Advertisement

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣಿಗೆ ಸಮಪಾಲು

11:14 AM Oct 06, 2018 | |

ಕಲಬುರಗಿ: ಶರಣಬಸವೇಶ್ವರ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಮಹಿಳಾ ಸುರಕ್ಷಕೋಶದ ಅಡಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಾನೂನು ಅರಿವು-ನೆರವು ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಹಿರಿಯ ಸಿವಿಲ್‌ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾ| ಎಸ್‌. ಆರ್‌. ಮಾಣಿಕ್ಯ ಕಾರ್ಯಕ್ರಮ ಉದ್ಘಾಟಿಸಿ ಕಾನೂನು ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಜನನ ಮತ್ತು ಮರಣ ಪತ್ರ ಪಡೆಯುವುದರ ಮಹತ್ವ, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕರಿಗೆ ಸಹಾಯವಾಗುವ ಕಾಯ್ದೆ, ಸಂವಿಧಾನದಲ್ಲಿ ಬರುವ ಹಕ್ಕು ಮತ್ತು ಕರ್ತವ್ಯಗಳು, ಮೋಟಾರ್‌ ವಾಹನ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಪಾಲು ಹಾಗೂ ಮತ್ತಿತರ ಕಾಯಿದೆಗಳ ಬಗ್ಗೆ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನ್ಯಾಯವಾದಿ ಸಂಗೀತಾ ಪಾಟೀಲ ಕೋಬಾಳ, ಮಹಿಳಾ ಹಕ್ಕುಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಂವಿಧಾನಾತ್ಮಕವಾಗಿ
ಹಾಗೂ ಕಾನೂನುಬದ್ಧವಾಗಿ ಮಹಿಳೆಯರು ಪಡೆಯಬಹುದಾದ ಹಕ್ಕುಗಳು, ಲಿಂಗಸಮಾನತೆ, ಲೈಂಗಿಕ ದೌರ್ಜನ್ಯ, ಭ್ರೂಣಹತ್ಯೆ, ವರದಕ್ಷಿಣೆಯಂತಹ ಸಮಸ್ಯೆಗಳಿಗೆ ಯಾವ ರೀತಿಯ ಕಾನೂನು ನೆರವು ಪಡೆಯಬಹುದೆಂದು ತಿಳಿಸಿದರು. 

ಕಾಲೇಜಿನ ಪ್ರಾಂಶುಪಾಲ ಡಾ| ಡಿ.ಟಿ. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸುರಕ್ಷಾ ಕೋಶದ ಸಂಯೋಜಕಿ ಪ್ರೊ|
ಜಗದೇವಿ ಗುಡ್ಡಾ ಸ್ವಾಗತಿಸಿದರು. ಕುಮಾರಿ ಅಂಬಿಕಾ ನಿರೂಪಿಸಿದರು, ಕುಮಾರಿ ಸುನಿತಾ ಪ್ರಾರ್ಥಿಸಿದರು, ಕುಮಾರಿ ಸುಪ್ರಿಯಾ ಪಾಟೀಲ ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ| ಎಸ್‌.ಟಿ. ಸುಲೆಪೇಟಕರ್‌, ಡಾ| ಬಿ.ಡಿ.
ಮಾಲಿಪಾಟೀಲ, ಡಾ| ಎಸ್‌.ಎ. ಮಾಲಿಪಾಟೀಲ, ಡಾ| ಚಿತ್ರಲೇಖಾ ಆಲೂರ, ಡಾ| ಶೈಲಾ ಹಿರೇಮಠ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next