Advertisement

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ:ದಿನೇಶ್‌ ಹೊಳ್ಳ

10:52 AM Oct 20, 2017 | Team Udayavani |

ಕೊಡಿಯಾಲ್‌ಬೈಲ್‌: ರಾಗತರಂಗ ಮಂಗಳೂರು ಸಂಸ್ಥೆಯ ವಾರ್ಷಿಕೋತ್ಸವವು ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಮುಖ್ಯ ಅತಿಥಿ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರ ಕಲಾವಿದ ದಿನೇಶ್‌ ಹೊಳ್ಳ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಬೆಟ್ಟ, ಗುಡ್ಡ, ನದಿ, ವೃಕ್ಷಗಳ ರಕ್ಷಣೆ ಮಹತ್ವದ್ದಾಗಿದೆ. ಅದನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

Advertisement

ಸಂರಕ್ಷಣೆಗೆ ಅರಿವು ಮುಖ್ಯ
ಅಧ್ಯಕ್ಷತೆ ವಹಿಸಿದ್ದ ಕೆ. ಸದಾನಂದ ಉಪಾಧ್ಯಾಯ ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಸಮಾಜಕ್ಕೆ ನಾವು ಉಪಕೃತರಾದ ಕೃತಾರ್ಥತೆಗೆ ಏನನ್ನಾದರೂ ನೀಡಬೇಕು.ಸಂಸ್ಕಾರಯುತ ಸಹಜೀವನದ ಬಗ್ಗೆ ಪೋಷಕರು ಮಕ್ಕಳಲ್ಲಿ ಎಳವೆಯಿಂದಲೇ ಜ್ಞಾನ ಮೂಡಿಸಬೇಕು ಎಂದು ಹೇಳಿದರು.

ವೃಕ್ಷೋಪಾಸಕ ಮಾಧವ ಉಳ್ಳಾಲ ಅವರನ್ನು ಅಭಿನಂದಿಸಲಾಯಿತು.ನಿಕಟಪೂರ್ವ ಅಧ್ಯಕ್ಷ ಡಾ| ದೇವರಾಜ್‌ ಸ್ವಾಗತಿಸಿದರು. ಕಾರ್ಯದರ್ಶಿ ಜಿ. ಕೆ. ಉಡುಪ ವಂದಿಸಿದರು. ಹೇಮಲತಾ, ಪೂರ್ಣಿಮಾ ರಾವ್‌, ಆಶಾ ಹೆಗ್ಡೆ ನಿರೂಪಿಸಿದರು. ಖಜಾಂಚಿ ವಾಮನ್‌ ಮೈಂದನ್‌ ಸಮನ್ವಯಕರಾಗಿದ್ದರು. ಜಯಶ್ರೀ ಅರವಿಂದ್‌, ಸೌಮ್ಯಾ ರಾವ್‌, ಜನಾರ್ದನ ಹಂದೆ ಸಹಕರಿಸಿದರು. ಅನಂತರ ರಾಗತರಂಗದ ಸದಸ್ಯರು ಹಾಗೂ ಮಕ್ಕಳಿಂದ ಮನೋರಂಜನ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next