Advertisement

ಎ.1ರಿಂದ ಅಗತ್ಯ ಔಷಧ ದುಬಾರಿ?

08:48 AM Mar 24, 2017 | Team Udayavani |

ಹೊಸದಿಲ್ಲಿ: ಅಗತ್ಯ ಔಷಧಗಳ ಬೆಲೆ ಹೆಚ್ಚಿಸುವ ಔಷಧ ಕಂಪೆನಿಗಳ ಬೇಡಿಕೆಗೆ ಕೇಂದ್ರ ಸರಕಾರ ಸಮ್ಮತಿಸಿದ್ದು, ಎ. 1ರಿಂದ ಅಗತ್ಯ ಔಷಧಗಳ ಬೆಲೆ ಶೇ. 2ರಷ್ಟು ಹೆಚ್ಚಳವಾಗಲಿದೆ. ಸಗಟು ಬೆಲೆ ಸೂಚ್ಯಂಕದಲ್ಲಿನ ಬದಲಾವಣೆಗಳಿಗೆ ಅನುಗುಣವಾಗಿ ವಾರ್ಷಿಕ ಬೆಲೆ ಹೆಚ್ಚಳ ಸಂಬಂಧ  ದಾಖಲೆ ಒದಗಿಸುವಂತೆ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್‌ಪಿಪಿಎ)ವು, ಔಷಧ ಕಂಪೆನಿಗಳಿಗೆ ಸೂಚಿಸಿತ್ತು. ಅದರಂತೆ 2016ರಲ್ಲಿ ಸಗಟು ಬೆಲೆ ಸೂಚ್ಯಂಕದಲ್ಲಿ ವಾರ್ಷಿಕ ಶೇ.1.97 ಬೆಲೆ ಏರಿಕೆಯಾಗಿರುವುದಾಗಿ ಆರ್ಥಿಕ ಸಲಹಾ ಮಂಡಳಿ ವರದಿ ನೀಡಿದೆ.  ಕ್ಯಾನ್ಸರ್‌, ಮಧುಮೇಹ, ಅಧಿಕ ರಕ್ತದೊತ್ತಡ, ಕಿಡ್ನಿ ಕಾಯಿಲೆ ಸಹಿತ ಇತರ ಸಮಸ್ಯೆಗಳಿಗೆ ಸಂಬಂಧಿಸಿದ ಅಗತ್ಯ ಔಷಧಗಳನ್ನು ಒಳಗೊಂಡ ರಾಷ್ಟ್ರೀಯ ಪಟ್ಟಿಯಲ್ಲಿರುವ 875 ಔಷಧಗಳ ಬೆಲೆಗಳನ್ನು ಸರಕಾರ ನೇರವಾಗಿ ನಿಯಂತ್ರಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next