Advertisement

ಶೀಘ್ರ ಈಶ್ವರಪ್ಪ ಬಂಧನವಾಗಬೇಕು: ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ ಆಗ್ರಹ

05:44 PM Apr 15, 2022 | Team Udayavani |

ಹನೂರು: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರು ಸ್ವಯಂಪ್ರೇರಿತರಾಗಿ ಅವರೇ ರಾಜೀನಾಮೆ ನೀಡಬೇಕಿತ್ತು, ಅವರು ಭಂಡತನ ಪ್ರದರ್ಶಿಸಿ ಇಷ್ಟುದಿನ ತೆಗೆದುಕೊಂಡಿದ್ದು ಶೋಚನೀಯ ಎಂದು ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ ಕಿಡಿಕಾರಿದ್ದಾರೆ.

Advertisement

ಹನೂರು ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಬಾಬುಜಗಜೀವನರಾಂ ಜಯಂತಿಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತಿಮ್ಮಯ್ಯ, ಸಂತೊಷ್ ಆತ್ಮಹತ್ಯೆ ಕೇಸಿನಲ್ಲಿ ಈಶ್ವರಪ್ಪ ಅವರ ಮೇಲೆ ಎಫ್‍ಐಆರ್ ದಾಖಲಾಗಿದೆ. ಆ ಕೂಡಲೇ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಬೇಕಿತ್ತು. ಆದರೆ ಭಂಡತನ ಪ್ರದರ್ಶಿಸಿ ಈಗ ರಾಜೀನಾಮೆ ನೀಡಿದ್ದಾರೆ. ಅವರ ಮೇಲೆ ದಾಖಲಾಗಿರುವ ಸೆಕ್ಷನ್ ಪ್ರಕಾರ ಅವರನ್ನು ಈಗಾಗಲೇ ಬಂಧನಕ್ಕೊಳಪಡಿಸಬೇಕಿತ್ತು ಎಂದರು.

ಈ ದೇಶದ ಪ್ರಜಾಪ್ರಭುತ್ವದಲ್ಲಿ ಮಂತ್ರಿಗಳೂ ಕೂಡ ಕಾನೂನಿನ ಚೌಕಟ್ಟಿನಡಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಅವರ ಮೇಲೆ ಸೆಕ್ಷನ್ ಪ್ರಕಾರ ಯಾರೇ ಆಗಿದ್ದರೂ ಬಂಧನಕ್ಕೊಳಪಡಬೇಕಾಗಿತ್ತು, ಅಂತೆಯೇ ಅವರೂ ಕೂಡ ಶೀಘ್ರ ಬಂಧನಕ್ಕೊಳಗಾಗಬೇಕು ಎಂಬುದು ನಮ್ಮ ಒತ್ತಾಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next