Advertisement

ಇಸೂಜು ಕಾರ್‌ ಬಂತಲ್ಲ ಸಾರ್‌

04:00 AM Oct 29, 2018 | |

ಆಧುನಿಕ ಕುಟುಂಬ ವರ್ಗದವರನ್ನೇ ಗುರಿಯಾಗಿಸಿಕೊಂಡು ಇಸೂಜು ಕಂಪನಿಯು ಈಗ ಎಂಯು-ಎಕ್ಸ್‌ ಸಿಗ್ನೇಚರ್‌ನ ಎಸ್‌ಯುವಿ ಶ್ರೇಣಿಯ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತನ್ನದೇ ಸ್ಟೈಲ್‌ ಮತ್ತು ವಿನ್ಯಾಸಗಳೊಂದಿಗೆ ಹಲವು ವೈಶಿಷ್ಟéಗಳನ್ನು ಹೊಂದಿರುವ ಕಾರು ಮಾರುಕಟ್ಟೆಯ ಹೊಸ ಆಕರ್ಷಣೆಯಾಗಿದೆ. 

Advertisement

ಎಸ್‌ಯುವಿ ವಾಹನಗಳಿಗೆ ಸ್ಪರ್ಧೆಯೊಡ್ಡಲು ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಜಪಾನ್‌ ಮೂಲದ ಇಸೂಜು ಕಂಪನಿ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನೂತನ ಶೈಲಿಯ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. 

ಹೊರಾಂಗಣ ಮತ್ತು ಒಳಾಂಗಣದಲ್ಲಿ ಹೆಚ್ಚು ವೈಶಿಷ್ಟಗಳನ್ನು ಒಳಗೊಂಡಿರುವ ಈ ವಾಹನದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅದರಂತೆ 6 ಏರ್‌ಬ್ಯಾಗ್‌ಗಳು ಮತ್ತು ಹಿಲ್‌ ಡೀಸೆಂಟ್‌ ಕಂಟ್ರೋಲ್‌(ಎಚ್‌ಡಿಸಿ) ಹೊಂದಿರುವುದು ವಿಶೇಷವಾಗಿದೆ. ಇದರೊಂದಿಗೆ ಹೆಚ್ಚು ಸ್ಥಳಾವಕಾಶ ನೀಡಿರುವುದರಿಂದ ಇಡೀ ಕುಟುಂಬ ಆರಾಮದಾಯಕವಾಗಿ ಪ್ರಯಾಣ ಬೆಳಸಬಹುದಾಗಿದೆ. 

ಒಟ್ಟಾರೆ ಹೊಸ ಪೀಳಿಗೆಯ ಖರೀದಿದಾರರನ್ನು ಆಕರ್ಷಿಸುವ, ರಸ್ತೆಯಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗುವಂತಹ ಹೊಸ ಸ್ಟೈಲ್‌, ಪವರ್‌ ಮತ್ತು ವಾಹನವನ್ನು ಬಯಸುವವರಿಗೆ ಈ ಎಂಯು-ಎಕ್ಸ್‌ ಹೇಳಿ ಮಾಡಿಸಿದಂತಹ ವಾಹನವಾಗಿದೆ. ಈ ವಿಶೇಷ ಕಾರಣಗಳಿಂದಲೇ ನಿಮ್ಮ ಉತ್ಪನ್ನವು  ಭಾರತೀಯ ಎಸ್‌ಯುವಿ ಖರೀದಿದಾರರ ಮನ ಗೆಲ್ಲಲಿದೆ ಎಂಬುದು ಸಂಸ್ಥೆಯ ಅಧಿಕಾರಿಗಳ ಆತ್ಮವಿಶ್ವಾಸದ ಮಾತು. 

ಇಸೂಜು ಎಂಯು ವಿನ್ಯಾಸ: ವಿನ್ಯಾಸದಲ್ಲಿ ಎಂಯು ಕಾರು ಇತರೆ ಎಸ್‌ಯುವಿ ಸೆಗ್ಮೆಂಟ್‌ನ ಮಾದರಿಗಿಂತಲೂ ಬೇರೆಯದೇ ಆದ ಔಟ್‌ಲುಕ್‌ ಹೊಂದಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಗರುಡ ಮಾದರಿಯ ವಿನ್ಯಾಸವಿರುವುದರಿಂದ ನ್ಪೋರ್ಟ್ಸ್ ಕಾರುಗಳಂತೆ ಅತ್ಯಾಕರ್ಷಕವಾಗಿ ಕಾಣುತ್ತದೆ. ಇನ್ನು ವಿನ್ಯಾಸಕ್ಕೆ ಕಟ್ಟುಬಿದ್ದು, ಕಾರಿನ ಉದ್ದವನ್ನು ನಾಲ್ಕು ಮೀಟರ್‌ ಮೀರದಂತೆ ವಿನ್ಯಾಸಗೊಳಿಸಲಾಗಿದ್ದು, 230 ಎಂ.ಎಂ ಗ್ರೌಂಡ್‌ ಕ್ಲಿಯರೆನ್ಸ್‌ ಹೊಂದಿರುವುದು ಕಾರಿನ ವಿಶೇಷ.

Advertisement

ಈ ಎಸ್‌ಯುವಿಯು 18 ಇಂಚುಗಳ ಮಲ್ಟಿ-ನ್ಪೋಕ್‌ ಟ್ವಿಸ್ಟ್‌ ಡಿಸೈನ್‌ ಡೈಮಂಡ್‌ ಕಟ್‌ ಅನ್ನು ಒಳಗೊಂಡಿರುವುದರಿಂದ ಹೆಚ್ಚು ನ್ಪೋರ್ಟಿ ಎನಿಸುತ್ತದೆ. ಈ ಕಾರ್‌ನ ಒಳಾಂಗಣ ವಿನ್ಯಾಸ ಪ್ರಯಾಣಿಕರಿಗೆ ಹೆಚ್ಚು ಖುಷಿ ನೀಡಲಿದೆ. ಕ್ವಿಲ್ಟ್-ಪ್ಯಾಟರ್ನ್ನ ಲೆದರ್‌ ಸೀಟುಗಳು, ಸಾಫ್ಟ್-ಟಚ್‌ ಪೆನಲ್‌ಗ‌ಳೊಂದಿಗೆ ಪ್ರೀಮಿಯಂ ಫಿನಿಶ್‌ನ ಆಕರ್ಷಕ ಡ್ಯಾಶ್‌ಬೋರ್ಡ್‌, ಬ್ರೆ„ಟ್‌ ಸಿಲ್ವರ್‌-ಫಿನಿಶ್‌ ಸೆಂಟರ್‌ ಕ್ಲಸ್ಟರ್‌ ಮತ್ತು ಕ್ರೋಮ್‌ ಫಿನಿಶ್‌ ವೆಂಟ್‌ ನಾಬ್‌ಗಳು ವಾಹನದ ಅಂದವನ್ನು ಹೆಚ್ಚಿಸಿವೆ. 

ಲಾವಾ ಬ್ಲ್ಯಾಕ್‌ ಪ್ರೀಮಿಯಂ ಇಂಟೀರಿಯರ್‌ಗಳನ್ನು ಹೊಂದಿದ್ದು, 7 ಮಂದಿ ಪ್ರಯಾಣಿಕರು ಪ್ರಯಾಣಿಸಲು ಸಾಕಾಗುವಷ್ಟು ಜಾಗ ಹೊಂದಿರುವ ಈ ಎಸ್‌ಯುವಿ, ಭಾರತದ ಫ‌ುಲ್‌ಸೈಜ್‌, ಪ್ರೀಮಿಯಂ ಎಸ್‌ಯುವಿ ಆಗಿದೆ. 

ಎಂಜಿನ್‌ ಸಾಮರ್ಥ್ಯ: 3.0 ಲೀಟರ್‌ ಇಂಜಿನ್‌ ಸಾಮರ್ಥ್ಯ ಹೊಂದಿರುವ ಈ ಕಾರು 4ಜೆಜೆ1 ಡೀಸೆಲ್‌ ಎಂಜಿನ್‌ ಅನ್ನು ಒಳಗೊಂಡಿದೆ. ಇದು 177 ಪಿಎಸ್‌, ಗರಿಷ್ಠ ಮಟ್ಟದ ಅಂದರೆ 390 ಎನ್‌ಎಂ ಟಾರ್ಕ್‌ ಅನ್ನು ನೀಡಲಿದೆ. ಎಂಥಹುದೇ ಘಟ್ಟ ಪ್ರದೇಶಗಳಲ್ಲೂ ಸಲೀಸಾಗಿ ಮುನ್ನುಗ್ಗಬಲ್ಲದು.

ಇದರಲ್ಲಿ 5-ಸ್ಪೀಡ್‌ ಸೀಕ್ವೆನ್ಷಿಯಲ್‌ ಶಿಫ್ಟ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಇದೆ. ಶಿಫ್ಟ್-ಆನ್‌-ದಿ-ಫ್ಲೈ ಇರಲಿದ್ದು, ಆಫ್-ರೋಡಿಂಗ್‌ ಸಾಮರ್ಥ್ಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಲವಾರು ವೈಶಿಷ್ಟ್ಯಗಳೊಂದಿಗೆ ಸಂಪೂರ್ಣವಾದ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದ್ದು, ಚಾಲಕರಿಗೆ ವಾಹನ ಚಲಾಯಿಸುವಾಗ ಹೆಚ್ಚು ಖುಷಿಯ ಅನುಭವವಾಗಲಿದೆ. 

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next