ನವದೆಹಲಿ: ಈ ಹಿಂದೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ)ಯ ಪಾಲುದಾರರಾಗಿದ್ದು, ಅನಿವಾರ್ಯ ಕಾರಣಗಳಿಂದಾಗಿ ಪಿಎಫ್ ಸಂಸ್ಥೆಯಿಂದ ದೂರಾದವರಿಗಾಗಿ ಇಪಿಎಫ್ಒ ಹೊಸದೊಂದು ಯೋಜನೆ ಆರಂಭಿಸಲು ಚಿಂತನೆ ನಡೆಸುತ್ತಿದೆ.
ಈ ರೀತಿ ಇಪಿಎಫ್ ನಿಂದ ದೂರಾದವರಿಗೆ ಮತ್ತೆ ಇಪಿಎಫ್ಒ ಸೌಲಭ್ಯ ಆರಂಭಿಸುವ ಯೋಚನೆಯಿದೆ ಎನ್ನಲಾಗಿದೆ. ಯಾವುದೋ ಸಂಸ್ಥೆಯಲ್ಲಿ ಕೆಲಸ ಮಾಡಿ, ಅಲ್ಲಿ ಇಪಿಎಫ್ಒ ಸೌಲಭ್ಯ ಪಡೆದು, ಅದರಿಂದ ಪಿಎಫ್ ಸೌಲಭ್ಯವಿಲ್ಲದ ಸಂಸ್ಥೆಗಳಿಗೆ ಕೆಲಸಕ್ಕೆ ಸೇರಿದವರಿಗೆ ಇದು ಸಹಕಾರಿಯಾಗಲಿದೆ.
ಅಂಥವರು ತಿಂಗಳಿಗೆ 500 ರೂಪಾಯಿ ಅಥವಾ ತಿಂಗಳ ಸಂಬಳ ಶೇ. 12ನ್ನು ಇಪಿಎಫ್ಒನಲ್ಲಿ ಇರಿಸಬಹುದು.
2018-20ರ ಅವಧಿಯಲ್ಲಿ 48 ಲಕ್ಷ ಉದ್ಯೋಗಿಗಳು ಇಪಿಎಫ್ಒನಿಂದ ಹೊರಗೆ ನಡೆದಿದ್ದಾರೆ. 2020-21ರ ಸಾಲಿನಲ್ಲಿ ಆ ಸಂಖ್ಯೆ ಅದಕ್ಕಿಂತಲೂ ಹೆಚ್ಚಿರುವ ಸಾಧ್ಯತೆಯಿದೆ. ಇದೀಗ ಸಂಸ್ಥೆ ತರಲಿಚ್ಛಿಸಿರುವ ಹೊಸ ಯೋಜನೆಯಿಂದ ಈ ಉದ್ಯೋಗಿಗಳಿಗೆ ಸಹಾಯವಾಗಲಿದೆ ಎನ್ನಲಾಗಿದೆ.