Advertisement

ಉತ್ತಮ ಆಹಾರ ನಿಯಮ ಅವಶ್ಯ: ಡಾ|ಪಂಕಜಾ

08:17 PM Oct 29, 2021 | Team Udayavani |

ಹುಬ್ಬಳ್ಳಿ: ಪ್ರತಿಯೊಬ್ಬರು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಉತ್ತಮವಾಗಿರಿಸಿಕೊಳ್ಳಬೇಕು. ನಿಯಮಿತ ಆಹಾರ ಸೇವನಾ ಕ್ರಮ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಭಾಗ್ಯ ಹೊಂದಬೇಕೆಂದು ತಜ್ಞ ವೈದ್ಯೆ ಡಾ| ಪಂಕಜಾ ಬ್ಯಾಕೋಡಿ ಹೇಳಿದರು.

Advertisement

ನವನಗರದ ಚಿಕ್ಕೇನಕೊಪ್ಪ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಧಾರವಾಡದ ವಿವೇಕ ಜಾಗೃತ ಬಳಗ ಮತ್ತು ಅಮರಗೋಳದ ಅಶ್ವಮೇಧ ಪಾರ್ಕ್‌ ಹಿರಿಯ ನಾಗರಿಕರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಚಿಂತನ ಶಿಬಿರದಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಕುರಿತು ಅವರು ಉಪನ್ಯಾಸ ನೀಡಿದರು.

ಪ್ರತಿಯೊಬ್ಬರು ದೈಹಿಕ ಶ್ರಮದೊಂದಿಗೆ ಯೋಗ ಮತ್ತು ಪ್ರಾಣಾಯಾಮ ರೂಢಿಸಿಕೊಳ್ಳಬೇಕು. ದೈನಂದಿನ ಜೀವನದಲ್ಲಿ ಉದ್ವೇಗಗಳಿಂದ ಹಲವಾರು ಕಾಯಿಲೆಗಳು ಬರುತ್ತಿದ್ದು, ಅವುಗಳನ್ನು ಎದುರಿಸಲು ತಜ್ಞರ ಮಾರ್ಗದರ್ಶನದಲ್ಲಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳುವುದರೊಂದಿಗೆ ದೇವರ ನಾಮಸ್ಮರಣೆ ಮತ್ತು ಅಧ್ಯಾತ್ಮಿಕತೆ ರೂಢಿಸಿಕೊಳ್ಳಬೇಕು. ಒಳ್ಳೆಯ ಗ್ರಂಥಗಳನ್ನು ಓದುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದರು.

ಲೆಫ್ಟಿನೆಂಟ್‌ ಕರ್ನಲ್‌ ಪುಂಡಲಿಕಪ್ಪ ಮೇದಾರ ಮತ್ತು ಪ್ರಾಧ್ಯಾಪಕ ಪ್ರೊ| ಎಸ್‌.ಎಸ್‌. ಮೊಟೆಬೆನ್ನೂರ ಅವರು ವಿವೇಕ ಜಾಗೃತ ಬಳಗದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ನಿವೃತ್ತ ಗ್ರಂಥಪಾಲಕ ಬಿ.ಎಸ್‌. ಮಾಳವಾಡ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳ ಕುರಿತು ಮಾತನಾಡಿದರು.

ಎಸ್‌.ಎನ್‌. ಛಬ್ಬಿ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ 29ನೇ ವಾರ್ಡ್‌ನ ನೂತನ ಸದಸ್ಯ ಮಂಜುನಾಥ ಬುರ್ಲಿ ಮತ್ತು ವಿದ್ಯಾರ್ಥಿನಿ ಅಂಕಿತಾ ಎಂ. ಹುಂಡೇಕರ ಅವರನ್ನು ಗೌರವಿಸಲಾಯಿತು. ಸ್ವಾಮಿ ವಿವೇಕಾನಂದರ ಕುರಿತಾದ ಗ್ರಂಥಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಛಾಯಾ ಶಿಂಧೆ ಸ್ವಾಗತಿಸಿದರು. ಎಂ.ವೈ. ಜಯಪ್ಪನವರ ಪರಿಚಯಿಸಿದರು. ಶಿಲ್ಪಾ ಎಂ. ಸೋಮವಾರ ನಿರೂಪಿಸಿದರು. ಕಲ್ಲಪ್ಪ ಮರದಣ್ಣವರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next