Advertisement
ಮಳೆಗಾಲಕ್ಕೆ ಇನ್ನೂ 6 ತಿಂಗಳು ಕಾಯಬೇಕಿದೆ. ಅಲ್ಲಿಯವರೆಗೆ ಬರ ಪರಿಸ್ಥಿತಿ ನಿಭಾಯಿಸಲು ಎಲ್ಲಾ ಇಲಾಖೆಗಳು ಸಜ್ಜಾಗಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಅಗತ್ಯ ಮೇವಿನ ದಾಸ್ತಾನು ಹಾಗೂ ನರೇಗಾ ಯೋಜನೆಯಿಂದ ಕೆಲಸ ನೀಡುವ ಮೂಲಕ ಪರಿಸ್ಥಿತಿ ನಿಭಾಯಿಸಬೇಕು ಎಂದರು.
Related Articles
Advertisement
ಆಗ ಮಧ್ಯ ಪ್ರವೇಶಿಸಿದ ಉಮಾಶಂಕರ್, ಬೆಂಗಳೂರಿನಲ್ಲಿ 400, ಚಿತ್ರದುರ್ಗದಲ್ಲಿ 600 ರೂ.ಗೆ ಒಂದು ಟ್ಯಾಂಕರ್ ನೀರು ದೊರೆಯುವಾಗ 800 ರೂಗಳು ಜಾಸ್ತಿಯಾಯಿತು ಮತ್ತೂಮ್ಮೆ ಪರಿಶೀಲಿಸಿ ಎಂದಾಗ, ಅಪರ ಜಿಲ್ಲಾಧಿಧಿಕಾರಿ ಪದ್ಮ ಬಸವಂತಪ್ಪ, ಕೆಲವು ಗ್ರಾಮಗಳು ದೂರದಲ್ಲಿರುವುದರಿಂದ ಆ ವ್ಯತ್ಯಾಸ ಆಗುತ್ತಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆ ಕುರಿತ ಚರ್ಚೆ ವೇಳೆ ಮಾತನಾಡಿದ ಜಿಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಸಾಲಿಗೆ ಜಿಲ್ಲೆಗೆ 42.84 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, ಇದೀಗ 100 ರಿಂದ 150 ಮಾನವ ದಿನಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಪ್ರತಿ ತಾಲ್ಲೂಕಿನಲ್ಲಿ 5000 ದಿನಗಳು ಸೃಷ್ಟಿಯಾಗಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಮಾಶಂಕರ್, ಖಾತ್ರಿ ಯೋಜನೆಯಡಿ ಹೆಚ್ಚು ಜನರು ಕೆಲಸ ಮಾಡಲು ಪರಿಣಾಮಕಾರಿ ರೀತಿಯಲ್ಲಿ ಮನವೊಲಿಸಬೇಕು. ರಾಜ್ಯ ಸರ್ಕಾರ ನೀಡಿದ ಅನುದಾನದಲ್ಲಿ ಕಾರ್ಮಿಕರಿಗೆ ಪಾವತಿಸಿ, ಕೇಂದ್ರದ ಅನುದಾನದಲ್ಲಿ ಘಟಕಗಳ ಖರ್ಚಿಗೆ ಉಪಯೋಗಿಸಬಹುದು ಎಂದರು.
ಕೃಷಿ ಇಲಾಖೆ ಜಂಟಿ ನಿದೇಶಕ ವಿ. ಸದಾಶಿವ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಹವಾಮಾನ ಆಧಾರಿತ 4563, ಕೃಷಿ ಇಲಾಖೆಯಲ್ಲಿ 25000 ರೈತರು ಫಸಲ್ ಬಿಮಾ ಯೋಜನೆ ಅಡಿ ವಿಮೆ ಮಾಡಿಸಿದ್ದಾರೆ. ಈ ಬಾರಿ ಶೇ.50 ಇಳುವರಿ ಕಡಿಮೆ ಆಗಿದೆ. ಶೇಂಗಾ ಮತ್ತು ರಾಗಿ ಬೆಳೆಯಲ್ಲಿ ಹೆಚ್ಚು ನಷ್ಟ ಆಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಧಿಕಾರಿ ಎಸ್. ಅಶ್ವತಿ, ಉಪ ಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ, ಯೋಜನಾ ನಿರ್ದೇಶಕ ರಂಗಸ್ವಾಮಿ, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.