Advertisement
ವಿಗ್ರಹ ಪ್ರತಿಷ್ಠಾಪನೆಗೆ ಎಂಟು ಲಕ್ಷ ರೂ. ಖರ್ಚಾಗಿದ್ದು, ಪೂರ್ಣ ವೆಚ್ಚವನ್ನು ಕುಲಪತಿ ಪ್ರೊ.ವೇಣುಗೋಪಾಲ್ ವೈಯಕ್ತಿಕವಾಗಿ ಭರಿಸಿದ್ದಾರೆ. ವಿಗ್ರಹಕ್ಕೆ ಎರಡೂವರೆ ಲಕ್ಷ ನೀಡಲಾಗಿದ್ದು, ವಿಗ್ರಹ ಪ್ರತಿಷ್ಠಾಪನಾ ಪೀಠ ಮತ್ತು ಗಾಜಿನ ಕವಚಕ್ಕೆ ಐದೂವರೆ ಲಕ್ಷ ಖರ್ಚಾಗಿದೆ ಎಂದು ಹೇಳಲಾಗಿದೆ. ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಶಿವರಾಜು, ಕೆಲ ಹಿರಿಯ ಪ್ರಾದ್ಯಾಪಕರು ಭಾಗವಹಿಸಿದ್ದರು.
Related Articles
Advertisement
ಬುದ್ಧ ಪ್ರತಿಮೆ ಎಲ್ಲಿದೆ?: ಆರು ತಿಂಗಳ ಹಿಂದೆ ಸರಸ್ವತಿ ವಿಗ್ರಹವಿದ್ದ ಸ್ಥಳ ಖಾಲಿಯಾಗುತಿದ್ದಂತೆ ಅಲ್ಲಿ ಕೂರಿಸಿದ ಬುದ್ಧನ ಪ್ರತಿಮೆ ಕೆಳ ಮಹಡಿಯಲ್ಲಿ ಧೂಳು ಹಿಡಿಯುತಿದೆ. ವಿವಿ ಆವರಣದಲ್ಲಿ ಹಾಲಿ ನಿರ್ಮಾಣವಾಗುತ್ತಿರುವ ಬುದ್ಧ ಧ್ಯಾನ ಕೇಂದ್ರದಲ್ಲಿ ಅದನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಲಾಗಿದೆ. ಧ್ಯಾನ ಮಂದಿರದ ನಿರ್ಮಾಣ ಮುಂದಿನ ವರ್ಷಕ್ಕೆ ಪೂರ್ಣಗೊಳ್ಳಲಿದೆ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದರು.
ಗೊಂದಲ ಸೃಷ್ಟಿ?: ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದ ಬೆಂಗಳೂರು ವಿಶವಿದ್ಯಾಲಯ ದೂರ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಸಿ.ಮೈಲಾರಪ್ಪಗೆ ಸದ್ದಿಲ್ಲದೆ ಸರಸ್ವತಿ ವಿಗ್ರಹ ಪ್ರತಿಷ್ಠಾಪನೆಯ ಉಸ್ತವಾರಿ ವಹಿಸಿರುವುದು ತಲ್ಲಣ ಮೂಡಿಸಿತ್ತು. ಆರು ತಿಂಗಳ ಹಿಂದೆ ಇದೇ ಮೈಲಾರಪ್ಪ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿವಿ ಆಡಳಿತ ಕಚೇರಿ ಎದುರು ಬುದ್ಧನ ವಿಗ್ರಹ ಪ್ರತಿಷ್ಠಾಪನೆಗೆ ಕಾರಣವಾಗಿದ್ದರು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಯಾವುದೇ ಗೊಂದಲವಿಲ್ಲದೆ ಸಿಬ್ಬಂದಿ ಸಹಕಾರದಿಂದ ಸರಸ್ವತಿ ಪ್ರತಿಮೆ ಪ್ರತಿಷ್ಠಾಪಿಸಿದ್ದೇವೆ. ಬುದ್ಧನ ಪ್ರತಿಮೆಯನ್ನು ಬುದ್ಧ ಧ್ಯಾನ ಕೇಂದ್ರದಲ್ಲಿ ಪ್ರತಿಷ್ಠಾಪಿಸಲು ಸಿದ್ಧತೆ ನಡೆಯುತ್ತಿದೆ. ಉನ್ನತ ಶಿಕ್ಷಣ ಪರಿಷತ್ ಆದೇಶದಂತೆ ಮೂಲ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ.-ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿವಿ ಕುಲಪತಿ