Advertisement

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

10:23 AM Apr 02, 2018 | Team Udayavani |

ಕಲಬುರಗಿ: ಮಾನವನ ಮಿತಿಯಿಲ್ಲದ ಆಸೆಯ ಪರಿಣಾಮ ಪರಿಸರ ಮತ್ತು ಕಾಡು ನಾಶವಾಗಿ ವನ್ಯಜೀವಿಗಳು ನಾಡಿಗೆ ಬರುವಂತಾಗಿದ್ದು, ಇದನ್ನು ತಡೆಯಬೇಕಾದರೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಯಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧಿಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌. ಆರ್‌. ಮಾಣಿಕ್ಯ ಹೇಳಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮತ್ತು ಸಹರಾ ಸೇವಾ ಸಂಸ್ಥೆ, ಸರ್ಕಾರಿ ಶಿಕ್ಷಕಿಯರ ತರಬೇತಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಜಲ ಸಂರಕ್ಷಣೆ ಕುರಿತು ಆಯೋಜಿಸಿದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೂರ್ಯ ನಗರಿ ಕಲಬುರಗಿಯಲ್ಲಿ ಬೇಸಿಗೆಯಲ್ಲಿ ತಾಪಮಾನ ವಿಪರೀತ ಹೆಚ್ಚಿರುತ್ತದೆ. ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ನೆಟ್ಟಲ್ಲಿ ಇಲ್ಲಿಯೂ ತಂಪಾದ ವಾತಾವರಣ ಇರುವಂತೆ ನೋಡಿಕೊಳ್ಳಬಹುದು. ಹೀಗಾಗಿ ಮನೆ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಗಿಡ-ಮರಗಳನ್ನು ಬೆಳೆಸಿ ಹಾಗೂ ನೀರು ಮಿತವಾಗಿ ಬಳಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ| ರಮೇಶ ಲಂಡನಕರ್‌ ಮಾತನಾಡಿ, ಅವೈಜ್ಞಾನಿಕ ವಸ್ತುಗಳ ಉಪಯೋಗದಿಂದ ಹೆಚ್ಚಿನ ಪ್ರಮಾಣದ ಕಾರ್ಬನ್‌ ಡಯಾಕ್ಸೈಡ್‌ ನಿಸರ್ಗದಲ್ಲಿ ಸೇರುತ್ತಿರುವ ಪರಿಣಾಮ ಭೂಮಿಯಲ್ಲಿ ನೀರು ಬತ್ತಿ ಹೋಗಿ ಗ್ಲೋಬಲ್‌ ವಾರ್ಮಿಂಗ್‌ ಆಗಿ ಪರಿಣಮಿಸಿದೆ.

ವಾಹನಗಳು, ಕಾರ್ಖಾನೆಗಳಿಂದ ಹೊರಹೋಗುವ ಗಾಳಿ, ವಿಷಾನೀಲ ನಿಸರ್ಗದಲ್ಲಿ ಸೇರಿಕೊಂಡು ಪರಿಸರ ಪ್ರದೂಶಣ ಆಗುವುದಲ್ಲದೆ ಭೂಮಿಯಲ್ಲಿ ತಾಪಮಾನ ಹೆಚ್ಚಾಗಿ ನಿಸರ್ಗದ ಋತುಮಾನದಲ್ಲಿ ಏರುಪೇರು ಕಾಣುತ್ತಿದ್ದೇವೆ. ಸಕಾಲದಲ್ಲಿ ಮಳೆ ಬಾರದೆ ರೈತ ಕಂಗಾಲಾಗುವ ಸ್ಥಿತಿ ಒಂದೆಡೆಯಾದರೆ, ಆಹಾರ ಕೊರತೆ ಮತ್ತೂಂದೆಡೆ ನಮ್ಮನ್ನು ಕಾಡುತ್ತಿದೆ ಎಂದರು.

Advertisement

ಪ್ರತಿ ಮನೆಯಲ್ಲೂ ಮಳೆ ನೀರು ಸಂಗ್ರಹಣೆ ಘಟಕ ಸ್ಥಾಪಿಸಬೇಕು ಅದಕ್ಕಾಗಿ ಮನೆ ಕಟ್ಟಡಕ್ಕೆ ಅನುಮತಿ ನೀಡುವ ಮೊದಲು ಈ ಷರತ್ತು ವಿಧಿಸಬೇಕು ಎಂದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರ ಎಸ್‌.ಎನ್‌.ದಿನೇಶ ಉದ್ಘಾಟಿಸಿದರು. ಸರ್ಕಾರಿ ಶಿಕ್ಷಕಿಯರ ತರಬೇತಿ ಕೇಂದ್ರ ಪ್ರಾಂಶುಪಾಲರಾದ ಬಸಂತಬಾಯಿ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ತಾಂತ್ರಿಕ ಸಹಾಯಕ ನಾರಾಯಣರಾವ್‌ ಇದ್ದರು. ಉಪನ್ಯಾಸಕಿ ಜಯಶೀಲಾ ನಿರೂಪಿಸಿದರು, ಎಂ.ಬಿ. ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next