Advertisement

ಬಿಸಿಲು ಮಳೆಯ ಜೋಡಾಟ: ಸಾಂಕ್ರಾಮಿಕ ರೋಗಗಳ ಆತಂಕ

12:35 AM Sep 08, 2021 | Team Udayavani |

ಮಂಗಳೂರು/ಉಡುಪಿ : ಹವಾಮಾನ ವೈಪರೀತ್ಯದಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಬಿಸಿಲು- ಮಳೆಯ ಜೋಡಾಟ ಕಂಡುಬರುತ್ತಿದ್ದು ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದೆ.

Advertisement

ಈಗಾಗಲೇ ವೈರಲ್‌ ಜ್ವರ, ಶೀತ, ನೆಗಡಿಯಂ ತಹ ಸಮಸ್ಯೆಗಳಿಂದ ಹಲವರು ಬಳಲು ತ್ತಿದ್ದು, ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ

ಮಲೇರಿಯಾ, ಡೆಂಗ್ಯೂ ಮಾತ್ರವಲ್ಲದೆ ಇತರ ವೈರಲ್‌ ಜ್ವರದ ಪ್ರಮಾಣ ಹೆಚ್ಚಳವಾಗುವ ಭೀತಿ ಇದೆ. ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಡೆಂಗ್ಯೂ ಜಾಸ್ತಿ ಇದ್ದರೆ, ಮಂಗಳೂರು ನಗರ ದಲ್ಲಿ ಮಲೇರಿಯಾ ಜಾಸ್ತಿ ಇದೆ. ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯೂ ತೀವ್ರತೆ ಹೆಚ್ಚು.

ನಿಂತ ನೀರಿನಲ್ಲಿ ಕೇವಲ 7 ದಿನಗಳೊಳಗೆ ಸೊಳ್ಳೆಗಳು ಮೊಟ್ಟೆ ಇಟ್ಟು, ಮರಿಗಳಾಗಿ (ಲಾರ್ವಾ) ಬಳಿಕ ಸೊಳ್ಳೆಗಳಾಗಿ ಬೆಳವಣಿಗೆ ಹೊಂದುತ್ತವೆ. ಮಲೇರಿಯಾ ಮತ್ತು ಡೆಂಗ್ಯೂ

ಸೊಳ್ಳೆಗಳು ಶುದ್ಧ ನೀರಿನಲ್ಲಿ ಉತ್ಪತ್ತಿ ಆಗುತ್ತವೆ. ಮಲೇರಿಯಾ ಸೊಳ್ಳೆ ರಾತ್ರಿ ವೇಳೆ, ಡೆಂಗ್ಯೂ ಹರಡುವ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ.

Advertisement

ಮುನ್ನೆಚ್ಚರಿಕೆ ಕ್ರಮಗಳು :

ಸೊಳ್ಳೆಗಳು ಉತ್ಪತ್ತಿ ತಾಣದಿಂದ ಸುಮಾರು ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಹಾರಾಡುತ್ತಿರುತ್ತ¤ವೆ. ಒಂದು ಸೊಳ್ಳೆ ಒಂದು ಸಲ ಸರಾಸರಿ 100ರಂತೆ ತಿಂಗಳಲ್ಲಿ 3 ಬಾರಿ ಮೊಟ್ಟೆ ಇಡುತ್ತದೆ. ಅಂದರೆ ಒಂದು ಸೊಳ್ಳೆಯಿಂದ ತಿಂಗಳಿಗೆ 300 ಸೊಳ್ಳೆಗಳು ಹುಟ್ಟುತ್ತವೆ. ಸೊಳ್ಳೆಯ ಆಯುಷ್ಯಾವಧಿ 1 ತಿಂಗಳು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಅಧಿಕ :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 8 ತಿಂಗಳುಗಳಲ್ಲಿ (ಆಗಸ್ಟ್‌ ಅಂತ್ಯಕ್ಕೆ) 556 ಮಲೇರಿಯಾ,  176 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಮಲೇರಿಯಾದ ಶೇ. 85 ಪ್ರಕರಣಗಳು  ಮಂಗಳೂರು ನಗರದಲ್ಲಿ ಕಂಡುಬಂದಿವೆ. ಅದರಲ್ಲೂ ಫಾಲ್ಸಿಪಾರಂ (ಮೆದುಳಿನ ಮಲೇರಿಯಾ) ಪ್ರಕರಣಗಳು ಅಧಿಕ. ಡೆಂಗ್ಯೂ ಜ್ವರದ ಶೇ. 85 ಭಾಗ ಗ್ರಾಮಾಂತರ ತಾಲೂಕುಗಳಲ್ಲಿ  ಕಂಡುಬರುತ್ತಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿ ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಅಧಿಕ :

ಉಡುಪಿ ಜಿಲ್ಲೆಯಲ್ಲಿ ಕಳೆದ 8 ತಿಂಗಳುಗಳಲ್ಲಿ (ಆಗಸ್ಟ್‌ ಅಂತ್ಯಕ್ಕೆ) 306 ಡೆಂಗ್ಯೂ, 21ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಎರಡು ವರ್ಷಗಳಿಗೆ ಹೋಲಿಸಿದರೆ ಡೆಂಗ್ಯೂ ಸಂಖ್ಯೆ ಎರಡು ಪಟ್ಟು ಏರಿಕೆಯಾಗಿದೆ. 2020 ಜನವರಿಯಿಂದ ಆ. 31ರ ವರೆಗೆ 306 ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ಇದೇ ಸಮಯಕ್ಕೆ 2017ರಲ್ಲಿ 263, 2018ರಲ್ಲಿ 178, 2019ರಲ್ಲಿ 167ಪ್ರಕರಣಗಳು ಕಂಡುಬಂದಿದ್ದವು.

ಮುನ್ನೆಚ್ಚರಿಕೆ ಕ್ರಮಗಳು :

  • ಸೊಳ್ಳೆ ಉತ್ಪತ್ತಿಯ ತಾಣಗಳಾಗಿರುವ ಪ್ಲಾಸ್ಟಿಕ್‌, ಬಾಟಲಿ, ಎಳನೀರು ಚಿಪ್ಪು, ಮಡಕೆ, ಬಕೆಟ್‌, ಪಾತ್ರೆ, ಹಳೆ ಟೈರ್‌, ಟರ್ಪಾಲು ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.
  • ಡೆಂಗ್ಯೂ ಸೊಳ್ಳೆಯ ಮೊಟ್ಟೆ ಒಂದು ವರ್ಷ ಜೀವಂತವಾಗಿರುತ್ತದೆ. ನೀರಿನ ಆಶ್ರಯ ಅಥವಾ ಅನುಕೂಲಕರ ವಾತಾವರಣ ಸೃಷ್ಟಿಯಾದಾಗ ಮರಿಯಾಗುತ್ತದೆ. ಆದ್ದರಿಂದ ಪಾತ್ರೆ, ಬಾಟಲಿ, ಮಡಕೆ ಇತ್ಯಾದಿಗಳನ್ನು ಮುಚ್ಚಿ ಇಡುವುದರ ಜತೆಗೆ ಸ್ವತ್ಛವಾಗಿಯೂ ಇರಿಸಬೇಕು.
  • ಯಾವುದೇ ಜ್ವರ ಬಂದರೂ ಮೊದಲು ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲೇರಿಯಾ/ ಡೆಂಗ್ಯೂಗೆ ರಕ್ತ ಪರೀಕ್ಷೆ ಹಾಗೂ ಕೊರೊನಾಕ್ಕೆ ಸ್ವಾಬ್‌ (ಗಂಟಲ ದ್ರವ) ಪರೀಕ್ಷೆ.

ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಜನರಲ್ಲಿ ವಿವಿಧ ಜ್ವರ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯಿಂದ ಮಾತ್ರ ಸೊಳ್ಳೆಗಳ ನಿಯಂತ್ರಣ ಸಾಧ್ಯವಾಗದು; ಜನರಿಗೂ ಜವಾಬ್ದಾರಿ ಇದ್ದು, ಮನೆ, ಕಟ್ಟಡಗಳ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿ ಕೊಳ್ಳಬೇಕು. ತಮಗೂ ರೋಗ ಬಾರದಂತೆ ಇತರರಿಗೂ ಹರಡದಂತೆ ಎಚ್ಚರ ವಹಿಸಬೇಕು.– ಡಾ| ನವೀನ್‌ ಚಂದ್ರ ಕುಲಾಲ್‌, ಡಾ| ಪ್ರಶಾಂತ್‌ ಭಟ್‌ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ದ.ಕ. ಹಾಗೂ ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next