Advertisement

ಮಸ್ಕಿ ಕ್ಷೇತ್ರದಲ್ಲಿ ಐದು ಕಡೆ ಮತಯಂತ್ರ ದೋಷ

11:06 AM Apr 17, 2021 | Team Udayavani |

ರಾಯಚೂರು: ಮತದಾನ ಆರಂಭವಾಗುತ್ತಿದ್ದಂತೆ ಮಸ್ಕಿ ಕ್ಷೇತ್ರದ ಐದು ಕಡೆ ವಿವಿ ಪ್ಯಾಟ್ ಹಾಗೂ ಇವಿಎಂಗಳಲ್ಲಿ ದೋಷ ಕಂಡುಬಂದಿದ್ದು, ಕೂಡಲೇ ಬದಲಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ್ ತಿಳಿಸಿದರು.

Advertisement

ಮಸ್ಕಿಯ ಸಖಿ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರ ಅವರು, ಎಲ್ಲೆಡೆ ಶಾಂತಿಯುತ ಮತದಾನ ನಡೆಯುತ್ತಿದೆ. ಎರಡು ಸಿಆರ್ ಪಿಎಫ್ ತುಕಡಿ ಹಾಗೂ ನಾಲ್ಕು ಕೆಎಸ್ ಆರಪಿ ತುಕಡಿ ಜತೆಗೆ ಬೇರೆ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಎಲ್ಲಿಯೂ ಅಹಿತಕರ ಘಟನೆಗಳು ಜರುಗಿಲ್ಲ ಎಂದರು.

ಕ್ಷೇತ್ರದಲ್ಲಿ ಒಟ್ಟು 7  ಜನ ಮತದಾರರಿಗೆ ಕೋವಿಡ್ ಪಾಸಿಟಿವ್ ಇದೆ. ಸೊಂಕಿತರು ಮತ್ತು ಸೊಂಕಿತರ ಸಂಪರ್ಕಿತರಿಗೆ ಸಂಜೆ 6  ರಿಂದ 7  ರವರೆಗೆ ಮತದಾನಕ್ಕೆ ಸಮಯ ನಿಗದಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next