Advertisement

ಸಚಿನ್‌ ಪೈಲಟ್‌ಗೆ ಟೋಂಕ್‌ ನವಾಬರ ಬೆಂಬಲ; ಮತ ಹಾಕಲು ಒತ್ತಾಯ

12:15 PM Nov 22, 2018 | Team Udayavani |

ಜೈಪುರ : ಮುಂಬರುವ ರಾಜಸ್ಥಾನ ವಿಧಾನ ಸಭಾ ಚುನಾವಣೆಯಲ್ಲಿ  ಕಾಂಗ್ರೆಸ್‌ ಅಭ್ಯರ್ಥಿ ಸಚಿನ್‌ ಪೈಲಟ್‌ಗೆ ಟೋಂಕ್‌ನ ಮಾಜಿ ನವಾಬ ಕುಟುಂಬ ತನ್ನ ಬೆಂಬಲವನ್ನು ಪ್ರಕಟಿಸಿದೆ. 

Advertisement

ಟೋಂಕ್‌ನ ನವಾಬ ಅಫ್ತಾಬ್‌ ಅಲಿ ಖಾನ್‌ ಅವರು ತನ್ನ ಸಮುದಾಯದ ಸದಸ್ಯರಿಗೆ ಪೈಲಟ್‌ಗೆ ಮತ ಹಾಕುವಂತೆ ಒತ್ತಾಯಿಸಿದ್ದಾರೆ. ಟೋಂಕ್‌ ನವಾಬರು  ಪಟ್ಟಣದಲ್ಲಿ ಭಾರೀ ಪ್ರಭಾವವನ್ನು ಹೊಂದಿದ್ದಾರೆ. ಆದರೆ ಅವರು ರಾಜಕಾರಣದಲ್ಲಿ ಇಲ್ಲ. 

ಸಚಿನ್‌ ಪೈಲಟ್‌ ವಿರುದ್ದ ಬಿಜೆಪಿ, ಸಾರಿಗೆ ಸಚಿವ ಯೂನುಸ್‌ ಖಾನ್‌ ಅವರನ್ನು ಕಣಕ್ಕಿಳಿಸಿದೆ. ಇವರು ಪಕ್ಷದ ಏಕೈಕ ಮುಸ್ಲಿಂ ಮುಖವಾಗಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next