Advertisement

Epson ಇಕೊ ಟ್ಯಾಂಕ್ ಪ್ರಿಂಟರ್: ರಶ್ಮಿಕಾ ಮಂದಣ್ಣ ಅಭಿಯಾನ

02:42 PM Sep 20, 2024 | Team Udayavani |

ಬೆಂಗಳೂರು: ಡಿಜಿಟಲ್ ಇಮೇಜಿಂಗ್ ಮತ್ತು ಮುದ್ರಣ ಪರಿಹಾರಗಳಲ್ಲಿ ವಿಶ್ವದ ಮುಂಚೂಣಿಯ ಎಪ್ಸನ್ ತನ್ನ ಇಕೊಟ್ಯಾಂಕ್ ಪ್ರಿಂಟರ್ ಗಳ ಕುರಿತು ತಮ್ಮ ಬ್ರಾಂಡ್ ರಾಯಭಾರಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಹೊಚ್ಚಹೊಸ ಅಭಿಯಾನ ಪ್ರಾರಂಭಿಸಿದೆ.

Advertisement

ಎಪ್ಸನ್ ತನ್ನ ವೈವಿಧ್ಯಮಯ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಲಿದೆ. ಇದರಲ್ಲಿ ತಮ್ಮ ಸ್ಕೂಲ್ ಪ್ರಾಜೆಕ್ಟ್ ಗಳಿಗೆ ಪ್ರಿಂಟರ್ ಗಳನ್ನು ಬಳಸುವ, ಕಡ್ಡಾಯವಾಗಿ ಹೊಂದಿರಬೇಕಾದ ದಾಖಲೆಗಳ ಮುದ್ರಿಸುವ ಕಾರ್ಪೊರೇಟ್ ಗಳು ಮತ್ತು ತಮ್ಮ ದೈನಂದಿನ ಕೆಲಸಗಳಿಗೆ ಪ್ರಿಂಟರ್ ಗಳನ್ನು ಬಳಸುವ ಫೋಟೋಕಾಪಿ ಮಳಿಗೆಗಳನ್ನು ಸ್ಥಾಪಿಸಿದೆ.

ಎಪ್ಸನ್ ಕಡಿಮೆ ವೆಚ್ಚ, ಬಣ್ಣದ ಮುದ್ರಣವನ್ನು ತನ್ನ ಇಕೊಟ್ಯಾಂಕ್ ಪ್ರಿಂಟರ್ ಗಳಲ್ಲಿ 33 ಪೈಸೆ ಬೆಲೆಯಿಂದ ಪ್ರಾರಂಭಿಸಿ ನೀಡುತ್ತದೆ. ಎಪ್ಸನ್‌ ಎಲ್‌ 3260 ಪ್ರಿಂಟರ್‌ ಬೆಲೆ 18,999 ರೂ. ಇದೆ.

2023ರ ಹಣಕಾಸು ವರ್ಷದಲ್ಲಿ ಮಾರುಕಟ್ಟೆಯಲ್ಲಿ ಶೇ.40.69ರಷ್ಟು ಮಾರುಕಟ್ಟೆ ಪಾಲಿನ ಮೂಲಕ ತನ್ನ ನಾಯಕತ್ವ ಸ್ಥಾನವನ್ನು ಕಾಪಾಡಿಕೊಂಡಿದೆ.

Advertisement

ಎಪ್ಸನ್ ಇಂಡಿಯಾದ ಸೀನಿಯರ್ ಜನರಲ್ ಮ್ಯಾನೇಜರ್-ಐಜೆಪಿ

ಶಿವಕುಮಾರ್ ಮಾತನಾಡಿ, “ಎಪ್ಸನ್ ಇಂಕ್ ಟ್ಯಾಂಕ್ ಮುದ್ರಣ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ಭಾರತದಲ್ಲಿ 7 ಮಿಲಿಯನ್ ಇಕೊಟ್ಯಾಂಕ್ ಪ್ರಿಂಟರ್ ಗಳು ಮಾರಾಟವಾಗಿವೆ. ಇಕೊಟ್ಯಾಂಕ್ ತನ್ನ ಬಿಡುಗಡೆಯ ದಿನದಿಂದಲೂ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಇಂಕ್ ಟ್ಯಾಂಕ್ ಪ್ರಿಂಟರ್ ಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next