Advertisement
ಜಿಲ್ಲೆಯಲ್ಲಿ ಕ್ಲಸ್ಟರ್ ಸಹಿತ 449 ಶಾಲೆಗಳು ಮತ್ತು ಕ್ಲಸ್ಟರ್ ರಹಿತ 309 ಶಾಲೆಗಳು ಸೇರಿದಂತೆ 758 ಶಾಲೆಗಳಿದ್ದು, ಒಟ್ಟು 42,761 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಕಲಬುರಗಿ ದಕ್ಷಿಣ ಮತ್ತು ಉತ್ತರ ಶೈಕ್ಷಣಿಕ ವಲಯ ಸೇರಿದಂತೆ ಜಿಲ್ಲಾದ್ಯಂತ 133 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲಿದ್ದಾರೆ.
Related Articles
Advertisement
22 ಸೂಕ್ಷ್ಮ-ಅತಿ ಸೂಕ್ಷ್ಮ ಕೇಂದ್ರ: ಜಿಲ್ಲಾದ್ಯಂತ 17 ಸೂಕ್ಷ್ಮ ಮತ್ತು 5 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ. ಇದರಲ್ಲಿ ಕಲಬುರಗಿ (ದ), ಜೇವರ್ಗಿ, ಸೇಡಂನಲ್ಲಿ ತಲಾ 4, ಕಲಬುರಗಿ (ಉ), ಅಫಜಲಪುರದಲ್ಲಿ ತಲಾ ಎರಡು ಹಾಗೂ ಆಳಂದದಲ್ಲಿ 1 ಸೂಕ್ಷ್ಮಕೇಂದ್ರವನ್ನು ಗುರುತಿಸಲಾಗಿದೆ. ಅದೇ ರೀತಿ ಕಲಬುರಗಿ (ದ) 3 ಮತ್ತು ಆಳಂದದಲ್ಲಿ ಎರಡು ಪರೀಕ್ಷಾ ಕೇಂದ್ರಗಳನ್ನು ಅತಿ ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ.
ನಿಷೇಧಾಜ್ಞೆ ಜಾರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಶಾಂತಿಯುತ ಮತ್ತು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಜಿಲ್ಲಾದ್ಯಂತ ಎಲ್ಲ 133 ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಬೇರೆ ವ್ಯಕ್ತಿಗಳು ಮೊಬೈಲ್, ಬ್ಲೂಟೂತ್ ಹಾಗೂ ವೈರಲೆಸ್ ಸೆಟ್, ಇಲೆಕ್ಟ್ರಾನಿಕ್ ವಸ್ತುಗಳ ಉಪಯೋಗಕ್ಕೆ ನಿಷೇಧ ವಿಧಿಸಲಾಗಿದೆ. ಅಲ್ಲದೇ, ಝೆರಾಕ್ಸ್ ಮತ್ತು ಬುಕ್ ಸ್ಟಾಲ್‌ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಶಹಬಾದಶಹಾಬಾದ: ತಾಲೂಕಿನ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಗುರುವಾರ ನಡೆಯಲಿದ್ದು, ಬುಧವಾರ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನಗರದ ಪರೀಕ್ಷಾ ಕೇಂದ್ರಗಳಾದ ಗಂಗಮ್ಮ ಶಾಲೆಯಲ್ಲಿ 279 ವಿದ್ಯಾರ್ಥಿಗಳು, ಬಾಲವಿದ್ಯಾ ಮಂದಿರ ಶಾಲೆಯಲ್ಲಿ 328 ವಿದ್ಯಾರ್ಥಿಗಳು, ಎಮ್‌ಸಿಸಿ ಶಾಲೆಯಲ್ಲಿ 326 ವಿದ್ಯಾರ್ಥಿಗಳು ಹಾಗೂ ಭಂಕೂರಿನ ಸರಕಾರಿ ಪ್ರೌಢಶಾಲೆಯಲ್ಲಿ 315 ವಿದ್ಯಾರ್ಥಿಗಳು ಸೇರಿದಂತೆ ಹೋಬಳಿ ವಲಯದಲ್ಲಿ ಸುಮಾರು 1248 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಸುಗಮವಾಗಿ ಹಾಗೂ ನಕಲು ಮತ್ತು ಇನ್ನಿತರ ಅವ್ಯವಹಾರ ತಡೆಗಟ್ಟಲು ಪ್ರತಿ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೇ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸ್ಥಾನಿಕ ಜಾಗೃತ ದಳ ನೇಮಿಸಲಾಗಿ¨ ಚಿಂಚೋಳಿಯಲ್ಲಿ ನಕಲು ತಡೆಗೆ ಬಿಗಿ ಭದ್ರತೆ
ಚಿಂಚೋಳಿ: 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲೂಕಿನ ಸರಕಾರಿ ಪ್ರೌಢಶಾಲೆ ಮತ್ತು ಅನುದಾನಿತ ಪ್ರೌಢಶಾಲೆ ಸೇರಿದಂತೆ ಒಟ್ಟು 51 ಪ್ರೌಢ ಶಾಲೆಗಳಿಂದ 3046 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಬಿಇಒ ನಿಂಗಪ್ಪ ಸಿಂಪಿ ತಿಳಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 1455ವಿದ್ಯಾರ್ಥಿಗಳು, 1591 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ. ತಾಲೂಕಿನ ಸರಕಾರಿ ಬಾಲಕರ ಪ್ರೌಢಶಾಲೆ ಚಂದಾಪುರ ಕೇಂದ್ರದಲ್ಲಿ 825 ವಿದ್ಯಾರ್ಥಿಗಳು, ಕನ್ಯಾ ಪ್ರೌಢಶಾಲೆ ಚಿಂಚೋಳಿ ಪರೀಕ್ಷಾ ಕೇಂದ್ರದಲ್ಲಿ 825, ಸರಕಾರಿ ಪ್ರೌಢಶಾಲೆ ಐನೋಳಿ 241 ವಿದ್ಯಾರ್ಥಿಗಳು, ಸರಕಾರಿ ಪ್ರೌಢಶಾಲೆ ಚಿಮ್ಮನಚೋಡ 491 ವಿದ್ಯಾರ್ಥಿಗಳು,ಸರಕಾರಿ ಪ್ರೌಢಶಾಲೆ ಚಂದನಕೇರಾ 491 ವಿದ್ಯಾರ್ಥಿಗಳು, ಸರಕಾರಿ ಬಾಲಕರ ಪ್ರೌಢಶಾಲೆ ಸುಲೇಪೇಟ 891, ಬಿ.ಬಿ. ಸಜ್ಜನಶೆಟ್ಟಿ ಅನುದಾನಿತ ಪ್ರೌಢಶಾಲೆ ಸುಲೇಪೇಟ 893, ಸರಕಾರಿ ಪ್ರೌಢಶಾಲೆ ರಟಕಲ್ 323 ಸೇರಿದಂತೆ ಒಟ್ಟು 3046 ಪರೀಕ್ಷಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ನಕಲು ನಡೆಯದಂತೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷಾರ್ಥಿಗಳು ಉತ್ತರ ಬರೆಯುವುದಕ್ಕಾಗಿ ಡೆಸ್ಕ ವ್ಯವಸ್ಥೆ ಕುಡಿಯುವ ನೀರು ಅನುಕೂಲ ಮಾಡಲಾಗಿದೆ. ಪರೀಕ್ಷೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ ಎಂದು ಹೇಳಿದರು. ಅಫಜಲಪುರದಲ್ಲಿ ಪರೀಕ್ಷೆಗೆ ಸಜ್ಜು
ಅಫಜಲಪುರ: ದ್ವಿತೀಯ ಪಿಯು ಪರೀಕ್ಷೆ ಯಶಸ್ವಿಯಾಗಿ ಮುಗಿದ ಬಳಿಕ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗುತ್ತಿವೆ. ತಾಲೂಕಿನ ಗೊಬ್ಬೂರ(ಬಿ), ರೇವೂರ(ಬಿ), ಬಂದರವಾಡ, ದೇವಲ ಗಾಣಗಾಪುರ, ಸ್ಟೇಷನ್ ಗಾಣಗಾಪುರ, ಅತನೂರ, ಬಂಕಲಗಾ, ಕರ್ಜಗಿ, ಮಣೂರ ಹಾಗೂ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಮತ್ತು ಮಹಾಂತಮ್ಮ ಪಾಟೀಲ ಪ್ರೌಢ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಒಟ್ಟು 3031 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಈ ಪೈಕಿ 1695 ಗಂಡು, 1336 ಹೆಣ್ಣು ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. 11 ಪರೀಕ್ಷಾ ಕೇಂದ್ರಗಳ 178 ಕೊಠಡಿಗಳ ಪೈಕಿ 100 ಕೊಠಡಿಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. 11 ಮುಖ್ಯ ಅಧೀಕ್ಷಕರು, 2 ಉಪ ಅಧೀಕ್ಷಕರು, 11 ಪ್ರಶ್ನೆ ಪತ್ರಿಕೆ ಮಾರ್ಗಾಧಿಕಾರಿಗಳು, 11 ಸ್ಥಳೀಯ ಜಾಗೃತದಳ, 194 ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ.