Advertisement

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉದಯವಾಣಿ ಪ್ರಬಂಧ ಸ್ಪರ್ಧೆ

05:44 PM Aug 05, 2019 | keerthan |

ಮಣಿಪಾಲ: ಐವತ್ತನೆಯ ವರ್ಷದ ಸಂಭ್ರಮದಲ್ಲಿರುವ “ಉದಯವಾಣಿ’ ದಿನಪತ್ರಿಕೆಯು ವಿದ್ಯಾರ್ಥಿಗಳಲ್ಲಿ ದೇಶಾಭಿಮಾನದ ಜಾಗೃತಿ ಮೂಡಿಸುವ ಸಲುವಾಗಿ ಈ ಬಾರಿಯ ಸ್ವಾತಂತ್ರ್ಯ ದಿನ ಪ್ರಯುಕ್ತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.

Advertisement

8ರಿಂದ 10ನೇ ತರಗತಿಯ ವರೆಗಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆ. “ನನ್ನ ದೃಷ್ಟಿಯಲ್ಲಿ ಇನ್ನಷ್ಟು ವಿಶಿಷ್ಟವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುವುದು ಹೇಗೆ’ ಎಂಬುದು ಸ್ಪರ್ಧೆಯ ವಿಷಯ. ವಿದ್ಯಾರ್ಥಿಗಳು ತಮ್ಮ ಕಲ್ಪನೆಯ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ 250 ಪದಗಳ ಮಿತಿಯಲ್ಲಿ ಪ್ರಬಂಧ ಬರೆದು ಕಳುಹಿಸಬೇಕು. ಒಬ್ಬ ವಿದ್ಯಾರ್ಥಿ ಒಂದು ಪ್ರವೇಶವನ್ನು ಮಾತ್ರ ಕಳುಹಿಸಬಹುದು. ಪ್ರಬಂಧಗಳನ್ನು ಕಳುಹಿಸಲು ಆಗಸ್ಟ್‌ 10 ಕೊನೆಯ ದಿನಾಂಕ.

ಪ್ರಬಂಧದ ಮೇಲ್ಭಾಗದಲ್ಲಿ ಹೆಸರು, ಶಾಲೆಯ ಹೆಸರು, ತರಗತಿ, ಊರು, ಸಂಪರ್ಕ ಸಂಖ್ಯೆ- ಇವಿಷ್ಟು ಮಾಹಿತಿಗಳನ್ನು ನಮೂದಿಸಲೇ ಬೇಕು. ಜತೆಗೊಂದು ಭಾವಚಿತ್ರ ಲಗತ್ತಿಸಬೇಕು.

ಆಯ್ದ ಉತ್ಕೃಷ್ಟ ಪ್ರಬಂಧಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಮೆಚ್ಚುಗೆ ಪಡೆದ 50 ಪ್ರಬಂಧಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಅದಲ್ಲದೆ, 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಪ್ರೇರೇಪಿಸುವ ಶಾಲೆಗಳಿಗೆ ಭಾಗವಹಿಸುವಿಕೆಯ ಪ್ರಮಾಣ ಪತ್ರ ನೀಡಲಾಗುತ್ತದೆ.

ಪ್ರಬಂಧಗಳನ್ನು ಮಂಗಳೂರು, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಾಸರಗೋಡು, ಉಡುಪಿ, ಕಾರ್ಕಳ, ಕುಂದಾಪುರದ ಉದಯವಾಣಿ ಕಚೇರಿ ಗಳಲ್ಲಿ ನೀಡಬಹುದು. ಅಂಚೆಯ ಮೂಲಕವಾದರೆ, ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ ಸ್ಪರ್ಧೆ ವಿಭಾಗ, ಉದಯವಾಣಿ ದಿನಪತ್ರಿಕೆ, ಎಂಎಂಎನ್‌ಎಲ್‌ ಕಟ್ಟಡ, ಉದಯವಾಣಿ ರಸ್ತೆ, ಮಣಿಪಾಲ 576 104 ಈ ವಿಳಾಸಕ್ಕೆ ಕಳುಹಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next