Advertisement
ಬಹುತೇಕ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಪ್ರಥಮ ಭಾಷಾ ಪರೀಕ್ಷೆ ಎದುರಿಸಿದ್ದಾರೆ. ಹಿಂದಿ, ಸಂಸ್ಕೃತಗಳನ್ನು ಆಯ್ದುಕೊಂಡ ಮಕ್ಕಳ ಸಂಖ್ಯೆ ಕಡಿಮೆ. ಗಂಗೊಳ್ಳಿಯಲ್ಲಿ 9 ಮಂದಿ ಉರ್ದು ಪ್ರಥಮ ಭಾಷೆ ಪರೀಕ್ಷೆ ಬರೆದಿದ್ದಾರೆ. ಪಠ್ಯ, ನೀಲನಕಾಶೆಗೆ ಹೊರತಾದ ಯಾವುದೇ ಪ್ರಶ್ನೆಗಳು ಬಂದಿಲ್ಲ ಎಂದು ವಿದ್ಯಾರ್ಥಿಗಳು, ಶಿಕ್ಷಕರು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿ ಗಳು ಮಕ್ಕಳು ಮಾತ್ರವಲ್ಲದೆ, ಕರೆ ತರಲು- ಕರೆದುಕೊಂಡು ಹೋಗಲು ಅನೇಕ ಮಂದಿ ಪೋಷಕರೂ ಆಗಮಿಸಿ ದ್ದರು. ಇವರಲ್ಲನೇಕರು ಮಧ್ಯಾಹ್ನ ಪರೀಕ್ಷೆ ಮುಗಿಯುವ ವರೆಗೂ ಕಾಯುತ್ತಿದ್ದರು. ಪರೀಕ್ಷೆ ಮುಗಿದ ಬಳಿಕ ಮಕ್ಕಳ ಜತೆಗೆ “ಹೇಗಿತ್ತು, ಯಾವ ರೀತಿ ಬರೆದೆ’ ಎಂದು ಕಾಳಜಿಯಿಂದ ಪ್ರಶ್ನಿಸುತ್ತಿದ್ದುದು ಕಾಣಿಸಿತು. ಪರೀಕ್ಷೆಯ ಉತ್ಸವ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಂಟೆಪದವು ಸರಕಾರಿ ಪ.ಪೂ. ಕಾಲೇಜು ಮತ್ತು ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಮೂರು ಧರ್ಮಗಳ ಗುರುಗಳು ಆಶೀರ್ವಾದ ಮಾಡಿದರು. ವಗ್ಗ ಪ.ಪೂ. ಕಾಲೇಜನ್ನು ಸಿಂಗರಿಸಿದ್ದೂ ಅಲ್ಲದೆ ವಿದ್ಯಾರ್ಥಿಗಳಿಗೆ ಬೆಳಗ್ಗೆ ತಂಪು ಪಾನೀಯ ವಿತರಿಸಲಾಯಿತು. ಬೆಳ್ತಂಗಡಿ ತಾಲೂಕಿನ 3 ಕೇಂದ್ರಗಳಲ್ಲಿ 7 ಮಂದಿ ವಿಶೇಷ ಮಕ್ಕಳು ಪರೀಕ್ಷೆ ಬರೆದರು. ಅವರಿಗೆ ವೈದ್ಯರ ಸಲಹೆಯಂತೆ ಹೆಚ್ಚುವರಿ 30 ನಿಮಿಷ ನೀಡಲಾಗಿತ್ತು.
Related Articles
ಉಡುಪಿ: ಖಾಸಗಿಯಾಗಿ ಹಾಜರಾಗುತ್ತಿರುವ 12 ಮಂದಿ ಅಂಗವಿಕಲ ಮಕ್ಕಳು ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಅಶ್ವತ್ಥ ಎಂಬ ವಿದ್ಯಾರ್ಥಿಯ ಪರವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿ ವಿಜಯ ಉತ್ತರಿಸಿದ್ದಾನೆ. ವಯಸ್ಕ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ 10ನೇ ತರಗತಿ ಪರೀಕ್ಷೆ ಬರೆದಿರುವುದು ವಿಶೇಷ.
Advertisement
ಮೊದಲ ದಿನ 563 ಮಂದಿ ಗೈರುಮಂಗಳೂರು/ಉಡುಪಿ: ಎಸೆಸೆಲ್ಸಿ ಪರೀಕ್ಷೆಯ ಮೊದಲ ದಿನ ಪ್ರಥಮ ಭಾಷಿಕ ಪರೀಕ್ಷೆಗಳಿಗೆ ದ.ಕ. ಜಿಲ್ಲೆಯಲ್ಲಿ 392 ಮತ್ತು ಉಡುಪಿ ಜಿಲ್ಲೆಯಲ್ಲಿ 171 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಗುರುವಾರ ಕನ್ನಡ, ಇಂಗ್ಲಿಷ್, ಸಂಸ್ಕೃತ, ಉರ್ದು, ಹಿಂದಿ ಪರೀಕ್ಷೆ ನಡೆ ಯಿತು. ದ.ಕ. ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡ ಒಟ್ಟು 29,097 ಮಂದಿ ಯಲ್ಲಿ 28,705 ಮಂದಿ ಹಾಜರಾಗಿದ್ದರು. 392 ಮಂದಿ ಗೈರಾಗಿದ್ದರು. ಉಡುಪಿ ಯಲ್ಲಿ 13,998 ವಿದ್ಯಾರ್ಥಿಗಳಲ್ಲಿ 13,827 ಮಂದಿ ಹಾಜರಾಗಿದ್ದರು. 171 ಮಂದಿ ಗೈರಾಗಿದ್ದರು. 2ನೇ ಗಣಿತ ಪರೀಕ್ಷೆ ಮಾ. 25ರಂದು ನಡೆಯಲಿದೆ. ಪ್ರಶ್ನೆ ಪತ್ರಿಕೆಗಳನ್ನು ರೂಟ್ ಪ್ರಕಾರ ಸೂಕ್ತ ಬಂದೋಬಸ್ತ್ನಲ್ಲಿ ಕೊಂಡೊಯ್ಯಲಾಗಿದೆ. ಉತ್ತರ ಪತ್ರಿಕೆ ಇಡುವ ಸ್ಥಳದಲ್ಲೂ ಬಿಗಿ ಬಂದೋಬಸ್ತು ಕಲ್ಪಿಸಲಾಗಿದೆ. ಉತ್ತರ ಪತ್ರಿಕೆಗಳನ್ನು ಇರಿಸುವ ಕೊಠಡಿಗಳಲ್ಲಿ 24×7 ಪೊಲೀಸರು ಕಾರ್ಯ ನಿರ್ವಹಿಸಲಿದ್ದು, ಸಿಸಿ ಕೆಮರಾಗಳನ್ನೂ ಅಳವಡಿಸಲಾಗಿದೆ ಎಂದು ಎಸೆಸೆಲ್ಸಿ ನೋಡೆಲ್ ಅಧಿಕಾರಿಗಳಾದ ಶಮಂತ್, ವೆಂಕಟೇಶ ನಾಯಕ್ ತಿಳಿಸಿದ್ದಾರೆ. ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಏಳನೇ ತರಗತಿಗೆ ಮೊಟಕುಗೊಳಿಸಿದ್ದೆ. ಈಗ ಉದ್ಯೋಗ ನಿಮಿತ್ತ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದೇನೆ. ಬಹಳ ವರ್ಷಗಳ ಅನಂತರ ಪರೀಕ್ಷೆ ಬರೆಯುತ್ತಿರುವುದು ಸಂತಸ ತಂದಿದೆ.
-ಸಂತೋಷ, ನೇಜಾರು