Advertisement

ಉತ್ತರ ಕರ್ನಾಟಕ ಕಲಾವಿದರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ

01:04 PM Nov 29, 2020 | Adarsha |

ಕೂಡಲಸಂಗಮ: ಉತ್ತರ ಕರ್ನಾಟಕ ಕಲಾವಿದರ ಸಮಸ್ಯೆಯ ನಿವಾರಣೆಗಾಗಿ ಸರ್ಕಾರ ಕಲಾವಿದರ ಪ್ರತ್ಯೇಕ ನಿಗಮ ಮಾಡಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

Advertisement

ಅಖೀಲ ಕರ್ನಾಟಕ ಹವ್ಯಾಸಿ ರಂಗಭೂಮಿ ಮತ್ತು ಸರ್ವ ಜನಪದ ಕಲಾವಿದರ ಸಂಘ, ಅಖೀಲ ಕರ್ನಾಟಕ ಕಲಾವಿದರ ಹಿತರಕ್ಷಣಾ ಒಕ್ಕೂಟ, ಬಾಗಲಕೋಟೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದಲ್ಲಿ ನಡೆದ ಕರ್ನಾಟಕ ಜಾನಪದ ಸಾಂಸ್ಕೃತಿಕ ಕಲಾ ವೈಭವ ಹಾಗೂ ಬಸವ ಜ್ಯೋತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ದಿಂದ ಕಲಾವಿದರ ಬದುಕು ಬಹಳ ಸಂಕಷ್ಟದಲ್ಲಿದ್ದು, ಸರ್ಕಾರ ಸಹಾಯ ಧನ ನೀಡುವ ಕಾರ್ಯ ಮಾಡಬೇಕು. ಉತ್ತರ ಕರ್ನಾಟಕದ ಕಲಾವಿದರನ್ನು ಗುರುತಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಕಲಾವಿದರಿಗೆ ಕೊಡುತ್ತಿರುವ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದರು.

ಇದನ್ನೂ ಓದಿ:ಸಿಡ್ನಿಯಲ್ಲಿ ಮತ್ತೆ ಸಿಡಿದ ಆಸೀಸ್ : ಸ್ಮಿತ್ ಶತಕದಾಟ: ಕೊಹ್ಲಿ ಪಡೆಗೆ ಬೃಹತ್ ಗುರಿ

ಕನ್ನಡ ಅಭಿವೃದ್ಧಿ ಪ್ರಾ ಧಿಕಾರದ ಮಾಜಿ ನಿರ್ದೇಶಕ ಮಹಾಂತೇಶ ಹಟ್ಟಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ಸಮಪರ್ಕಕ ಸೌಲಭ್ಯ ದೊರೆಯುತ್ತಿಲ್ಲ. ಉತ್ತರ ಕರ್ನಾಟಕ ಕಲಾವಿದರ ಅಭಿವೃದ್ಧಿಗಾಗಿ ಸರ್ಕಾರ ಉತ್ತರ ಕರ್ನಾಟಕ ಕಲಾವಿದರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಕಳೆದ 6 ತಿಂಗಳಿಂದ ಸರ್ಕಾರ ಕೋವಿಡ್‌ ನೆಪದಲ್ಲಿ ಕಲಾವಿದರಿಗೆ ಮಾಸಾಸನವನ್ನು ನೀಡಿಲ್ಲ. ಕೂಡಲೇ ನೀಡಬೇಕು ಎಂದರು. ಅತಿಥಿಯಾಗಿ ಅಖೀಲ ಕರ್ನಾಟಕ ಹವ್ಯಾಸಿ ರಂಗಭೂಮಿ ಮತು ಸರ್ವ ಜಾನಪದ ಕಲಾವಿದರ ಸಂಘದ ಗೌರವಾಧ್ಯೆಕ್ಷ ಸಿದ್ದಣ್ಣ ಬಾಡಗಿ ಮಾತನಾಡಿ ಜನಪದ ಕಲೆ, ಕಲಾವಿದರನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದರು.

ಸಮಾರಂಭದಲ್ಲಿ ಹುನಗುಂದ ತಾಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗರಾಜ ನಾಡಗೌಡ, ಕರ್ನಾಟಕ ವಚನ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಮಹಾಂತೇಶ ಗಜೇಂದ್ರಗಡ, ಹುನಗುಂದ ಎಪಿಎಂಸಿ ಅಧ್ಯಕ್ಷ ಹಿರಿಯಣ್ಣ ಕರಡಿ, ಸಿದ್ದಣ್ಣ ಬಾಡಗಿ, ಪರಪ್ಪ ಬರಗಲ್ಲ, ರಾಯಪ್ಪ ದಡ್ಡಿಮನಿ ಮುಂತಾದವರು ಇದ್ದರು, ಸಮಾರಂಭದಲ್ಲಿ 65 ಕಲಾವಿದರಿಗೆ ಬಸವ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next