Advertisement
ತಾಲೂಕಿನಲ್ಲಿ ಸರ್ಕಾರಿ 11, ಅನುದಾನಿತ19 ಹಾಗೂ 28 ಖಾಸಗಿ ಪ್ರೌಢಶಾಲೆಗಳು ಸೇರಿ ಒಟ್ಟಾರೆ 58 ಪ್ರೌಢಶಾಲೆಗಳಿವೆ. 9, 10ನೇ ತರಗತಿಗೆ ಸೇರಿದ ಆರು ಸಾವಿರ ವಿದ್ಯಾರ್ಥಿಗಳಿದ್ದು, ಶಾಲಾ ಆವರಣ ಮತ್ತು ತರಗತಿಗಳಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿ ಅನ್ವಯ ತರಗತಿ ಆರಂಭಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ವಿದ್ಯಾರ್ಥಿಗಳು, ಪೋಷಕರು ಸ್ವಾಗತಿಸಿದ್ದಾರೆ.
Related Articles
ಹಾಜರಾಗಲಿರುವ ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ನಡೆಸಲಿದೆ. ಥರ್ಮಲ್ ಸ್ಕ್ಯಾನ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿ ಆರೋಗ್ಯದಲ್ಲಿ ವ್ಯತ್ಯಯವಾದರೇ ಸೂಕ್ತ ಕ್ರಮ ವಹಿಸಲು ಶಿಕ್ಷಕರಿಗೆ ತಿಳಿಸುವಂತೆ ಸೂಚಿಸಲಾಗಿದೆ ಎಂದು ಬಿಇಒ ಕೆ.ಸಿ.ರಮೇಶ್ ತಿಳಿಸಿದ್ದಾರೆ.
Advertisement
ಬಿಸಿ ಊಟಕ್ಕೆ ಬ್ರೇಕ್: ಸೋಮವಾರ ಪ್ರಾರಂಭವಾಗುವ 9 ಮತ್ತು 10ನೇ ತರಗತಿಯ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ನೀಡುವ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದೆ, ಕೋವಿಡ್ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತಿತ್ತು. ಕೋವಿಡ್ ಹಿನ್ನೆಲೆ ಬಿಸಿಯೂಟದ ವ್ಯವಸ್ಥೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಒಟ್ಟಾರೆ ಶಿಕ್ಷಣ ಸಚಿವರು ಹೇಳಿರುವಂತೆ ಶೇ.2ಕ್ಕೂ ಹೆಚ್ಚು ಸೋಂಕು ಕಂಡುಬಂದರೆ ಶಾಲೆಗಳಿಗೆ ರಜಾ ಘೋಷಿಸಬೇಕೆಂದು ಹೇಳಲಾಗಿದೆ. ಶಾಲೆ ಆರಂಭವಾದ ಬಳಿಕ ಕೋವಿಡ್ ಮಹಾಮಾರಿ ಯಾವ ರೀತಿ ಸ್ವರೂಪ ಪಡೆಯಲಿದೆ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮಕ್ಕಳು ಸುರಕ್ಷಿತವಾಗಿರಲಿ ಎಂಬುದೇ ನಮ್ಮ ಆಶಯ.
ಮಾರ್ಗಸೂಚಿ ಪಾಲನೆತಾಲೂಕಿನಲ್ಲಿ ಸೋಮವಾರದಿಂದ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸರಕಾರದ ಎಸ್‌ಒಪಿಯನ್ನುಕಟ್ಟುನಿಟ್ಟಾಗಿ
ಜಾರಿಮಾಡಲಾಗಿದೆ, ಪ್ರತಿಯೊಂದು ತರಗತಿಯಲ್ಲಿ 15 ರಿಂದ 20 ಮಕ್ಕಳನ್ನು 3ರಿಂದ 6ಅಡಿ ಅಂತರದಲ್ಲಿಕುಳಿತುಕೊಳ್ಳಲು ವ್ಯವಸ್ಥೆ
ಮಾಡಲಾಗಿದೆ. ಎಲ್ಲ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಗಳ ಜೊತೆ ಸಭೆ ನಡೆಸಿ ಸರ್ಕಾರದ ನೀತಿ-ನಿಯಮದ ಬಗ್ಗೆ ಅರಿವು
ಮೂಡಿಸಲಾಗಿದೆ. ಪ್ರತಿ 10 ಮಕ್ಕಳಿಗೆ ಒಬ್ಬರು ಶಿಕ್ಷರನ್ನು ಆರೋಗ್ಯ ಮೇಲ್ವಿಚಾರಕರ ಜವಾಬ್ದಾರಿ ನೀಡಲಾಗಿದೆ. ಒಂದು ವಾರಗಳಕಾಲ ನಿತ್ಯ
ತರಗತಿಗಳನ್ನು ನಡೆಸಲಾಗುತಿದ್ದು ನಂತರದ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತದೆ ಅದನ್ನು ಇಲಾಖೆ ಅಧಿಕಾರಿಗಳಿಗೆ ವರದಿ ನೀಡಲಾಗುತ್ತದೆ ಎಂದು ಉದಯವಾಣಿಗೆಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಮಾಹಿತಿ ನೀಡಿದರು. – ಕೊಟ್ರೇಶ್.ಆರ್