Advertisement

ರಕ್ಷಣಾ ಕಾರಿಡಾರ್‌ ಸ್ಥಾಪನೆ : ಪಿಎಂ ಮೋದಿ 

12:12 PM Feb 22, 2018 | Team Udayavani |

ಲಕ್ನೋ: ಉತ್ತರಪ್ರದೇಶದ ಅತ್ಯಂತ ಹಿಂದು ಳಿದ ಪ್ರದೇಶಗಳಲ್ಲಿ ಒಂದಾದ ಬುಂದೇಲ್‌ಖಂಡ್‌ನ‌ಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್‌ ಸ್ಥಾಪಿಸಿ, ಅದರ ಮೂಲಕ ಈ ಪ್ರದೇಶವನ್ನು ಅಭಿವೃದ್ಧಿಯ ಪಥದತ್ತ ಒಯ್ಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

Advertisement

ಬುಧವಾರ ಲಕ್ನೋದಲ್ಲಿ ನಡೆದ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಈ ವಿಚಾರ ತಿಳಿಸಿದ್ದಾರೆ. “ಬಜೆಟ್‌ನಲ್ಲಿ ಘೋಷಿಸಲಾಗಿರುವ 2 ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳ ಪೈಕಿ ಒಂದನ್ನು ಬುಂದೇಲ್‌ಖಂಡ್‌ನ‌ಲ್ಲಿ ಸ್ಥಾಪಿಸಲಾಗುವುದು. 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುವುದು. ಇದರಿಂದಾಗಿ 2.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ಮೋದಿ ತಿಳಿಸಿದ್ದಾರೆ. ಇದೇ ವೇಳೆ ಸಿಎಂ ಯೋಗಿ ಆದಿತ್ಯನಾಥ್‌ರನ್ನು ಶ್ಲಾ ಸಿದ ಅವರು, ಯೋಗಿ ಸರಕಾರವು ಈ ಹಿಂದೆ ರಾಜ್ಯಕ್ಕಿದ್ದ ನೆಗೆಟಿವ್‌ ಇಮೇಜ್‌ ಅನ್ನು ಬದಲಿಸಿದರು ಎಂದು ಹೇಳಿದ್ದಾರೆ. ಖುಷಿನಗರದ ಜೇವಾರ್‌ನಲ್ಲಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಬಗ್ಗೆಯೂ ಪ್ರಧಾನಿ ಘೋಷಿಸಿದ್ದಾರೆ. 

ಶಾಸಕ ದುರ್ಮರಣ: ಈ ನಡುವೆ, ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲೆಂದು ಬರುತ್ತಿದ್ದ ಬಿಜೆಪಿ ಶಾಸಕ ಲೋಕೇಂದ್ರ ಸಿಂಗ್‌ ಅಪಘಾತದಲ್ಲಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಅವರು ಸಂಚರಿಸುತ್ತಿದ್ದ ಕಾರು ಕಮಲಾಪುರದಲ್ಲಿ ಚಾಲಕನ ನಿಯಂ ತ್ರಣ ತಪ್ಪಿ ಟ್ರಕ್‌ಗೆ ಢಿಕ್ಕಿಯಾಗಿ ಅಪಘಾತ ಸಂಭವಿಸಿತು. ಈ ವೇಳೆ ಅವರ ಜತೆಗಿದ್ದ ಇತರೆ ಮೂವರೂ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next