Advertisement

ಎರ್ಮಾಳು : ಕಳಪೆ ಕಾಮಗಾರಿಗೆ ತೇಪೆ ; ಬೈಕ್‌ ಸವಾರರಿಗೆ ಕಂಟಕ

02:20 AM Jul 15, 2017 | Team Udayavani |

ಕಾಪು : ರಾ. ಹೆ. 66ರ ಎರ್ಮಾಳ್‌ನಿಂದ ಮುದರಂಗಡಿಗೆ ತೆರಳುವ ರಸ್ತೆಯ ನಡುವಿನ ಅದಮಾರು ರೈಲ್ವೇ ಗೇಟ್‌ ಸಮೀಪದ ಮೂಡಬೆಟ್ಟು ಸೇತುವೆಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಸೇತುವೆಯ ಮೇಲ್ಭಾಗದ ಕಾಂಕ್ರೀಟ್‌ ಕಾಮಗಾರಿಯು ಉದ್ಘಾಟನೆಗೆ ಮೊದಲೇ ಬಿರುಕು ಬಿಟ್ಟಿರುವ ಬಗ್ಗೆ ಉದಯವಾಣಿಯಲ್ಲಿ ಪ್ರಕಟಿತ ವರದಿಯನ್ನು ನೋಡಿ ಇಲಾಖೆ ಮತ್ತು ಗುತ್ತಿಗೆದಾರರು ಎಚ್ಚೆತ್ತುಕೊಂಡು ಹಾಕಿದ್ದ ತೇಪೆ ಎರಡೇ ದಿನದಲ್ಲಿ ಮತ್ತೆ ಕಿತ್ತು ಹೋಗಿದೆ.

Advertisement

ಸೇತುವೆ ಬಿರುಕು ಬಿಟ್ಟಿರುವ ಬಗ್ಗೆ ಜು. 12ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿದ್ದು, ಅದೇ ದಿನ ಸಂಜೆಯೊಳಗೆ ಬಿರಕು ಬಿಟ್ಟಿದ್ದ ಮತ್ತು ಒಡೆದು ಹೋಗಿದ್ದ ಸೇತುವೆಯ ಮೇಲಿನ ಕಾಂಕ್ರೀಟ್‌ ಕಾಮಗಾರಿಗೆ ಗುತ್ತಿಗೆದಾರರು ತೇಪೆ ಹಚ್ಚಿದ್ದರು. ಆದರೆ ಅಲ್ಲಿ ನಡೆಸಲಾಗಿರುವ ತೇಪೆ ಕಾಮಗಾರಿಯು ಮತ್ತೆ ಎರಡು ದಿನಗಲ್ಲೇ ಕೊಚ್ಚಿ ಹೋಗಿದ್ದು, ಗುತ್ತಿಗೆದಾರರ ತೇಪೆ ಕಾಮಗಾರಿಯ  ಅವಸ್ಥೆ ಜನರನ್ನು ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿದೆ.

ತೇಪೆ ಹಚ್ಚಿದ ಬಳಿಕ ಅಪಘಾತದ ಸರದಿ ಬುಧವಾರ ಸಂಜೆಯ ವೇಳೆಗೆ ತೇಪೆ ಕಾಮಗಾರಿ ಮುಗಿಸಿದ ಗುತ್ತಿಗೆದಾರರ ಪರ ಕಾರ್ಮಿಕರು ಕಾಮಗಾರಿ ಹಾಳಾಗದಂತೆ ಮತ್ತು ಅದರ ಮೇಲೆ ವಾಹನಗಳು ಸಂಚರಿಸಬಾರದೆಂಬ ದೃಷ್ಠಿಯಿಂದ ಕಲ್ಲು ಮತ್ತು ಮರದ ತುಂಡುಗಳನ್ನು ಅಡ್ಡವಿರಿಸಿ ಹೋಗಿದ್ದರು. ಆದರೆ ಇದನ್ನು ಗಮನಿಸುವಲ್ಲಿ ವಿಫಲರಾದ ಕಾರಣ ಬೈಕ್‌ ಸವಾರರು ರಸ್ತೆಯಲ್ಲೇ ಮಗುಚಿ ಬೀಳುವಂತಾಗಿದ್ದು, ಕೆಲವು ಬೈಕ್‌ಗಳಿಗೆ ಇದರಿಂದಾಗಿ ಹಾನಿಯುಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next