿಂದ ಕಡಿಮೆ ಅನುದಾನ ನೀಡಲಾಗುತ್ತಿದೆ. ಪ್ರತಿ ಜಿಲ್ಲೆಗೆ10 ಲಕ್ಷ ರೂ.ಅನುದಾನನೀಡಿದರೆಎಲ್ಲರಿಗೂ ಸೌಲಭ್ಯ ಕೊಡಲಾಗುವುದಿಲ್ಲ. ಪರಿಷತ್ತಿನಿಂದಲೂ ಸೌಲಭ್ಯ, ತರಬೇತಿ ನೀಡುವ ಕೆಲಸ ಮಾಡಲಾಗುವುದು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿನ ಪ್ರಮುಖ ವೃತ್ತ, ರಸ್ತೆ ಅಮ ರಶಿಲ್ಪಿ ಜಕಣಾಚಾರಿಯವರ ಪ್ರತಿಮೆ ಇಟ್ಟು, ಹೆಸರಿಡಬೇಕು ಎಂದು ಒತ್ತಾಯಿಸಿ ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ವಿಶ್ವಕರ್ಮ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಇ. ಮೌನೇಶಾಚಾರ್‌, ಬಾವಿಹಾಳ್‌ ಎಸ್‌. ನಾಗರಾಜಾಚಾರ್‌, ಎಂ.ಪಿ. ರಮೇಶಾಚಾರ್‌, ಮಂಜುನಾಥಾಚಾರ್‌, ಸುರೇಶ್‌ ಆಚಾರ್‌, ಪಿ. ಮಹೇಂದ್ರಾಚಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next