Advertisement
ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳಿನಿಂದ ಅದಮಾರು ಮೂಲಕವಾಗಿ ಮುದರಂಗಡಿಯನ್ನು ಸಂಪರ್ಕಿಸುವ ರಸ್ತೆಯಲ್ಲಿನ ಬಡಾ ಗ್ರಾ. ಪಂ. ವ್ಯಾಪ್ತಿಯ ಎರ್ಮಾಳು – ಮೂಡಬೆಟ್ಟು ಬಳಿ ಹರಿಯುವ ಹೊಳೆಗೆ ಅಡ್ಡಲಾಗಿ ಹಳೆ ಸೇತುವೆಯನ್ನು ಕೆಡಹಿ ನಿರ್ಮಿಸಲಾಗಿರುವ ನೂತನ ಸೇತುವೆ ಕಾಮಗಾರಿಗೆ ಸ್ಥಳಿಯರೇ ಕಳಪೆ ಕಾಮಗಾರಿಯೆಂಬ ಹಣೆಪಟ್ಟಿ ಕಟ್ಟಿದ್ದಾರೆ.
ಸೇತುವೆಯ ಮೇಲ್ಭಾಗದಲ್ಲಿನ ಒಂದು ಬದಿಯ ಕಾಂಕ್ರೀಟ್ ಹಾಸು ಹಲವು ತುಂಡುಗಳಾಗಿ ಬೇರ್ಪಟ್ಟಿದ್ದು, ಸೇತುವೆಯನ್ನು ಪ್ರವೇಶಿಸಿರುವ ಎರಡೂ ಬದಿಯಲ್ಲೂ ಇದೇ ರೀತಿಯ ತೊಂದರೆ ಎದ್ದು ಕಾಣುತ್ತಿದೆ.
ಸೇತುವೆಯನ್ನು ಪ್ರವೇಶಿಸುವ ಎರಡು ಬದಿಯಲ್ಲೂ ರಸ್ತೆ ಮತ್ತು ಸೇತುವೆಯ ನಡುವಿನ ಪ್ರದೇಶದಲ್ಲಿ ಹೊಂಡ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಭಾರೀ ಅಪಾಯದ ಮುನ್ಸೂಚನೆ ದೊರಕಿದೆ.
Related Articles
ಸೇತುವೆಯ ಎರಡೂ ಬದಿಯಲ್ಲಿ ಬೇಕಾದಷ್ಟು ಮಣ್ಣು ತುಂಬಿಸದೇ ಇರುವ ಕಾರಣ ಎರಡೂ ಬದಿಯ ರಸ್ತೆಯು ಜಗ್ಗಿದಂತಾದ ಪರಿಣಾಮ ಹೊಂಡ ಬಿದ್ದಿದೆ. ಇನ್ನು ಸೇತುವೆ ಕಾಮಗಾರಿ ಸಂದರ್ಭ ಅಳವಡಿಸಲಾಗಿರುವ ಸಿಮೆಂಟ್ ಸ್ಲಾ$Âಬ್‌ಗಳಿಗೆ ಅಗತ್ಯವಿರುವಷ್ಟು ನೀರು ಲಭಿಸಿದ ಕಾರಣ ಕಾಂಕೀÅಟ್ ಒಡೆಯಲಾರಂಭಿಸಿದೆ. ಸೇತುವೆಯ ಎತ್ತರ ಹಿಂದಿನ ಹಳೇ ಸೇತುವೆಗಿಂತಲೂ ಕಡಿಮೆಯಾಗಿರುವುದರಿಂದ ನೀರಿನ ಒಳಹರಿವಿಗೆ ತೊಂದರೆ ಉಂಟಾಗಿ, ಹಿಂದಿಗಿಂತಲೂ ಹೆಚ್ಚಿನ ನೆರೆ ಭೀತಿ ಉಂಟಾಗಿದೆ.
Advertisement
ಗುತ್ತಿಗೆದಾರರ ನಿರ್ಲಕ್ಷ್ಯವೇ ಮುಖ್ಯ ಕಾರಣಎರ್ಮಾಳು – ಮೂಡುಬೆಟ್ಟು ಸೇತುವೆಯ ಕಾಮಗಾರಿ ನಡೆಯುತ್ತಿರುವಾಗಲೇ ಹಿಂದಿನ ಸೇತುವೆಗಿಂತ ಈಗಿನ ಸೇತುವೆಯ ಅಗಲ ಕಿರಿದಾಗಿದೆ ಮತ್ತು ಸೇತುವೆಯ ಎತ್ತರವೂ ಕಡಿಮೆಯಾಗಿರುವ ಬಗ್ಗೆ ನಾವು ಗುತ್ತಿಗೆದಾರರಿಗೆ ಮೊದಲೇ ತಿಳಿಸಿದ್ದೆವು. ಆದರೆ ಅವರು ನಾವು ಇಲಾಖೆ ನೀಡಿರುವ ಸ್ಕೆಚ್‌ನಂತೆ ಕಾಮಗಾರಿ ನಡೆಸುತ್ತಿದ್ದೇವೆ, ಇಲಾಖೆ ಸೂಚಿಸಿರುವಂತೆ ಕಾಮಗಾರಿ ಮುಗಿಸುವುದಷ್ಟೇ ನಮ್ಮ ಕರ್ತವ್ಯ ಎಂದು ಪ್ರತ್ಯುತ್ತರ ನೀಡಿ ನಮ್ಮ ಬಾಯಿ ಮುಚ್ಚಿಸಿದ್ದರು ಎಂದು ಸ್ಥಳೀಯ ಪ್ರಗತಿಪರ ಕೃಷಿಕ / ಬಡಾ ಗ್ರಾ. ಪಂ. ಸದಸ್ಯ ಸಂತೋಷ್ ಶೆಟ್ಟಿ ಬರ್ಪಾಣಿ ತಿಳಿಸಿದ್ದಾರೆ. ಉದ್ಘಾಟನೆಗೆ ಮೊದಲೇ ಬಿರುಕು ?
ಎರ್ಮಾಳು – ಮೂಡಬೆಟ್ಟು ಸೇತುವೆಯ ಕಾಮಗಾರಿಯು 2015ರ ನವಂಬರ್‌ನಲ್ಲಿ ಪ್ರಾರಂಭಗೊಂಡು 2016ರ ಮೇ ತಿಂಗಳಲ್ಲಿ ಪೂರ್ಣಗೊಂಡಿದ್ದು, ಸ್ಥಳೀಯರು ನೀಡುವ ಮಾಹಿತಿ ಪ್ರಕಾರ ಸೇತುವೆ ಉದ್ಘಾಟನೆಗೆ ತೆಂಕ ಗ್ರಾ. ಪಂ. ಮತ್ತು ಬಡಾ ಗ್ರಾ. ಪಂ. ನಡುವಿನ ತಿಕ್ಕಾಟವಿದ್ದು, ಅದೇ ಕಾರಣದಿಂದಲೋ ಎಂಬಂತೆ ಕಾಮಗಾರಿ ಇದುವರೆಗೆ ಉದ್ಘಾಟನೆಯೂ ಆಗಿಲ್ಲ. ಮಾತ್ರವಲ್ಲದೇ ಇಲ್ಲಿನ ಸಮಸ್ಯೆಯ ಬಗ್ಗೆ ಹಿಂದೊಮ್ಮೆ ಗುತ್ತಿಗೆದಾರರನ್ನು ಮಾತನಾಡಿಸಿದಾಗ ಇಲ್ಲಿನ ಕಾಮಗಾರಿ ಪೂರ್ಣವಾಗಿಲ್ಲ ಎಂಬ ಉತ್ತರವೂ ದೊರಕಿತ್ತಂತೆ. ಆದರೆ ಕಳೆದ 6-7 ತಿಂಗಳಿಂದ ಕಾಮಗಾರಿಗಾಗಿ ಯಾರೂ ಕೂಡಾ ಇತ್ತ ಸುಳಿದಿಲ್ಲ, ಉಳಿದ ಕಾಮಗಾರಿಯೂ ನಡೆದಿಲ್ಲ ಎನ್ನುತ್ತಾರೆ ಸ್ಥಳೀಯರು. ಮೊದಲೇ ಎಚ್ಚರಿಸಿದ್ದ ಸ್ಥಳೀಯರು
ಸೇತುವೆ ಕಾಮಗಾರಿ ನಡೆಯು ತ್ತಿರುವಾಗಲೇ ಕಳಪೆ ಕಾಮಗಾರಿಯ ವಾಸನೆ ಬಡಿದಿದ್ದು, ಆ ಸಂದರ್ಭದಲ್ಲೇ ಸ್ಥಳೀಯರು ಗುತ್ತಿಗೆದಾರರು ಮತ್ತು ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದರಂತೆ. ಆದರೆ ಗುತ್ತಿಗೆದಾರರಾಗಲೀ, ಇಲಾಖಾಧಿಕಾರಿಗಳಾಗಲೀ ಯಾರೂ ಕೂಡಾ ಈ ಬಗ್ಗೆ ಗಮನ ಹರಿಸದ ಕಾರಣ ಕಾಮಗಾರಿ ಪೂರ್ಣ ಕಳಪೆಯಾಗಿ ಬಿಟ್ಟಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.