Advertisement

ಅಡಿಕೆ ಇಳುವರಿಗೆ ಅಗತ್ಯ ಪೋಷಕಾಂಶಗಳು

11:10 PM Sep 07, 2019 | Sriram |

ಕೃಷಿಗೆ ಪೋಷಕಾಂಶದ ನಿರ್ವಹಣೆ ಮಹತ್ವದ್ದು. ಸೂಕ್ತ ಸಮಯದಲ್ಲಿ ಇವುಗಳು ಮಣ್ಣಿಗೆ ದೊರೆತರೆ ಅದು ಬೆಳೆಗೆ ಪೂರಕ. ಹೆಚ್ಚು ಇಳುವರಿ ಬರಲಿ ಎಂದು ಅಧಿಕ ಪೋಷಕಾಂಶ ನೀಡಿದರೆ ಅದು ನೀರಿನಲ್ಲಿ ಕರಗಿ ಹರಿದುಹೋಗುತ್ತದೆ ಇಲ್ಲವೇ ಗಾಳಿಯಲ್ಲಿ ಆವಿಯಾಗಿ ಒಟ್ಟಾರೆ ವ್ಯರ್ಥವಾಗುತ್ತದೆ. ಇಲ್ಲಿ ಅಡಿಕೆ ಇಳುವರಿ ಹೆಚ್ಚಳಕ್ಕೆ ಯಾವ ರೀತಿಯ ಪೋಷಕಾಂಶಗಳು ಮಹತ್ವವಾಗಿವೆ ಎಂದು ವಿವರಿಸಲಾಗಿದೆ.

Advertisement

ಅಡಿಕೆ ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಇದನ್ನು ಸಾಂಪ್ರದಾಯಿಕ ಪ್ರದೇಶದ ಬೆಳೆಗಾರರೂ ಅಲ್ಲದೆ ಅಸಾಂಪ್ರದಾಯಿಕ ಪ್ರದೇಶಗಳಲ್ಲೂ ಬೆಳೆಸುವವರು ಹೆಚ್ಚುತ್ತಿದ್ದಾರೆ. ಇದಕ್ಕೆ ಹೊಸ ಪ್ರದೇಶ ಅದರಲ್ಲೂ ಫ‌ಲವತ್ತತೆ ಕಡಿಮೆ ಇರುವ ಪ್ರದೇಶ ಸೇರ್ಪಡೆಗೊಳ್ಳುತ್ತಿರುವ ಕಾರಣ ಅಲ್ಲಿ ನಮ್ಮ ಸಾಂಪ್ರದಾಯಿಕ ಎನ್‌ಪಿಕೆ ಗೊಬ್ಬರಗಳನ್ನು ಪೂರೈಕೆ ಮಾಡಿದರೆ ಸಾಕಾಗುವುದಿಲ್ಲ. ಹೆಚ್ಚು ಬೆಳೆ ತೆಗೆಯುವಾಗ ಮಣ್ಣಿನ ಪೋಷಕಾಂಶಗಳು ಅತ್ಯಧಿಕ ಪ್ರಮಾಣದಲ್ಲಿ ಉಪಯೋಗವಾಗುವ ಕಾರಣ ಕೆಲವು ಪೋಷಕಾಂಶಗಳ ಕೊರತೆ ಉಂಟಾಗುವುದು ಸಹಜ. ಅತ್ಯಧಿಕ ಇಳುವರಿ ಪಡೆಯುವಾಗ ಅದಕ್ಕೆ ಸಮನಾಗಿ ಗೊಬ್ಬರವ‌ನ್ನು ಒದಗಿಸುತ್ತಲೇ ಇರಬೇಕಾಗುತ್ತದೆ.

ಇಳುವರಿ ಹೆಚ್ಚಳ ವಿಧಾನ
ಸಾಮಾನ್ಯವಾಗಿ ನಾವು ಎನ್‌ಪಿಕೆ ಗೊಬ್ಬರವ‌ನ್ನು ವರ್ಷವೂ ಬಳಕೆ ಮಾಡುತ್ತೇವೆ. ಇದು ಪ್ರಧಾನ ಪೋಷಕಾಂಶವಾಗಿದ್ದು ಇದಷ್ಟೇ ನಾವು ಪಡೆಯಲಿಚ್ಛಿಸುವ ಫ‌ಸಲಿಗೆ ಸಾಕಾಗುವುದಿಲ್ಲ ಎಂಬುದು ಕೆಲವು ರೈತರ ಅನುಭವವಾಗಿದೆ. ಈ ಗೊಬ್ಬರದ ಜತೆಗೆ ಇತರ ಪೋಷಕಾಂಶಗಳನ್ನು ಬಳಕೆ ಮಾಡುವುದರಿಂದ ಇಳುವರಿಯಲ್ಲಿ ಹೆಚ್ಚಳ ನಿರೀಕ್ಷಿಸಬಹುದಾಗಿದೆ.

ಫ‌ಸಲಿನಲ್ಲಿ ವ್ಯತ್ಯಯ
ದ್ವಿತೀಯ ಪೋಷಕಾಂಶ, ಸೂಕ್ಷ್ಮ ಪೋಷಕಾಂಶದ ಬಳಕೆ ಮಾಡುವ ಬಗ್ಗೆ ಹೆಚ್ಚಿನ ಅಡಿಕೆ ಬೆಳೆಗಾರರಿಗೆ ತಿಳಿದಿರುವುದಿಲ್ಲ. ಇದರಿಂದ ಒಂದು ವರ್ಷ ಉತ್ತಮ ಫ‌ಸಲು ಅನಂತರ ವರ್ಷ ಫ‌ಸಲು ಕಡಿಮೆ ಹೀಗೆ ವ್ಯತ್ಯಾಸವಾಗುತ್ತದೆ. ಬೆಳೆಗಳಿಗೆ ಪ್ರಧಾನವಾಗಿ ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವುದು ಇಂಗಾಲ, ಆಮ್ಲಜನಕ ಮತ್ತು ಜಲಜನಕ. ಇದನ್ನು ಪ್ರಕೃತಿ ಉಚಿತವಾಗಿ ನೀಡುತ್ತದೆ. ಇದಕ್ಕೆ ಕೃಷಿಕರು ಸಮರ್ಪಕ ಬಸಿದು ಹೋಗುವ ಕಾಲುವೆ ಮಾಡಿ ಬೇರುಗಳಿಗೆ ಉಸಿರಾಟಕ್ಕೆ ಅನುಕೂಲ ಮಾಡಿಕೊಡಬೇಕು. ನೀರಿನ ಕೊರತೆ ಸಂದರ್ಭ ನೀರಾವರಿ ಮಾಡಿ ಸಲಹಬೇಕು. ಉಳಿದಂತೆ ದ್ವಿತೀಯ ಪೋಷಕಾಂಶ, ಸೂಕ್ಷ್ಮ ಪೋಷಕಾಂಶಗಳನ್ನು ನಾವು ಯಾವುದಾದರೊಂದು ಮೂಲದಲ್ಲಿ ಒದಗಿಸಿಕೊಡಬೇಕು.

ಅಡಿಕೆ ಬೆಳೆಯುವ ರೈತರು ದ್ವಿತೀಯ ಪೋಷಕಾಂಶಗಳಾಗಿ ಬಳಸಬೇಕಾದುದು ಸುಣ್ಣ, ಮೆಗ್ನೆಶಿಯಂ ಮತ್ತು ಗಂಧಕ. ಇವು ಪ್ರಧಾನ ಪೋಷಕಾಂಶಗಳಷ್ಟು ಪ್ರಮಾಣದಲ್ಲಿ ಬೇಕಿಲ್ಲವಾದರೂ ಆವಶ್ಯಕವಾಗಿವೆ. ಕೆಲವು ರಾಸಾಯನಿಕ ಗೊಬ್ಬರಗಳಲ್ಲಿ ಸುಣ್ಣದ ಅಂಶ, ಗಂಧಕ ಅಥವಾ ಮೆಗ್ನಿàಶಿಯಂ ಒಳಗೊಂಡಿದ್ದರೆ ನಾವು ಬಳಕೆ ಮಾಡದೆಯೂ ಅದು ಸಸ್ಯಗಳಿಗೆ ಪೂರೈಕೆಯಾಗಬಹುದು. ಇದಿಲ್ಲದಿದ್ದರೆ ಅದನ್ನು ಕೂಡಲೇ ನೀಡಬೇಕು.

Advertisement

ಎನ್‌ಪಿಕೆ ಅಂದರೇನು?
ಎನ್‌ಪಿಕೆ ಸಸ್ಯದ ಬೆಳವಣಿಗೆಯ ಪ್ರಧಾನ ಪೋಷಕಾಂಶ. ಎನ್‌-ನೈಟ್ರೋಜನ್‌ ಅಂದರೆ ಸಾರಜನಕ (ಯೂರಿಯಾ). ಸಾರಜನಕ ನೀಡಿದರೆ ಗಿಡ ಎತ್ತರ, ಸದೃಢವಾಗಿ ಬೆಳೆಯುತ್ತದೆ. ಪಿ-ಪಾಸ್ಪರಸ್‌ ಅಂದರೆ ರಂಜಕ. ಇದು ಬೇರಿನ ಬೆಳವಣಿಗೆಗೆ ಉತ್ತಮ. ಕಾಳುಕಟ್ಟಲು ಸಹಕಾರಿ. ಕೆ ಎಂದರೆ ಪೊಟ್ಯಾಶಿಯಂ. ಇದರಿಂದ ಪೈರಿಗೆ ರೋಗ ನಿರೋಧಕ ಶಕ್ತಿ ಬರುತ್ತದೆ.

ದ್ವಿತೀಯ ಪೋಷಕಾಂಶ
ಕ್ಯಾಲ್ಸಿಯಂ (ಕೋಶ ವಿಭಜನೆಗೆ ಪೂರಕ), ಮೆಗ್ನೇಶಿಯಂ (ಪತ್ರ ಹರಿತ್ತು, ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಪೂರಕ), ಸಲ#ರ್‌ ( ಎಣ್ಣೆ ಅಂಶ ಜಾಸ್ತಿಯಾಗಲು ಕಾರಣ).

ಕಿರು ಪೋಷಕಾಂಶಗಳು
ಕಬ್ಬಿಣ, ಸತು, ಬೋರಾನ್‌,ಕ್ಲೋರಿನ್‌, ಮಾಲಿಬಿxನಂ, ಸಿಲಿಕಾ, ತಾಮ್ರ ಇವು ಕಿರು ಪೋಷಕಾಂಶಗಳು. ಈ ಪೈಕಿ ಕೆಲವು ಜಾಸ್ತಿ ಇರಬೇಕು. ಇನ್ನು ಕೆಲವು ಗ್ರಾಂಗಳಲ್ಲಿ ಸಾಕಾಗುತ್ತದೆ. ಆರೋಗ್ಯವಂತ ಮಣ್ಣಿನಲ್ಲಿ ಮಾತ್ರ ಸೂಕ್ಷ್ಮಾಣುಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ.

ಸುಣ್ಣದಿಂದ ಸಸ್ಯದ ಬೆಳವಣಿಗೆ ವೃದ್ಧಿ
ಸಸ್ಯಗಳಿಗೆ ಪೋಷಕಾಂಶ ಕೊಡುವ ಮುಂಚೆ ಸುಣ್ಣದ ಅಂಶ ಕೊಟ್ಟರೆ ಉಳಿದ ಯಾವುದೇ ಗೊಬ್ಬರ ಕೊಡದಿದ್ದರೂ ಸಸ್ಯದ ಬೆಳವಣಿಗೆ ಒಮ್ಮೆಲೆ ವೃದ್ಧಿಯಾಗುತ್ತದೆ. ಮಣ್ಣಿನ ಧಕ್ಕೆ ಸಹನೆ (ಪಿ.ಎಚ್‌. ಮೌಲ್ಯ) ಗುಣದ ಮೇಲೆ ಕೆಲವು ಪೋಷಕಾಂಶಗಳು ಅಲಭ್ಯ ಸ್ಥಿತಿಯಲ್ಲಿದ್ದರೆ ಅದನ್ನು ಸುಣ್ಣ ಲಭ್ಯವಾಗುವಂತೆ ಮಾಡುತ್ತದೆ. ಮಣ್ಣಿನ ಅಜೀರ್ಣ ಸ್ಥಿತಿಯನ್ನು ಸಮಸ್ಥಿತಿಗೆ ತರಲು ಇದು ಸಹಕಾರಿ. ಸುಣ್ಣವನ್ನು ಅಧಿಕ ಮಳೆ ಬೀಳುವ ಪ್ರದೇಶದಲ್ಲಿ ಮಾತ್ರ ಬಳಸುವುದಿಲ್ಲ, ಇದು ಎಲ್ಲ ಬೆಳೆಗಳಿಗೂ ಅಗತ್ಯ ಪೋಷಕಾಂಶವಾದ ಕಾರಣ ಪ್ರಮಾಣ ಮತ್ತು ವ್ಯತ್ಯಾಸದಲ್ಲಿ ಬಳಕೆ ಮಾಡಬೇಕು. ಸಾಂಪ್ರದಾಯಿಕವಾಗಿ ನಾವು ಖನಿಜ ಸುಣ್ಣವಾಗಿ ಚಿಪ್ಪು, ಡೋಲೋಮೈಟ್‌ ಬಳಕೆ ಮಾಡುತ್ತೇವಾದರೂ ಈ ಸುಣ್ಣದ ಸಾರವಾದ ಕ್ಯಾಲ್ಸಿಯಂ ನೈಟ್ರೇಟ್‌, ಚಿಲ್ಗೇಟೆಡ್‌ ಕ್ಯಾಲ್ಸಿಯಂ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಹೆಚ್ಚು ತೀಕ್ಷ್ಮವಾದ ಸಸ್ಯಗಳು ಇದನ್ನು ಬೇಗನೆ ಪಡೆದುಕೊಳ್ಳುತ್ತವೆೆ. ಇದನ್ನು ಬೆಳೆಗೆ ಹಾಕುವುದರಿಂದ ಮುಖ್ಯ ಪೋಷಕಾಂಶಗಳಲ್ಲದೆ ಸೂಕ್ಷ್ಮ ಪೋಷಕಾಂಶಗಳೂ ಲಭ್ಯವಾಗುತ್ತವೆ. ಸುಣ್ಣವನ್ನು ಅತಿಯಾಗಿ ಹಾಕದೆ ಮಣ್ಣಿನ ಪಿ.ಎಚ್‌. 7ಕ್ಕಿಂತ ಕಡಿಮೆ ಬಂದಲ್ಲಿ ಹಾಕಿದರೆ ಸಾಕು.

-   ಜಯಾನಂದ ಅಮೀನ್‌, ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next