ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯಲ್ಲಿ ತಮ್ಮ ಕೊಡುಗೆ ನೀಡಬೇಕು. ಪರಿಸರ ಜೊತೆ ಬೆಸೆದುಕೊಂಡಿರುವ ಮನುಷ್ಯ ಪರಿಸರದಿಂದ ಬೇರ್ಪಟ್ಟರೆ ಅವನತಿ ಖಂಡಿತ ಎಂದು ಎಚ್ಚರಿಸಿದರು. ಎನ್‌ಸಿಸಿ ಆಧಿಕಾರಿ ಎಚ್.ಕೆ.ನಾಗೇಶ್ ಮಾತಾನಾಡಿ, ಪ್ರತಿಯೊಬ್ಬರೂ ಮರ ಬೆಳೆಸಿ, ನಾಡು
ಉಳಿಸಲು ಮುಂದಾಗಬೇಕು. ನೀರನ್ನು ಮಿತವಾಗಿ ಬಳಸಬೇಕು. ಇಂಧನ ಅಪವ್ಯಯ ಮಾಡಬಾರದು. ಅಗತ್ಯವಿದ್ದಾಗ ಮಾತ್ರ ವಿದ್ಯುತ್ ದೀಪಗಳನ್ನು ಉರಿಸಬೇಕು ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ತಿಳಿಸಿ ತಾವು ಕಲಿತದ್ದನ್ನು ಪೋಷಕರಿಗೆ ಹಾಗೂ ನೆರೆ ಹೊರೆಯವರಿಗೆ ತಿಳಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ಪ್ರತಿಯೊಬ್ಬರ ಹೊಣೆ. ಹಾಗಾಗಿ ಪರಿಸರಕ್ಕೆ ಪ್ರತಿಯೊಬ್ಬರ ಕೊಡುಗೆ ಅತ್ಯಮೂಲ್ಯ. ಜಾಗತಿಕ ತಾಪಮಾನ ಹೆಚ್ಚಳದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಮೊದಲ ಆದ್ಯತೆಯಾಗಿದೆ. ಆದರೆ ಪರಿಸರ ಕಾಳಜಿ ಸಸಿ ನೆಡುವುದಕಷ್ಟೇ ಸೀಮಿತವಾಗಿರದೇ ಸಂರಕ್ಷಿಸಿ ಪೋಷಿಸುವುದಾಗಿದೆ. ಪರಿಸರ ಮಾಲಿನ್ಯದಿಂದಾಗಿ ಇಂದು ಜಗತ್ತು ಸಂಕಷ್ಟಕ್ಕೆ ಸಿಲುಕಿದ್ದು, ಈ ಸಂಕಟದಿಂದ ಮನುಷ್ಯ ಪಾರಾಗಬೆಕಾದರೆ ಪ್ರತಿಯೊಬ್ಬರು ತಮ್ಮ ಮನೆ-ಹೊಲ-ಗದ್ದೆ ಇನ್ನಿತರ ಸ್ಥಳದಲ್ಲಿ ಮರಗಿಡಗಳನ್ನು
ಬೆಳೆಸಬೆಕಾಗಿದೆ. ಮುಂದೊಂದು ದಿನ ಇಡೀ ಮನಕುಲ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದರು. ಈ ವೇಳೆ ಬೆಟಾಲಿಯನ್ ಅಧಿಕಾರಿ ದೇವೆಂದ್ರ ಸಿಂಗ್, ಶಿಕ್ಷಕರಾದ ಮಂಜುನಾಥ್, ಮೋಹನ್, ಭಾರತೀ, ಜಯಲಕ್ಷ್ಮೀ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Advertisement