Advertisement

ಏರ್‌ಇಂಡಿಯಾ ಖಾಸಗೀಕರಣ ?

03:50 AM Mar 01, 2017 | |

ಹೊಸದಿಲ್ಲಿ: ಭಾರತದ ಬಿಳಿಯಾನೆ ಖ್ಯಾತಿಯ ಏರ್‌ಇಂಡಿಯಾದ ಶೇ. 51ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಈ ಮೂಲಕ ನಷ್ಟದಲ್ಲಿರುವ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವ ಸರಕಾರದ ಮುಂದಿದೆ.

Advertisement

ನಷ್ಟದಲ್ಲಿರುವ ವೈಮಾನಿಕ ಸಂಸ್ಥೆಗೆ 3.6 ಶತಕೋಟಿ ಡಾಲರ್‌ ಉತ್ತೇಜನ ಪ್ಯಾಕೇಜ್‌ ನೀಡಿ ಅದನ್ನು ಮತ್ತೆ ಹಳಿಗೆ ತರಲು ಸರಕಾರ ನಡೆಸಿದ ಯತ್ನ ವಿಫ‌ಲವಾದ ಕಾರಣ, ಬಹುತೇಕ ಷೇರನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶೇ. 51ರಷ್ಟು ಷೇರುಗಳನ್ನು ಮಾರಾಟ ಮಾಡಿ, 5 ವರ್ಷದೊಳ ಗಾಗಿ ಏರ್‌ಇಂಡಿಯಾವನ್ನು ಆರ್ಥಿಕ ಸಂಕಷ್ಟದಿಂದ ಹೊರತರುವುದು ಸರಕಾರದ ಉದ್ದೇಶ. ಈ ಕುರಿತ ಮಾತುಕತೆಯು ಆರಂಭಿಕ ಹಂತ ದಲ್ಲಿದ್ದು, ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್‌.ಎನ್‌. ಚೌಬೆ ಹಾಗೂ ವಿತ್ತ ಸಚಿವಾಲಯದ ವಕ್ತಾರ ಡಿ.ಎಸ್‌. ಮಲಿಕ್‌ ಇದನ್ನು ತಳ್ಳಿಹಾಕಿದ್ದು, ಅಂಥ ಯಾವುದೇ ಯೋಜನೆ ಸರಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next