ಜಮಖಂಡಿ: ಜುಲೈ 19 ಹಾಗೂ 22ರಂದು ನಡೆಯಲಿರುವ ಎಸ್‌ಎಸ್ ಎಲ್‌ಸಿ ಪರೀಕ್ಷೆಗೆ ರಬಕವಿ-ಬನಹಟ್ಟಿ ಮತ್ತು ಜಮಖಂಡಿ ತಾಲೂಕಿನ 8422 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನ್ಯಾಮಗೌಡ ಹೇಳಿದರು.
ನಗರದ ಸರಕಾರಿ ಪಿ.ಬಿ. ಹೈಸ್ಕೂಲ್ ಸಭಾಭವನದಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಪರೀûಾ ಕೊಠಡಿಗಳ ಮೇಲ್ವಿಚಾರಕರ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಅವಳಿ ತಾಲೂಕಿನಲ್ಲಿ 44 ಪರೀûಾ ಕೊಠಡಿಗಳಿದ್ದು, ಒಂದು ಕೊಠಡಿಯಲ್ಲಿ ಕೇವಲ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸ್ಥಳಾವಕಾಶ ಮಾಡಲಾಗಿದೆ. ನಕಲು ಮುಕ್ತ ಪರೀಕ್ಷೆ ನಡೆಸಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. 19ರಂದು ನಡೆಯಲಿರುವ ಪರೀಕ್ಷೆಗೆ ಮೂರು ಗಂಟೆಯಲ್ಲಿ ಗಣಿತ, ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಪರೀಕ್ಷೆ ನಡೆಯಲಿದೆ. 22ರಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾದರೆ ಉತ್ತೀರ್ಣರಾಗಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಇದ್ದಲ್ಲಿ ಅವರಿಗೆ ಪ್ರತ್ಯೇಕವಾಗಿ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ವೈದ್ಯರೇ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕೆಲಸ ಮಾಡಲಿದ್ದಾರೆ ಎಂದರು.
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಒಂದು ವಿಷಯಕ್ಕೆ 40 ಅಂಕ ನಿಗದಿ ಮಾಡಿದೆ. ಒಂದು ವಿಷಯದಲ್ಲಿ ಒಂದು ಪ್ರಶ್ನೆಗೆ ಒಂದು ಉತ್ತರ ಆಯ್ಕೆ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ 40 ಪ್ರಶ್ನೆ ನೀಡಲಾಗಿದೆ. ಮೂರು ಗಂಟೆ ಅವ ಧಿಯಲ್ಲಿ ಮೂರು ವಿಷಯದಲ್ಲಿ ಯಾವುದೇ ವಿಷಯದ ಉತ್ತರ ಬರೆಯಲು ಅವಕಾಶವಿದೆ. ಈ ಸಲದ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಹೆಸರು, ಪರೀûಾ ಸಂಖ್ಯೆ ಸಹಿತ ಅಗತ್ಯ ಮಾಹಿತಿ ಇರುವ ಉತ್ತರಪತ್ರಿಕೆ ಲಭ್ಯವಾಗಿದ್ದು, ಉತ್ತರಪತ್ರಿಕೆಯಲ್ಲಿ ವಿದ್ಯಾರ್ಥಿ ಮತ್ತು ಕೊಠಡಿ ಮೇಲ್ವಿಚಾರಕ ಸಹಿ ಕಡ್ಡಾಯವಾಗಿದೆ. ಶಿಕ್ಷಣ ಇಲಾಖೆಯಿಂದ ಕೊರೊನಾ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಒಂದು ಸಲ ಮಾತ್ರ ಮಾಸ್ಕ್ ವಿತರಿಸಲಾಗುವುದು ಎಂದರು.
ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಶಾಲೆಗಳಿದ್ದ 126 ವಿದ್ಯಾರ್ಥಿಗಳು ನಮ್ಮ ಅವಳಿ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಅವಳಿ ತಾಲೂಕಿನಲ್ಲಿ 44 ಪರೀಕ್ಷಾ ಕೇಂದ್ರಗಳಿರುವ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾ ಗುವುದಿಲ್ಲ. 44 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಪರೀಕ್ಷಾ ಕೊಠಡಿಗಳಲ್ಲಿ ಗಾಳಿ, ಬೆಳಕು, ಕುಡಿಯುವ ನೀರಿನ ವ್ಯವಸ್ಥೆ ಸಹಿತ ಮೂಲಭೂತ ಸೌಕರ್ಯ ಮಾಡಲಾಗಿದೆ. ಪರೀಕ್ಷೆ ಸುರಕ್ಷಿತವಾಗಿ ನಡೆಸಲು ಶಿಕ್ಷಣ ಇಲಾಖೆ 1550 ಸಿಬ್ಬಂದಿ ನೇಮಕ ಮಾಡಲಾಗಿದೆ. ಆಗಸ್ಟ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭಗೊಳ್ಳಲಿವೆ ಎಂದರು. ಉಪಪ್ರಾಚಾರ್ಯ ಎನ್.ಬಿ. ಬಿರಾದಾರ, ಶಿಕ್ಷಕರಾದ ಜಿ.ಕೆ.ಮಠ, ರವೀಂದ್ರ ಸಂಪಗಾವಿ, ಅಣ್ಣಪ್ಪ ಚೌಗಲೆ ಸಹಿತ ಹಲವರು ಇದ್ದರು.