Advertisement

ಮಾಹಿತಿ ಆಯೋಗ ಪೀಠ ಸ್ಥಾಪಿಸಿ

09:18 AM Jul 08, 2020 | Suhan S |

ಕಲಬುರಗಿ: ಕಲಬುರಗಿ ಕೇಂದ್ರ ಸ್ಥಾನದಲ್ಲಿ ಮಾಹಿತಿ ಆಯೋಗದ ಪೀಠ ಸ್ಥಾಪಿಸುವಂತೆ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಸಂಘದ ಅಧ್ಯಕ್ಷ ಭೀಮನಗೌಡ ಪರಗೊಂಡ ಹಾಗೂ ಕಾರ್ಯದರ್ಶಿ ರಮೇಶ ಭೀಮಸಿಂಗ್‌ ಮನವಿ ಸಲ್ಲಿಸಿದರು.

Advertisement

ಬೆಳಗಾವಿ ಹಾಗೂ ಕಲಬುರಗಿಯಲ್ಲಿ ಮಾಹಿತಿ ಆಯೋಗ ಪೀಠ ಸ್ಥಾಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಬೆಳಗಾವಿ ವಿಭಾಗೀಯಕೇಂದ್ರದಲ್ಲಿ ಮಾಹಿತಿ ಆಯೋಗದ ಪೀಠಕ್ಕೆ ಎಸ್‌ಎಂಟಿ ಬಿ.ಬಿ. ಗೀತಾ ಅವರನ್ನು ಮಾಹಿತಿ ಆಯುಕ್ತರೆಂದು ನಿಯುಕ್ತಿ ಮಾಡಿ ಸುವರ್ಣಸೌಧದಲ್ಲಿ ಕಾರ್ಯಾರಂಭ ಮಾಡಿ ತಿಂಗಳಾಗಿದೆ. ಆದರೆ ಕಲಬುರಗಿಯಲ್ಲಿ ಆರಂಭ ಕುರಿತಾಗಿ ಯಾವುದೇ ಸಿದ್ಧತೆಗಳಿಲ್ಲ. ಈಗಲಾದರೂ ಪೀಠ ಕಾರ್ಯಾರಂಭಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈಗಲಾದರೂ ಎಚ್ಚೆತ್ತುಕೊಂಡು ಕಲಬುರಗಿ ನಗರದಲ್ಲಿ ಮಾಹಿತಿ ಆಯೋಗದ ನ್ಯಾಯ ಪೀಠ ರಚಿಸಬೇಕು. ಇಲ್ಲವಾದಲ್ಲಿ ವಿರೋಧಿ ಧೋರಣೆ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next