Advertisement

ಅಸ್ಸಾಂನಲ್ಲಿ ಸ್ಥಾಪನೆಯಾಗುತ್ತಿದೆ ನಿರಾಶ್ರಿತರ ಬೃಹತ್‌ ಶಿಬಿರ

01:19 AM Sep 13, 2019 | mahesh |

ಗುವಾಹಟಿ: ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯಲ್ಲಿ 19 ಲಕ್ಷ ಜನರನ್ನು ಹೊರಗಿಟ್ಟಿರುವ ಹಿನ್ನೆಲೆಯಲ್ಲಿ, ವಿದೇಶೀಯರು ಎಂದು ಪರಿಗಣಿಸಲ್ಪಟ್ಟ ಜನರಿಗಾಗಿ ನಿರಾಶ್ರಿತ ಶಿಬಿರವನ್ನು ಅಸ್ಸಾಂನಲ್ಲಿ ನಿರ್ಮಿಸಲಾಗುತ್ತಿದೆ. 2.5 ಹೆಕ್ಟೇರ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಈ ನಿರಾಶ್ರಿತ ಶಿಬಿರ 7 ಫ‌ುಟ್ಬಾಲ್ ಮೈದಾನಗಳಷ್ಟು ದೊಡ್ಡದಾಗಿದ್ದು, 3 ಸಾವಿರ ಜನರು ಉಳಿದುಕೊಳ್ಳಬಹುದಾಗಿದೆ. 15 ಮಹಡಿಯ ಕಟ್ಟಡವೊಂದನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈ ವರ್ಷದ ಡಿಸೆಂಬರ್‌ ಒಳಗೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುತ್ತದೆ.

Advertisement

ಇಲ್ಲಿ ಆಸ್ಪತ್ರೆ, ಆಡಿಟೋರಿಯಂ, ಅಡುಗೆ ಮನೆ, 180 ಶೌಚಾಲಯ ಇರಲಿದೆ. ನಿರಾಶ್ರಿತ ಕೇಂದ್ರದ ಹೊರಗೆ ಶಾಲೆ ಕೂಡ ಇರಲಿದೆ. 20 ಅಡಿ ಎತ್ತರದ ಬೃಹತ್‌ ಗೋಡೆಯನ್ನೂ ಹೊರ ಪ್ರಾಕಾರವಾಗಿ ನಿರ್ಮಿಸಲಾಗುತ್ತಿದೆ. ಆದರೆ ಇದು ಜೈಲಿನಂತೆ ಇರುವುದಿಲ್ಲ. ಒಂದೊಂದು ಕೋಣೆಯಲ್ಲೂ ಐದು ಜನರು ವಾಸಿಸಬಹುದಾದಷ್ಟು ವಿಶಾಲವಾಗಿರುತ್ತದೆ. ಹಾಸ್ಟೆಲ್ ರೀತಿಯ ರೂಮ್‌ ಇದಾಗಿರುತ್ತದೆ. ಬಾಗಿಲು ಹಾಗೂ ಬೆಳಕಿನ ವ್ಯವಸ್ಥೆ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next