Advertisement

ಜೈವಿಕ ನಿಯಂತ್ರಕ ಉತ್ಪಾದನಾ ಪ್ರಯೋಗಾಲಯ ಸ್ಥಾಪನೆ

05:58 PM Oct 10, 2020 | Suhan S |

ಚಿಕ್ಕಮಗಳೂರು: ರಾಸಾಯನಿಕ ಮುಕ್ತ ಕೃಷಿಗೆಉತ್ತೇಜನ ನೀಡುವ ಸಲುವಾಗಿ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ತಾಲೂಕಿನ ಬೀಕೆನಹಳ್ಳಿ ಗ್ರಾಮದಲ್ಲಿಬ್ಲೂಮ್‌ ಬಯೋಟೆಕ್‌ ಜೈವಿಕ ನಿಯಂತ್ರಕಗಳ ಉತ್ಪಾದನಾ ಪ್ರಯೋಗಾಲಯಸ್ಥಾಪಿಸಲಾಗಿದೆ. ಪ್ರಯೋಗಾಲಯದಲ್ಲಿಉತ್ಪಾದಿಸುವ ಉತ್ಕೃಷ್ಟ ಗುಣಮಟ್ಟದಜೈವಿಕ ಗೊಬ್ಬರ ರಾಜ್ಯಾದ್ಯಂತ ಪೂರೈಕೆ ಮಾಡಲಾಗುವುದು. ಜೈವಿಕ ಗೊಬ್ಬರ ಬಳಕೆಮಾಡುವ ಮೂಲಕ ರೈತರು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಯುವ ಉದ್ಯಮಿ ಸುಹಾಸ್‌ ಮೋಹನ್‌ ತಿಳಿಸಿದರು.

Advertisement

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ರೈತ ದೇಶದ ಬೆನ್ನೆಲುಬು. ಕೃಷಿ ಕ್ಷೇತ್ರದಲ್ಲಿ ರಾಸಾಯನಿಕಗಳ ಬಳಕೆ ಮಿತಿಮೀರಿದ್ದು, ಫಲವತ್ತಾದ ಭೂಮಿ ಬಂಜರಾಗುತ್ತಿದೆ. ರಾಸಾಯನಿಕಯುಕ್ತ ಗೊಬ್ಬರ ಹಾಗೂ ಕೀಟನಾಶಕಗಳಬಳಕೆಯಿಂದಾಗಿ ಮಣ್ಣಿನಲ್ಲಿರುವ ಜೀವಾಣುಗಳುನಾಶವಾಗುತ್ತಿವೆ. ಪರಿಣಾಮ ರೈತರು ಬೆಳೆದ ಬೆಳೆಗಳುವಿವಿಧ ರೋಗಗಳಿಗೆ ತುತ್ತಾಗಿ ಬೆಳೆ ನಷ್ಟವಾಗುತ್ತಿದೆ ಎಂದರು.

ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಬೆಳೆಗಳಿಗೆ ತಗಲುವ ರೋಗಗಳನ್ನು ಮಣ್ಣಿನಲ್ಲಿರುವಜೀವಾಣುಗಳನ್ನು ಹೆಚ್ಚಿಸುವ ಮೂಲಕಮಣ್ಣಿನ ಫಲವತ್ತತ್ತೆಯನ್ನು ಹೆಚ್ಚಿಸಬಹುದು.ಬ್ಲೂಮ್‌ ಬಯೋಟೆಕ್‌ ಈ ನಿಟ್ಟಿನಲ್ಲಿ ಮಹತ್ವದಹೆಜ್ಜೆ ಇಟ್ಟಿದ್ದು, ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಾಜ್ಞಾನದಮೂಲಕ ಮಣ್ಣಿನಲ್ಲಿರುವ ಜೀವಾಣುಗಳನ್ನುಪೋಷಿಸಿ ಅವುಗಳಿಂದಲೇ ಉತ್ಪನ್ನಗಳನ್ನು ತಯಾರಿಸಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಪೂರೈಕೆ ಮಾಡುತ್ತಿದೆ ಎಂದರು.

ಬ್ಲೂಮ್‌ ಬಯೋಟೆಕ್‌ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ 2019-20 ಯೋಜನೆಯಡಿ ಅನುಮೋದನೆಗೊಂಡಿದ್ದು, ಕರ್ನಾಟಕ ರಾಜ್ಯತೋಟಗಾರಿಕೆ ಇಲಾಖೆ ನಿರ್ದೇಶನದಂತೆನಿರ್ಮಾಣಗೊಂಡಿದೆ. ಅಲ್ಲದೇ ಭಾರತೀಯತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌)ಯೊಂದಿಗೆ ತಾಂತ್ರಿಕ ಒಪ್ಪಂದ ಮಾಡಿಕೊಂಡು ಜೈವಿಕ ಗೊಬ್ಬರವನ್ನು ಉತ್ಪಾದನೆ ಮಾಡಲಾಗುತ್ತಿದೆ. ಉತ್ಪನ್ನಗಳನ್ನು ರಾಜ್ಯಾದ್ಯಂತ ಅನೇಕ ಪ್ರಗತಿಪರ ಕೃಷಿಕರು ಕೃಷಿಗೆ ಬಳಸಿಕೊಂಡು ಸಾವಯವ ಕೃಷಿಯಲ್ಲಿ ತೊಡಗಿ ಅಧಿಕ ಲಾಭ ಗಳಿಸಿದ್ದಾರೆ ಎಂದರು.

ರೈತರು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸದೇ ಮಣ್ಣಿನಲ್ಲಿರುವ ಜೀವಾಣುಗಳಿಂದಲೇತಯಾರಿಸಿದ ಗೊಬ್ಬರ, ಕೀಟನಾಶಕಗಳನ್ನು ಬಳಸಿದ್ದಲ್ಲಿ ಕೃಷಿ ಭೂಮಿ ಫಲವತ್ತಾಗುತ್ತದೆ.ಆರೋಗ್ಯಕರ ಮಣ್ಣಿನಿಂದ ಆರೋಗ್ಯವಂತ ಸಮಾಜನಿರ್ಮಾಣ ಸಾಧ್ಯ. ರೈತರ ಆದಾಯ ಹೆಚ್ಚಳ ಹಾಗೂ ರೋಗಮುಕ್ತ ಬೆಳೆ ಬೆಳೆಯಲು ಜೀವಾಣುಗೊಬ್ಬರ ಅತ್ಯಂತ ಸಹಕಾರಿಯಾಗಿದ್ದು, ಕಾಫಿ, ಅ‌ಕೆ, ಏಲಕ್ಕಿ, ಕಾಳು ಮೆಣಸು ಸೇರಿದಂತೆ ಎಲ್ಲ ರೀತಿಯ ತರಕಾರಿ, ಹಣ್ಣು ಹಂಪಲು, ಹೂವಿನ ಬೆಳೆಗೆ ಜೀವಾಣು ಗೊಬ್ಬರ ಹಾಗೂ ಕೀಟನಾಶಕಗಳನ್ನುಸದ್ಯ ಉತ್ಪಾದಿಸಲಾಗುತ್ತಿದ್ದು, ಮದ್ಯವರ್ತಿಗಳಿಲ್ಲದೇ ನೇರವಾಗಿ ರೈತರಿಗೆ ಮಾರಾಟ ಮಾಡಲಾಗುವುದು ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next