Advertisement
ಚಂದ್ರಗ್ರಹಣದ ದಿನ ಬೆಳಿಗ್ಗೆ ಎದ್ದು ಗಡಬಿಡಿಯಲ್ಲಿ ಡ್ನೂಟಿಗೆ ಹೊರಡಲು ಅನುವಾಗುತ್ತಿ¨ªಾಗ ಆಯಿ, “”ಈವತ್ತು ಚಂದ್ರಗ್ರಹಣ, ಮಧ್ಯಾಹ್ನ ಹನ್ನೆರಡರೊಳಗೆ ಊಟ ಮುಗಿಸಬೇಕು ಎಂದು ಟಿವಿಯಲ್ಲಿ ಹೇಳಿ¨ªಾರೆ. ನೀನು ಮಧ್ಯಾಹ್ನ ಬೇಗ ಹೊಟೇಲ್‌ಗೆ ಹೋಗಿ ತಿಂಡಿ ತಿನ್ನು. ಲೇಟಾಗಿ ಹೋದರೆ ಹೊಟೇಲ್ ಬಂದ್ ಮಾಡಿಯಾರು” ಎಂದಾಗ, “”ಆಯ್ತು” ಎಂದು ಹೇಳಿ ಹೊರಟೆ. ಈಗೀಗ ನಮ್ಮ ನಂಬಿಕೆ, ಆಚರಣೆಗಳನ್ನು ಟಿವಿಯವರು ನಿರ್ಧರಿಸುವಂತಾಗಿದೆ. ಚಿಕ್ಕವರಿ¨ªಾಗ ಗ್ರಹಣದ ಸಂದರ್ಭದಲ್ಲಿ ಉಪವಾಸ, ನಂತರ ತಣ್ಣೀರ ಸ್ನಾನ, ಮಾಡಲು ಪಡುತ್ತಿದ್ದ ಕಷ್ಟ ಎಲ್ಲ ನೆನಪಾಯಿತು. ಈ ಕಷ್ಟ ನೋಡಿ ಗ್ರಹಣ ಎಂದರೆ ಸಾಕು, ಮಾರುದೂರ ಓಡಿ ಹೋಗುವ ಎನಿಸುತ್ತಿತ್ತು. ಈಗ ಎಷ್ಟೋ ಬೆಟರ್. ಗ್ರಹಣದ ಆಚರಣೆ ಮೊದಲಿನಷ್ಟು ಕಷ್ಟ ಇಲ್ಲವಾಗಿ ಸರಳೀಕೃತಗೊಂಡಿದೆಯಾದರೂ ಒಂದಿಷ್ಟು ನಂಬಿಕೆಯ ಆಚರಣೆಗಳು ಹಾಗೇ ಉಳಿದುಕೊಂಡು ಮುಂದುವರೆದಿದೆ. ಆಸ್ಪತ್ರೆಯ ತಲುಪಿ ಡ್ನೂಟಿ ಸಹಿ ಹಾಕಿ ನನ್ನ ಆಫೀಸ್‌ಗೆ ಹೋಗಿ ನನ್ನ ಕಾರ್ಯದಲ್ಲಿ ತೊಡಗಿದೆ. ಗ್ರಹಣದ ಕಾರಣಾನೋ ಏನೋ, ಪೇಶೆಂಟ್‌ಗಳ ಸಂಖ್ಯೆಯು ಕಡಿಮೆ ಇತ್ತು. ಸಹೋದ್ಯೋಗಿ ಸಿಸ್ಟರ್ ಒಬ್ಬಳು ಬಂದು, “”ಬ್ರದರ್ ನನಗೊಂದು ಹೆಲ್ಪ್ ಆಗಬೇಕಿತ್ತು. ನನ್ನ ರಾಶಿಗೆ ಚಂದ್ರಗ್ರಹಣ ಅಶುಭ ಅಂತೆ. ಹಾಗಾಗಿ, ಬೆಳ್ಳಿ ಚಂದ್ರ ಬಿಂಬ ಬೇಕಾಗಿದೆ. ದೇವರಿಗೆ ಒಪ್ಪಿಸಬೇಕು. ಹೊರಗಡೆ ಹೋದಾಗ ತಂದು ಕೊಡಿ ಪ್ಲೀಸ್” ಎಂದಳು. “”ಆಯ್ತು ಸಿಸ್ಟರ್, ಊಟಕ್ಕೆ ಹೊರಗೆ ಹೋದಾಗ ತಂದು ಕೊಡ್ತೀನಿ” ಎಂದೆ. “”ನನಗೆ ಭಟ್ಟರು ಹನ್ನೊಂದು ಗಂಟೆಯೊಳಗೆ ಊಟ ಮಾಡಲಿಕ್ಕೆ ಹೇಳಿ¨ªಾರೆ, ಡಾಕ್ಟರು ಬೇಗ ಊಟ ಮಾಡಿ ಬರಲು ಪರ್ಮಿಷನ್ ಕೊಟ್ಟಿ¨ªಾರೆ, ನಿಮಗೆ ಎಷ್ಟು ಗಂಟೆಗೆ ಊಟ ಮಾಡಲು ಹೇಳಿ¨ªಾರೆ?” ಎಂದು ಕೇಳಿದ್ದಳು. “”ನನಗೆ ಜ್ಯೋತಿಷಿ ಹಸಿವಾದಾಗ ಊಟ ಮಾಡು ಎಂದು ಹೇಳಿ¨ªಾರೆ” ಎಂದೆ. ಅವಳಿಗೆ ನಗು ಬಂತು. ಊಟಕ್ಕೆ ಹೋಗಬೇಕೆಂದು ಗಡಿಬಿಡಿಯಲ್ಲಿ ಹೊರಟಳು. ಹನ್ನೊಂದರ ಸುಮಾರಿಗೆ ನಾನು ಸಹೋದ್ಯೋಗಿಗಳಿಬ್ಬರು ಟೀ ಕುಡಿದು ಬರಲು ಹೊರಟಾಗ ಆಸ್ಪತ್ರೆಯ ಕಾರಿಡಾರಿನಲ್ಲಿ ಒಬ್ಬ ಸಿಸ್ಟರುಗಳೂ ಕಾಣಸಿಗಲಿಲ್ಲ. ಎಲ್ಲ ಗ್ರಹಣದ ಕಾರಣ ಊಟಕ್ಕೆ ಹೊರಟಾಗಿತ್ತು. ಟೀ ಮುಗಿಸಿ ಬರುವಾಗ ಇನ್ನೊಬ್ಬ ಸಿಸ್ಟರು ಮಾತಿಗೆ ಸಿಕ್ಕರು. ಅವರಲ್ಲಿಯೂ ಅದೇ ಗ್ರಹಣದ ಮಾತು. “”ಊಟ ಮುಗಿಸಿ ಬಂದೆ. ಇನ್ನು ರಾತ್ರಿ ಹತ್ತರ ನಂತರ ಊಟ. ಅಲ್ಲಿಯವರೆಗೆ ಹಸಿವಾದರೆ ಏನು ಮಾಡೋದು ಗೊತ್ತಾಗುತ್ತಿಲ್ಲ” ಅಂದರು. ನಾನು ಒಂದು ಉಪಾಯ ಸೂಚಿಸಿದೆ. “”ತೀರಾ ಆ ಪರಿ ಹಸಿವಾಯಿತೆಂದರೆ ಸೂಜಿ ಮುಖಾಂತರ ಗ್ಲೂಕೋಸ್ ಬಾಟಲಿ ಏರಿಸಿಕೊಳ್ಳಿ. ಬಾಯಿ ಮುಖಾಂತರ ಆಹಾರ ತೆಗೆದುಕೊಳ್ಳಬಾರದೆಂದು ಹೇಳಿ¨ªಾರೆಯೇ ಹೊರತು ಸೂಜಿ ಮುಖಾಂತರ ಬೇಡ ಏನು ಹೇಳಿಲ್ಲವಲ್ಲ” ಎಂದೆ. ಹುಸಿಗೋಪದಿಂದ ಮುಖ ತಿರುಗಿಸಿ ಹೊರಟರು. ಕೆಲಸ ಮುಗಿಸಿ ಊಟಕ್ಕೆ ಹೊರಟಾಗ ಮಧ್ಯಾಹ್ನ ಒಂದೂವರೆ ಗಂಟೆ ನಗರದಲ್ಲಿನ ಹೊಟೇಲುಗಳು ಬಂದಾಗುತ್ತಿವೆ ಎಂದು ಸ್ವಲ್ಪ ದೂರದ ಟೂರಿಷ್ಟ್ ಹೊಟೇಲಿಗೆ ಹೋಗೋಣವೆಂದು ಟ್ರಿಬಲ್ ರೈಡಿಂಗ್‌ನಲ್ಲಿ ಬೈಕ್ ಏರಿ ಹೊರೆಟೆವು. ಮಧ್ಯದಲ್ಲಿ ಕುಳಿತ ಸಹೋದ್ಯೋಗಿ ಗ್ರಹಣದ ಸಂದರ್ಭದಲ್ಲಿ ಆಕ್ಸಿಡೆಂಟ್ ಹೆಚ್ಚಾಗುತ್ತದೆ ಎನ್ನುವ ಥಿಯರಿಯನ್ನು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಬೈಕ್‌ರೈಡ್ ಮಾಡುತ್ತಿದ್ದ ಗೆಳೆಯನಿಗೆ ಹೇಳುತ್ತಿದ್ದ. ಹಿಂದೆ ಕುಳಿತ್ತಿದ್ದ ನನಗೆ ಆಗುವಷ್ಟು ಹೆದರಿಕೆ ಆಯ್ತು ಅನ್ನಿ. ಊಟದ ಹೊಟೇಲ್‌ನವರಿಗೂ ಗ್ರಹಣದ ಎಫೆಕ್ಟ್ ಸ್ವಲ್ಪ ಜಾಸ್ತಿಯೇ ಆಗಿತ್ತು ಅಂತ ಕಾಣುತ್ತೆ. ಗಿರಾಕಿಗಳು ಕಡಿಮೆ ಇದ್ದರು. ನಮ್ಮ ಹಾಗೇ ಬಂದ ನಾಲ್ವರು ಹೊಟ್ಟೆಬಾಕರು ಒಂದೆಡೆ ಕುಳಿತು ಭರ್ಜರಿ ಚಿಕನ್ ಊಟದ ಬ್ಯಾಟಿಂಗ್ ಮಾಡುತ್ತಿದ್ದರು. “”ಸರ್, ನೀವು ಗ್ರಹಣ ಆಚರಣೆ ಮಾಡಲ್ವ?” ಎಂದ. ನಾನು ಸೀರಿಯಸ್ ಆಗಿ, “”ಇದೆಯಪ್ಪ, ಯಾವುದಕ್ಕೂ ನಮಗೆ ಕೊಡುವ ಊಟಕ್ಕೆ, ಅದರಲ್ಲೂ ಮೀನು ಸಾರಿಗೆ ದರ್ಬೆ, ತುಳಸಿ ಎಲೆಯಿಂದ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಬಾ, ಹಾಗೇ ಮಾಡಿಕೊಂಡು ಊಟ ಮಾಡಬಹುದೆಂದು ಎಂದು ಜ್ಯೋತಿಷಿ ಹೇಳಿ¨ªಾರೆ” ಎಂದೆ. “”ಹೌದಾ. ಆಯ್ತು ಸರ್” ತುಳಸಿ ಎಲೆ ಹುಡುಕಿ ಹೊರಟ. ಸಹೋದ್ಯೋಗಿಗಳಿಬ್ಬರು ಮುಸಿ ಮುಸಿ ನಗತೊಡಗಿದ್ದರು.
Related Articles
ಚಂದ್ರನ ಬೆಳಕಿನಾಟದ ಮೇಲಿನ ವೈಜ್ಞಾನಿಕ ಮತ್ತು ವೈಚಾರಿಕ ನಂಬಿಕೆಗಳು ಒಟ್ಟೊಟ್ಟಿಗೆ ಸಾಗುತ್ತಿರಲಿ.
Advertisement
ವಿನಾಯಕ ಎಲ್. ಪಟಗಾರ