Advertisement

ಗಡಿಯಲ್ಲಿ ತಪಾಸಣಾ ತನಿಖೆ ಠಾಣೆ ಸ್ಥಾಪಿಸಿ

02:38 PM Jan 18, 2022 | Team Udayavani |

ಮಾನ್ವಿ: ತಾಲೂಕಿನಲ್ಲಿ ಒಮಿಕ್ರಾನ್‌ ಬರುವ ಸಾಧ್ಯತೆ ಇರುವುದರಿಂದ ಪೊಲೀಸ್‌ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ತಾಲೂಕಿನ ಗಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಲ್ಲೂರು, ಪೋತ್ನಾಳ್‌, ಗಿಲ್ಲೇಸುಗೂರು, ರಾಜಲಬಂಡಗಳಲ್ಲಿ ಸಿರವಾರ ತಾಲೂಕಿನ ಗಡಿಯಲ್ಲಿ ಕೋವಿಡ್‌ ತಪಾಸಣಾ ತನಿಖೆ ಠಾಣೆಗಳನ್ನು ಸ್ಥಾಪಿಸಿ ನಿಗಾವಹಿಸಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಕೋವಿಡ್‌-19 ನಿರ್ವಹಣ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಗಡಿಗಳನ್ನು ಹೊಂದಿರುವ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಂಗಳೂರಿಗೆ ದುಡಿಯಲು ಹೋಗಿ ವಾಪಾಸು ಬರುವ ವಲಸಿಗರ ಮೇಲೆ ನಿಗಾವಹಿಸಿ ಕೋವಿಡ್‌ ಪರೀಕ್ಷೆಗಳನ್ನು ನಡೆಸುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಿ ಲಸಿಕೆ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವಗೆಂಕಟೇಶ ಗುಡಾಳ್‌ ರವರಿಗೆ ಸೂಚಿಸಿದರು. ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್‌ ಜನರೇಟರ್‌ ಪ್ಲಾಂಟ್‌ಅನ್ನು ಒಂದು ವಾರದೊಳಗಾಗಿ ನೀಡುವುದಾಗಿ ಜಿಪಂ ಸಿಇಒ ಭರವಸೆ ನೀಡಿದ್ದು, ತಾಲೂಕಿಗೆ ಅಗತ್ಯ ಆಮ್ಲಜನಕವನ್ನು ನಾವೇ ಉತ್ಪಾದಿಸಿಕೊಳ್ಳಲು ಅನುಕೂಲವಾಗುತ್ತದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಸುರಕ್ಷಾ ಉಪಕರಣ ನೀಡುವಂತೆ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಶೇಖರಯ್ಯ ಸ್ವಾಮಿ ಮಾತನಾಡಿ, ತಾಲೂಕಿನಲ್ಲಿ 47 ಸಕ್ರಿಯ ಪ್ರಕರಣಗಳ ವರದಿಯಾಗಿದ್ದು, ಕೋವಿಡ್‌ ಸೋಂಕಿತರನ್ನು ಪತ್ತೆ ಹಚ್ಚಲು ಪ್ರತಿದಿನ 4 ನೂರು ಜನರ ಸ್ವಾಬ್‌ ಪರೀಕ್ಷೆ ನಡೆಸಲಾಗುತ್ತಿದೆ. ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್‌ ಆರೈಕೆ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ 30 ಆಕ್ಸಿಜನ್‌ ಸಹಿತ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಪ್ರಭಾರಿ ತಹಶೀಲ್ದಾರ್‌ ಅಬ್ದುಲ್‌ ವಾಹಿದ್‌ ಮತ್ತು ತಾಪಂ ಸಿಇಒ ಸ್ಟೇಲಾ ವರ್ಗೀಸ್‌ ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next