ಮಂಗಳೂರು: ಯು2 ಸಿನೆಮಾ ಟಾಕೀಸ್ ಲಾಂಛನದಲ್ಲಿ ತಯಾರಾದ ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ ನಿರ್ಮಿಸಿರುವ, ಎಂ.ಎನ್. ಜಯಂತ್ ಚಿತ್ರಕತೆ, ನಿರ್ದೇಶನದ, ಶೋಭರಾಜ್ ಪಾವೂರು ಕಥೆ, ಸಂಭಾಷಣೆ ಬರೆದಿರುವ “ಏಸ’ ತುಳು ಚಲನಚಿತ್ರ ಕರಾವಳಿಯಾದ್ಯಂತ ಶುಕ್ರವಾರ ತೆರೆಕಂಡಿದೆ. ಮೊದಲ ದಿನವೇ ಚಿತ್ರ ಯಶಸ್ವೀ ಪ್ರದರ್ಶನ ಕಾಣುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ.
ಯಕ್ಷಗಾನ ಕಲಾವಿದನೊಬ್ಬನ ಬದುಕಿನ ಕಥಾನಕ ಹೊಂದಿರುವ “ಏಸ’ ಕಾಮಿಡಿ ಹಾಗೂ ಕಥೆಯ ಗಟ್ಟಿತನದ ಮೂಲಕ ಗಮನಸೆಳೆಯುತ್ತಿದೆ. “ಏಸ’ ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನೆಮಾಸ್, ಪಿವಿಆರ್, ಸಿನೆಧಿಪೊಲೀಸ್, ಉಡುಪಿಯಲ್ಲಿ ಕಲ್ಪನಾ, ಸುರತ್ಕಲ್‌ಧಿನಲ್ಲಿ ನಟರಾಜ್, ಬೆಳ್ತಂಗಡಿಧಿಯಲ್ಲಿ ಭಾರತ್, ಪುತ್ತೂರಿಧಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್, ಮಣಿಪಾಲಧಿದಲ್ಲಿ ಐನಾಕ್ಸ್, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ ಚಿತ್ರಮಂದಿರದಲ್ಲಿ ಏಕಕಾಲದಲ್ಲಿ ತೆರೆಕಂಡಿದೆ.
ಮಂಗಳೂರಿನ ಜ್ಯೋತಿ ಚಿತ್ರಧಿಮಂದಿರಧಿದಲ್ಲಿ ಚಿತ್ರದ ಬಿಡುಧಿಗಡೆ ಸಮಾಧಿರಂಭ ಶುಕ್ರವಾರ ಬೆಳಗ್ಗೆ ನಡೆಯಿತು. ಉದ್ಯಮಿ ಡಾ| ಜೀವಂಧರ್ ಬಲ್ಲಾಳ್ ಉದ್ಘಾಟಿಸಿ ಮಾತನಾಡಿ, ತುಳು ಸಿನೆಮಾ ರಂಗ ಈಗ ಸಮೃದ್ಧವಾಗಿ ಬೆಳೆಯುತ್ತಿದೆ. ತುಳು ಸಿನೆಮಾಗಳ ಮೂಲಕ ಮನೋರಂಜನೆಯ ಜತೆಗೆ ಉತ್ತಮ ಸಂದೇಶವೂ ಸಮಾಜಕ್ಕೆ ದೊರಕುವಂತಾಗಲಿ ಎಂದರು.
ಪ್ರಮುಖರಾದ ಭಾಸ್ಕರ ಕೋಟ್ಯಾನ್ ಮಾತನಾಡಿ, ತುಳು ಸಿನೆಮಾಧಿರಂಗದ ಮಾರುಕಟ್ಟೆ ಈಗ ವಿಸ್ತಾರಧಿವಾಗಿ ಬೆಳೆಯುತ್ತಿದೆ. ಜನರು ತುಳು ಸಿನೆಮಾಗಳನ್ನು ಪ್ರೋತ್ಸಾಹಿಸಿ ತುಳು ಭಾಷೆಯ ಬೆಳವಣಿಗೆಗೆ ಸಹಕಾರಿಧಿಯಾಗಬೇಕು ಎಂದರು.
ಖ್ಯಾತ ಕಲಾವಿದ/ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ಸೀಮಿತ ಮಾರುಕಟ್ಟೆಯ ತುಳು ಚಿತ್ರಧಿರಂಗಧಿದಲ್ಲಿ ಬರುತ್ತಿರುವ ಎಲ್ಲ ಚಿತ್ರಧಿಗಳನ್ನು ತುಳುನಾಡಿನ ಪ್ರೇಕ್ಷಕರು ನೋಡುಧಿವಂತಾಗಬೇಕು. ನಮ್ಮ ತುಳು ಸಿನೆಮಾರಂಗ ಕನ್ನಡ ತೆಲುಗು, ತಮಿಳು ಚಿತ್ರರಂಗದಂತೆ ಬೆಳೆಯುವಂತಾಗಲಿ ಎಂದರು.
ಪ್ರಮುಖರಾದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ಕಿಶೋರ್ ಡಿ. ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಜಗದೀಶ್ ಅಧಿಕಾರಿ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಿಶೋರ್ ಕೊಟ್ಟಾರಿ, “ಏಸ’ ನಿರ್ಮಾಪಕರಾದ ಉದಯ ಶೆಟ್ಟಿ ಕಾಂತಾವರ, ಉದಯ ಸಾಲ್ಯಾನ್, ನಟರಾದ ಅರವಿಂದ ಬೋಳಾರ್, ಉದಯ ಶೆಟ್ಟಿ ಇನ್ನಾ, ಭೋಜರಾಜ್ ವಾಮಂಜೂರು, ರಾಹುಲ್, ರಾಧಿಕಾ, ಶೋಭರಾಜ್ ಪಾವೂರು, ಎಂ.ಎನ್. ಜಯಂತ್ ಮೊದಲಾದವರು ಉಪಸ್ಥಿತರಿದ್ದರು. ವಿನಿತ್ ಕಾರ್ಯಕ್ರಮ ನಿರ್ವಧಿಹಿಸಿದರು.