ನವ ದೆಹಲಿ : ಕಳೆದ ಒಂದು ಒಂದುವರ ವರ್ಷದಿಂದ ಇಡೀ ದೇಸ ಕೋವಿಡ್ ಸೋಂಕಿನ ಸಂಕಷ್ಟಕ್ಕೆ ಸಿಲುಕಿದೆ. ಆರ್ಥಿಕ ಸಂಕಷ್ಟದಲ್ಲಿ ಜನರು ಪರದಾಡುತ್ತಿದ್ದಾರೆ. ಕುಟುಂಬದಲ್ಲಿ ಒಬ್ಬರನ್ನೇ ಜೀವನಾಧಾರವಾಗಿ ಅವಲಂಭಿಸಿ ಇದ್ದ ಕುಟುಂಬಗಳು ಇಂದು ಕೋವಿಡ್ ನ ಕಾರಣದಿಂದಾಗಿ ಆಸರೆಯನ್ನೇ ಕಳೆದುಕೊಂಡಿದೆ. ಇಂತಹ ಕುಟುಂಬಳಿಗೆ ಸರ್ಕಾರ ಪರಿಕಹಾರ ಧನ ಒದಗಿಸುತ್ತಿದೆ. ಇನ್ನೊಂದೆಡೆ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ ಕೂಡ ಹೀಗೆ ಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯದ ಹಸ್ತ ಚಾಚಲು ಮುಂದ ಬಂದಿದೆ.
ಇಂತಹ ಕುಟುಂಬಗಳಿಗೆ ಸಹಾಯ ವನ್ನು ಮಾಡುವ ಉದ್ದೇಶದಿಂದ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ ತನ್ನ ಪಿಂಚಣಿ ಯೋಜನೆಯಲ್ಲಿ ಬದಲಾವಣೆಯನ್ನು ತಂದಿದೆ. ಇದರಿಂದ ಎಂಪ್ಲಾಯಿಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೋರೇಶನ್ ನ ಎಲ್ಲ ನೊಂದಾಯಿತ ಇಲಾಖೆಗಳಿಗೆ ಪಿಂಚಣಿ ಯೋಜನೆಯ ಲಾಭ ಸಿಗಲಿದೆ. ಇದಲ್ಲದೆ ಇಡಿಎಲ್ಐ (ಎಂಪ್ಲಾಯಿಸ್ ಡೆಪೊಸಿಟ್ ಲಿಂಕ್ಡ್ ಇನ್ಸುರೆನ್ಸ್) ಹಾಗೂ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ ಲಾಭವೂ ಕೂಡ ಸಿಗುತ್ತದೆ.
ಇದನ್ನೂ ಓದಿ : ನಟ ಮಹೇಶ್ ಬಾಬು ಅವರಿಂದ ಬರಿಪಲೇಮ್ ಗ್ರಾಮಸ್ಥರಿಗೆ ಉಚಿತ ಕೋವಿಡ್ ಲಸಿಕೆ
ಇಎಸ್ಐಸಿ(ಕಾರ್ಮಿಕರ ರಾಜ್ಯ ವಿಮಾ ನಿಗಮ) ನಿಯಮಗಳ ಪ್ರಕಾರ ಪಿಂಚಣಿಯಲ್ಲಿ ನಲ್ಲಿ ದಿನ ಸಂಬಳದ ಶೇಕಡಾ. 90 ರಷ್ಟು ಹಣವನ್ನು ಅವಲಂಭಿತರಿಗೆ ಸಿಗಲಿದೆ. ಒಂದು ವೇಳೆ ಕುಟುಂಬದ ದುಡಿಯುತ್ತಿರುವ ಅಥವಾ ಕುಟುಂಬಕ್ಕೆ ಆಸರೆಯಂತಿದ್ದ ವ್ಯಕ್ತಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, ಈ ನಿಯಮ ಮಾರ್ಚ್ 24, 2020 ರಿಂದ 24 ಮಾರ್ಚ್ 2022 ರವರೆಗಿನ ಸಾವು ಪ್ರಕರಣಗಳಿಗೆ ಅನ್ವಯಿಸಲಿದೆ. ಈ ಪ್ರಸ್ತಾವನೆಯ ಮೇಲೆ ಕಾರ್ಮಿಕ ಸಚಿವಾಲಯ ಸತತವಾಗಿ ಕಾರ್ಯನಿರ್ವಹಿಸುತ್ತಿದೆ.
ಇಪಿಎಫ್ಒ ಹಾಗೂ ಇಡಿಎಲ್ಐ ಯೋಜನೆಯ ಅಡಿ ಇದುವರೆಗೆ ಮೃತಪಟ್ಟವರ ಕುಟುಂಬ ಸದಸ್ಯರಿಗೆ 6 ಲಕ್ಷ ರೂ. ನೀಡಲಾಗುತ್ತಿತ್ತು. ಇದೀಗ ಈ ಹಣವನ್ನು 7 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಕಳೆದ ವರ್ಷದ ಫೆಬ್ರವರಿಯಿಂದ ಮುಂದಿನ ಮೂರು ವರ್ಷಗಳವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಇದರ ಅಡಿ ಕನಿಷ್ಠ ಅಂದರೆ ರೂ.2.5 ಲಕ್ಷ ರೂ.ಗಳು ಸಿಗಲಿವೆ.
ಇದನ್ನೂ ಓದಿ : ಸಂಘಗಳಲ್ಲಿ ಪಡೆದ ಸಾಲದ ಪೂರ್ತಿಬಾಕಿ ಕಟ್ಟಬೇಕು ಎಂಬ ಆದೇಶ ಹಿಂಪಡೆಯುವಂತೆ ಸಿದ್ದರಾಮಯ್ಯ ಆಗ್ರಹ