Advertisement

ಕೋಲಾರ ಬಳಿ ಐ ಫೋನ್‌ ತಯಾರಿಕಾ ಘಟಕ ಸ್ಥಾಪನೆ

12:03 PM Jul 25, 2018 | |

ಬೆಂಗಳೂರು: ಕೋಲಾರ-ಬೆಂಗಳೂರು ಮಧ್ಯೆ ಬರುವ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 3000 ಕೋಟಿ ರೂ. ಹೂಡಿಕೆ ಮಾಡಲು ತೈವಾನ್‌ನ ಮೆ: ವಿಸ್ಟ್ರನ್‌ ಟೆಕ್ನಾಲಜೀಸ್‌ ಕಂಪೆನಿ ಮುಂದೆ ಬಂದಿದೆ. ಐಫೋನ್‌ ತಯಾರಿಕಾ ಕ್ಷೇತ್ರದಲ್ಲಿ ಈ ಹೂಡಿಕೆ ಮಾಡಲಾಗುತ್ತಿದ್ದು, ಇದು ಐ ಫೋನ್‌ ತಯಾರಿಕೆ ಕುರಿತಂತೆ ದೇಶದಲ್ಲೇ ಅತಿ ದೊಡ್ಡ ಯೋಜನೆಯಾಗಿದೆ.

Advertisement

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ತೈವಾನ್‌ನ ಮೆ: ವಿಸ್ಟ್ರನ್‌ ಟೆಕ್ನಾಲಜೀಸ್‌ ಕಂಪನಿಯ ಪ್ರತಿನಿಧಿಗಳು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ತಮ್ಮ ಕಂಪೆನಿ ನಿರ್ಧರಿಸಿರುವಾಗಿ ಹೇಳಿತಲ್ಲದೆ, ಕೋಲಾರ ಜಿಲ್ಲೆ ನರಸಾಪುರದಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆಗೆ ತೀರ್ಮಾನಿಸಿರುವುದಾಗಿ ತಿಳಿಸಿದರು.

ನರಸಾಪುರದ ಸುಮಾರು 43 ಎಕರೆ ಸ್ಥಳದಲ್ಲಿ ಈ ಐಫೋನ್‌ ತಯಾರಿಕಾ ಕಂಪೆನಿ ಆರಂಭವಾಗಲಿದ್ದು, ಆರಂಭದಲ್ಲಿ 10,500 ಮಂದಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲಿದೆ. ಕಂಪನಿಯ ವಿಸ್ತರಣೆಯನ್ನೂ ರಾಜ್ಯದಲ್ಲಿಯೇ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸ್ಥಳದ ಅವಶ್ಯಕತೆಯಿದೆ  ಎಂದು ಕಂಪೆನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಗುರುರಾಜ್‌ ಅವರು ಈ ವೇಳೆ ಗಮನಕ್ಕೆ ತಂದರು.

ಕಂಪೆನಿ ನಿರ್ಧಾರ ಸ್ವಾಗತಿಸಿದ ಮುಖ್ಯಮಂತ್ರಿಗಳು, ಯೋಜನೆಯ ವಿಸ್ತರಣೆಗೆ ಅಗತ್ಯವಿರುವ ಸ್ಥಳದ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರಲ್ಲದೆ, ಸಂಸ್ಥೆಗೆ ವಿಶೇಷ ಉತ್ತೇಜನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಅಲ್ಲದೆ, ಮೊಬೈಲ… ಫೋನ್‌ ದುರಸ್ತಿ ಮತ್ತು ನವೀಕರಣ ತಂತ್ರಜ್ಞಾನಕ್ಕೂ ಹೆಚ್ಚಿನ ಬೇಡಿಕೆ ಇರುವುದರಿಂದ ಚಿಕ್ಕಬಳ್ಳಾಪುರದಲ್ಲಿ ಈ ನಿಟ್ಟಿನಲ್ಲಿ ತರಬೇತಿ ವ್ಯವಸ್ಥೆ ಕಲ್ಪಿಸಲು ಸಂಸ್ಥೆ ಗಮನಹರಿಸಬಹುದು ಎಂದು ಸಲಹೆ ಮಾಡಿದರು.

ನಂತರ ಮಾತನಾಡಿದ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಕಂಪೆನಿಯು ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚಿನ ನೀಡಲು ಒಪ್ಪಿದಲ್ಲಿ  7 ದಿನಗಳಲ್ಲಿ ಒಡಂಬಡಿಕೆಗೆ ಸಹಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next