Advertisement

PF ಹಿಂಪಡೆಯುವ ನಿಯಮ ಬದಲು

10:05 AM Apr 18, 2018 | Team Udayavani |

ಹೊಸದಿಲ್ಲಿ: ಭವಿಷ್ಯ ನಿಧಿ ಕ್ಲೇಮ್‌ ಗಳ ಸಲ್ಲಿಕೆಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಬದಲಾವಣೆ ಮಾಡಿದೆ. ಕ್ಲೇಮ್‌ ಮೊತ್ತ 10 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಲಿಖೀತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಈ ನಿಯಮ ಎ.13 ರಿಂದ ಜಾರಿಗೆ ಬಂದಿದೆ. ಈ ಹಿಂದೆ EPFO ಆನ್‌ಲೈನ್‌ ಮೂಲಕ ಮಾತ್ರವೇ ಕ್ಲೇಮ್‌ಗಳನ್ನು ಸ್ವೀಕರಿಸುತ್ತಿತ್ತು. ಕ್ಲೇಮ್‌ಗಳನ್ನು ಆನ್‌ ಲೈನ್‌ ನಲ್ಲಿ ಸಲ್ಲಿಸಿದರೂ, ಕ್ಲೇಮ್‌ ಪರಿಶೀಲನೆಗಾಗಿ ಉದ್ಯೋಗದಾತರಿಗೆ ವಾಪಸ್‌ ಕಳುಹಿಸಲಾಗುತ್ತದೆ. ಅನಂತರವೇ ಕ್ಲೇಮ್‌ ಸೆಟಲ್‌ ಮಾಡಲಾಗುತ್ತದೆ. ಇಪಿಎಫ್ಒ ಕ್ಲೇಮ್‌ ನಮೂನೆಗಳನ್ನು ಕಳುಹಿಸಿದ 3 ದಿನಗಳೊಳಗಾಗಿ ಉದ್ಯೋಗದಾತರು ಅದನ್ನು ದೃಢೀಕರಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next