Advertisement

ಕಂಟೈನ್ಮೆಂಟ್‌ ವಲಯಗಳಲ್ಲಿ ಅಗತ್ಯ ಸೇವೆ

06:11 AM Jul 08, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಂಟೈನ್ಮೆಂಟ್‌ ವಲಯಗಳಲ್ಲಿ ಆಹಾರ ಪೂರೈಕೆ ಹಾಗೂ ಮುಂಜಾಗ್ರತಾ ಕ್ರಮ ವಹಿಸುವ ಸಂಬಂಧ ಸಾರ್ವಜನಿಕ ಆದೇಶ ಹೊರಡಿಸಿರುವ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌,  ಆದೇಶದ ಪಾಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‌ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ.

Advertisement

ಈ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್‌ ಝೋನ್‌ಗಳು ಕೂಡ ಹೆಚ್ಚಾಗುತ್ತಿವೆ. ಹೀಗಾಗಿ, ಈ  ಝೋನ್‌ಗಳಲ್ಲಿರುವ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಸರಿಯಾದ ಸ್ಪಂದನೆ ಸಿಗದಿದ್ದರೆ ಬಿಬಿಎಂಪಿ ಸಹಾಯವಾಣಿ: 080- 22660000 ಅಥವಾ 94806 85888ಗೆ ಕರೆ ಮಾಡಿ ದೂರು  ನೀಡಬಹುದಾಗಿದೆ.

ಕಂಟೈನ್ಮೆಂಟ್‌ ಝೋನ್‌ಗಳಿಗೆ ಸೂಚಿಸಿರುವ ಕ್ರಮ
* ನೀರಿನ ಸಮಸ್ಯೆ ಇದ್ದಲ್ಲಿ ಜಲಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಪಡಿಸಬೇಕು.

* ಪ್ರತಿ ಮನೆಗೂ ಅಗತ್ಯ ವಸ್ತುಗಳು ಪೂರೈಸುವುದು. ಈ ಭಾಗದಲ್ಲಿ ಬಡವರಿದ್ದರೆ, ಉಚಿತ ಆಹಾರದ ಕಿಟ್‌ಗಳನ್ನು ಪಾಲಿಕೆ ನೀಡಲಿದೆ.

* ಈ ನಿರ್ದಿಷ್ಟ ಭಾಗದಲ್ಲಿ ಆಹಾರದ ಕಿಟ್‌ ಹಾಗೂ ಪಡಿತರ ಚೀಟಿ ಅಡಿ ನೀಡುವ ಆಹಾರವನ್ನು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು. ಪಡಿತರಚೀಟಿ ಇರುವವರ ಮನೆ ಬಾಗಿಲಿಗೇ ಆಹಾರ ಪೂರೈಸತಕ್ಕದ್ದು.

Advertisement

* ಸೋಂಕು ದೃಢಪಟ್ಟ ಪ್ರದೇಶದಲ್ಲಿ ಗರ್ಭಿಣಿಯರು, ಮಧುಮೇಹ, ಉಸಿರಾಟದ ಸಮಸ್ಯೆ ಸೇರಿದಂತೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಇದ್ದರೆ ಆಯಾ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಸಹಕಾರ ನೀಡುವುದು ಮತ್ತು  ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ನೆರವು ಪಡೆದುಕೊಳ್ಳಬೇಕು.

* ಇವುಗಳ ಮೇಲುಸ್ತುವಾರಿಯನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಲಾಗಿರುವ ಕಮಾಂಡರ್‌ ನೋಡಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next