Advertisement
ಕಳೆದ ತಿಂಗಳ ಅಂತ್ಯದಲ್ಲಿ ಅಮೆರಿಕದಲ್ಲಿ ಸಮಾನ ರೀತಿಯಲ್ಲಿ ವೇತನ ನೀಡುತ್ತಿರುವುದಾಗಿ ಅಡೋಬ್ ಘೋಷಿಸಿತ್ತು.ಈ ಬಗ್ಗೆ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಸಂಸ್ಥೆ “ಭಾರತದಲ್ಲೂ ನಾವು ಸಮಾನ ವೇತನ ಸಾಧಿಸಿದ್ದೇವೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಭಾರತದಲ್ಲಿಯ ನಮ್ಮ ಉದ್ಯೋಗಿಗಳ ಒಟ್ಟು ಸಂಖ್ಯೆಯಲ್ಲಿ ಶೇ.80ರಷ್ಟು ಉದ್ಯೋಗಿಗಳು ಲಿಂಗ ತಾರತಮ್ಯವಿಲ್ಲದೇ ವೇತನ ಪಡೆಯುತ್ತಿದ್ದಾರೆ. ಬಾಕಿ ಶೇ.20ರಷ್ಟು ಉದ್ಯೋಗಿಗಳು ಉದ್ಯೋಗ ನಿಮಿತ್ತ ಹೊರದೇಶಗಳಲ್ಲಿದ್ದಾರೆ. ಅವರಿಗೂ ಸಮಾನ ವೇತನ ನೀಡಲು ಪ್ರಯತ್ನಿಸಲಾಗುತ್ತಿದೆ’ ಎಂದಿದೆ. ಕಳೆದ ವರ್ಷ ಗೂಗಲ್‌ನಲ್ಲಿ ಪುರುಷರಿಗೆ, ಮಹಿಳೆಯರಿಗೆ ಸಮಾನವಾಗಿ ವೇತನ ಕೊಡಲಾಗುತ್ತಿಲ್ಲ ಎಂಬ ವರದಿಗಳ ಬಗ್ಗೆ ಭಾರಿ ಟೀಕೆ ವ್ಯಕ್ತವಾಗಿತ್ತು. Advertisement
ಅಡೋಬ್ ಇಂಡಿಯಾದಲ್ಲಿ ಸಮಾನ ವೇತನ ಜಾರಿ
06:45 AM Feb 01, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.