Advertisement
ಕೆಲಸಮಯದ ನಂತರ ಭೂಕಂಪವೇ ಆದಂತೆ ಅಡುಗೆ ಮನೆಯಿಂದ “ಧಡಾರ್’ ಎಂಬ ಶಬ್ದ ಬಂದಾಗ ಬೆಚ್ಚಿ ಬಿದ್ದೆ. ಬೆಕ್ಕು ಏನಾದರೂ ಬಂದು ಹಾಲಿನ ಪಾತ್ರೆ ಉರುಳಿಸಿತಾ ಎನಿಸಿತು. ಇಲ್ಲ. ಸಿಡಿಮದ್ದಿನ ಸಿಡಿತಕ್ಕಿಂತ ತೀವ್ರವಾಗಿದ್ದ ಆ ಶಬ್ದ ಬೆಕ್ಕಿನಂತಹ ಯಕಶ್ಚಿತ್ ಜೀವಿಯಿಂದ ಸಾಧ್ಯವಿಲ್ಲವೆನಿಸಿತು. ಕಾತರದಿಂದ ಅಡುಗೆ ಮನೆಯೆಡೆಗೆ ಧಾವಿಸಿದೆ.
Related Articles
Advertisement
ಕುಕ್ಕರಿನ ಎಲ್ಲಾ ಭಾಗಗಳನ್ನೂ ಕೂಲಂಕಷವಾಗಿ ಪರಿಶೀಲಿಸಿದ ಡೀಲರ್, “”ಮೇಡಮ್, ಇದುನ್ನ ತಗೊಂಡು ಎರಡು ವರ್ಷ ಆಯ್ತು?” ಎಂದ. “”ಮೂರು ವರ್ಷ” ಎಂದೆ. ಗ್ಯಾರೆಂಟಿ ಕಾರ್ಡಿನ ಬಗ್ಗೆ ಕೇಳಿದಾಗ “”ಮನೇಲಿ ಹುಡ್ಕಿದ್ರೆ ಸಿಗುತ್ತೆ. ಸಂಜೆ ತರ್ತೀನಿ” ಎಂದು ಸಬೂಬು ನೀಡಿದೆ.
ಅಷ್ಟರಲ್ಲಿಯೇ ಕುಕ್ಕರಿನ ತಳಭಾಗವನ್ನು ಪರಿಶೀಲಿಸಿ “”ಮೇಡಮ್ , ನೋಡಿ ಇದುನ್ನ ತಗೊಂಡು ಟೆನ್ ಇಯರ್ಸ್ ಆಗಿದೆ, ಇದ್ರಲ್ಲೇ ಇಸ್ವಿ ನಮೂದಾಗಿದೆ. ಮೂರು ವರ್ಷ ಇಲ್ಲ, ಮ್ಯಾಕ್ಸಿಮಮ್ ಅಂದ್ರೆ ಐದು ವರ್ಷ ಗ್ಯಾರೆಂಟಿ ಕೊಡ್ಬದು ಅಷ್ಟೇ, ಇದು ತುಂಬಾ ಹಳೇದು, ಏನೂ ಮಾಡೋಕಾಗೊಲ್ಲ” ಅಂದ.
“”ಇದು ಮ್ಯಾನುಫ್ಯಾಕ್ಚರ್ ಆಗಿ ಹತ್ತು ವರ್ಷ ಆಗಿಬೋìದು. ಆದರೆ ನೀವು ನನ್ಗೆ ಸೇಲ್ ಮಾಡಿ ಮೂರೇ ವರ್ಷ ಆಗಿರೋದು. ನಮ್ಮನೇಲಿ ಇಪ್ಪತ್ತೆರಡು ವರ್ಷದ ಕುಕ್ಕರ್‌ನ ಇನ್ನೂ ಬಳುಸ್ತಾ ಇದೀವಿ. ಇದು ಮೂರೇ ವರ್ಷಕ್ಕೆ ನೆಗೆದು ಬಿತ್ತಲ್ಲಪ್ಪಾ” ಎಂದೆ ಕೋಪದಿಂದ. “”ಮೇಡಮ್, ನೀವು ನಿಮ್ಮ ಅಜ್ಜಿಯಷ್ಟೇ ಗಟ್ಟಿ ಇದೀರಾ ಹೇಳಿ. ಹೊಸ ಮಾಡೆಲ್‌ಗಳು ತುಂಬಾ ನಾಜೂಕು” ಎಂದು ನಾಜೂಕಾಗಿ ಸಮಜಾಯಿಷಿ ನೀಡಿದ.
“”ಅದೆಲ್ಲಾ ಸರೀನಪ್ಪಾ , ಈ ಎರಡು ಸಾವಿರದ ಕುಕ್ಕರ್ ಹೋದ್ರೆ ಹೋಗ್ಲಿ. ಇದ್ರಿಂದ ನಮ್ಮ ಚಿಮಣಿ , ಗ್ಯಾಸ್ ಸ್ಟವ್, ಫ್ರಿಜ್ಜು , ಅಕ್ವಾಗಾರ್ಡ್… ಎಲ್ಲಾ ಹೋಗಿ ಒಂದೂವರೆ ಲಕ್ಷ ಲಾಸ್ ಆಗಿದೆ. ನೀವು ಕುಕ್ಕರ್ ಕಂಪೆನಿಯವ್ರಿಗೆ ಒಂದು ಲೆಟರ್ ಬರ್ಧು ಹಾಕಿ. ನಾನು ಕನ್ಸೂಮರ್ ಕೋರ್ಟಿಗೆ ಹೋಗ್ತಿನಿ. ಕಾಂಪನ್ಸೇಷನ್ ಕ್ಲೈಮ್ ಮಾಡ್ತೀನಿ, ನೋಡಿ” ಧಮಕಿ ಹಾಕಿದೆ. ಸ್ವಲ್ಪವೂ ವಿಚಲಿತನಾಗದ ಅವನು, “”ನೋಡಿ ಮೇಡಂ, ನೀವು ಗ್ರಾಹಕರ ವೇದಿಕೆಗೆ ಹೋದ್ರೆ ಕಂಪೆನಿಯವರು ಈಸಿಯಾಗಿ ಬಚಾವ್ ಅಗ್ತಾರೆ” ಎಂದ. “”ಹೇಗೆ ನುಣುಚಿಕೊಳ್ತಾರಪ್ಪಾ ! ನಮ್ಮನೆ ಕಿಚನ್‌ದು ಫೋಟೋ ತೆಗ್ದು ಇಟ್ಕೊಂಡಿದೀನಿ, ನನ್ ಹತ್ರ ಎಲ್ಲಾ ಪ್ರೂಫುಗಳು ಇವೆ” ಎಂದೆ.
“”ನೋಡಿ ಮೇಡಮ್, ಕುಕ್ಕರ್ ಬಳಸುವಾಗ ನೀವು ಸುಮಾರು ವಿಧಾನಗಳನ್ನು ಅನುಸರಿಸ್ಬೇಕು. ವೆಯ… ಹಾಕುವ ಮೊದಲು ಸ್ವಲ್ಪ ಸ್ಟೀಮ್ ಹೋಗಲು ಬಿಡ್ಬೇಕು. ನೀವು ಬಿಡದೆ ಹಾಗೇ ಹಾಕಿರೋದ್ರಿಂದ ಹುರುಳಿ ಕಾಳಿನ ಸಿಪ್ಪೆ ಹೋಗಿ ಅಲ್ಲಿ ಕುಳಿತಿದೆ. ಗ್ಯಾಸ್ ರಿಲೀಸ್ ಅಗ್ದೆ ಬ್ಲ್ಯಾಕ್ ಆಗಿದೆ” ಎಂದ.
“”ಆದ್ರೆ ಗ್ಯಾಸ್ ರಿಲೀಸ್ ಆಗ್ದೆ ಇದ್ದಾಗ ಸೇಫ್ಟಿ ವಾಲ್ವ… ಓಪನ್ ಆಗ್ಬೇಕಿತ್ತು ತಾನೆ?” ನಾನೂ ಜಾಡಿಸಿದೆ.“”ನೋಡಿ ಮೇಡಮ್ , ಸೇಫ್ಟಿವಾಲ್ವ…ನ ಪ್ರತೀ ಮೂರು ತಿಂಗಳಿಗೊಮ್ಮೆ , ಗ್ಯಾಸ್ಕೆಟ್‌ನ ಪ್ರತೀ ಆರು ತಿಂಗಳಿಗೊಮ್ಮೆ ಬದಲಾಯಿಸಬೇಕು. ಕುಕ್ಕರನ್ನು ಬಳಸಿದ ಕೂಡಲೆ ಬಿಸಿ ಗ್ಯಾಸ್ಕೆಟ್‌ನ ತಣ್ಣೀರಿನಲ್ಲಿ ಹಾಕ್ಬೇಕು. ಪ್ರತೀ ಐದು ವರ್ಷಕ್ಕೊಮ್ಮೆ ಕುಕ್ಕರ್‌ನ ಎಕ್ಸ್‌ಚೇಂಜ್ ಆಫರ್‌ನಲ್ಲಿ ಬದಲಾಯಿಸಬೇಕು. ಇದನ್ನೆಲ್ಲ ನೀವು ಫಾಲೋ ಮಾಡಿದೀರಾ?” ಪ್ರಶ್ನಾರ್ಥಕವಾಗಿ ನನ್ನೆಡೆಗೆ ನೋಡಿದ.
“”ನೀವು ನಿಮ್ಮ ಮನೇಲಿ ಇದುನ್ನೆಲ್ಲ ಫಾಲೋ ಮಾಡ್ತಾ ಇದೀರಾ?” ಎಂದು ಕೇಳಬೇಕೆನಿಸಿತಾದರೂ ನನ್ನ ಬಯಕೆಯನ್ನು ಕಷ್ಟಪಟ್ಟು ಹತ್ತಿಕ್ಕಿಕೊಂಡೆ. “”ಇದುನ್ನೆಲ್ಲಾ ನೀವು ಕರೆಕ್ಟಾಗಿ ಫಾಲೋ ಮಾಡಿದ್ದು ಅದು ಪ್ರೂವ್ ಆದ್ರೆ ನಿಮ್ಗೆ ಹೆಚ್ಚು ಅಂದ್ರೆ ಒಂದು ಕುಕ್ಕರ್ ಕೊಡ್ಬದು. ಅಷ್ಟೇ” ಡೀಲರ್ ತೀರ್ಪು ನೀಡಿದ. ಅದನ್ನೆಲ್ಲ ಪ್ರೂವ್ ಮಾಡಲು ಹೊರಟರೆ ಕುಕ್ಕರಿನ ಬೆಲೆಗಿಂತ ಹೆಚ್ಚು ಖರ್ಚಾಗುವುದು ಖಚಿತವೆನಿಸಿತು. ಇನ್ನು ವಾದಕ್ಕೆ ಯಾವ ಸಾಮಗ್ರಿಯೂ ಇರಲಿಲ್ಲ. ವಿರೂಪಗೊಂಡ ನನ್ನ ಇಟ್ಯಾಲಿಯನ್ ಕಿಚನ್ ನೆನಪಾಗಿ ನಿಟ್ಟುಸಿರಾದೆ. ಸುಮಾ ರಮೇಶ್