Advertisement

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

08:45 PM Dec 05, 2021 | Team Udayavani |

ನವದೆಹಲಿ : ನೌಕರರ ಭವಿಷ್ಯ ನಿಧಿ (ಇಪಿಎಫ್ಇ) ಖಾತೆಯಲ್ಲಿರುವ ಹಣದಿಂದ ಉದ್ಯೋಗಿಗಳು ಇನ್ನು ಮುಂದೆ ತಮ್ಮ ಎಲ್‌ಐಸಿ ವಿಮೆಯ ಪ್ರೀಮಿಯಂ ಪಾವತಿಸಬಹುದು! ಇಂಥದ್ದೊಂದು ಸೌಲಭ್ಯವನ್ನು ಇಪಿಎಫ್ ಸಂಸ್ಥೆ ಕಲ್ಪಿಸಿದೆ.

Advertisement

ಈ ಸೌಲಭ್ಯ ಪಡೆಯ ಬಯಸುವ ಖಾತೆದಾರರು, “ಫಾರ್ಮ್ ನಂಬರ್‌ 14’ನ್ನು ಭರ್ತಿ ಮಾಡಿ ಅದನ್ನು ಇಪಿಎಫ್ಒ ಕಚೇರಿಗೆ ಸಲ್ಲಿಸಬೇಕು. ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ, ಈ ಸೌಲಭ್ಯ ಪಡೆಯಬಯಸುವ ಇಪಿಎಫ್ ಖಾತೆದಾರನ ಖಾತೆಯಲ್ಲಿ , ಆತನ ಎಲ್‌ಐಸಿ ವಿಮೆಯ ಪ್ರೀಮಿಯಂನ ಎರಡು ವರ್ಷಗಳ ಮೊತ್ತದಷ್ಟು ಹಣವಿರಬೇಕು. ಹಾಗಿದ್ದರೆ ಮಾತ್ರ ಈ ಸೌಲಭ್ಯ ಸಿಗುತ್ತದೆ.

“ಈ ಸೌಲಭ್ಯ ಹೊಸದಾಗಿ ಕೊಳ್ಳುವ ಎಲ್‌ಐಸಿ ವಿಮೆಗೆ ಮಾತ್ರವಲ್ಲದೆ ಈಗಾಗಲೇ ಚಾಲ್ತಿಯಲ್ಲಿರುವ ಹಳೆಯ ವಿಮಾ ಯೋಜನೆಗಳೂ ಅನ್ವಯವಾಗುತ್ತವೆ” ಎಂದು ಹೂಡಿಕೆ ತಜ್ಞ ಪಂಕಜ್‌ ಮತ್ಪಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಶಿರಸಿ : ಸ್ವರ್ಣವಲ್ಲಿ ಶ್ರೀಗಳಿಂದ ಮಾಳವಿಕಾ ಪರಿಣಯ ಯಕ್ಷಗಾನ ಕೃತಿ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next