Advertisement

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ

12:07 PM Jun 05, 2020 | mahesh |

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಮಾತನ್ನು ನಾವು ಚಿಕ್ಕಂದಿನಿಂದಲೇ ಕೇಳಿರುತ್ತೇವೆ. ಮಾತ್ರವಲ್ಲದೆ ಅದರ ಮೇಲೆ ಪ್ರೀತಿ, ಕಾಳಜಿಯು ಮುಖ್ಯವಾಗಿರುತ್ತದೆ. ಅದಕ್ಕನುಗುಣವಾಗಿ ವಿಶ್ವ ಪರಿಸರ ದಿನವೆಂದು ಜೂನ್‌ 5ರಂದು ಆಚರಿಸುತ್ತೇವೆ. ಈ ಮಾತು ಕೇವಲ ಆ ದಿನಕ್ಕನುಗುಣವಾಗಿರದೆ ಪ್ರತಿ ದಿನ ಸಾಧ್ಯವಾಗದಿದ್ದರೆ ವಾರಕ್ಕೊಮ್ಮೆಯಾದರೂ ಸಸ್ಯದ ಪೋಷಣೆ ಮಾಡಿದರೆ ಆ ಗಿಡವೇ ಮುಂದಿನ ಮರವಾಗಿ ನಾವು ಪ್ರಕೃತಿಗೆ ಕೊಟ್ಟ ಉಡುಗೊರೆಯಾಗುತ್ತದೆ.

Advertisement

ಪ್ರಸ್ತುತ ಕಾಲಘಟ್ಟದಲ್ಲಿ ನಮಗೆ ತಿಳಿದಿವೆ. ಈ ಜಗತ್ತಿನ ಅತಿ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಅತಿಹೆಚ್ಚು ಸ್ಥಾನ ನಮ್ಮ ದೇಶದಲ್ಲಿವೆಯೆಂದು ಏರ್ ಕ್ವಾಲಿಟಿ ರಿಪೋರ್ಟ್‌ ಹೇಳುತ್ತಿದೆ. ಪರಿಸ್ಥಿತಿ ಕೆಲವು ಕಡೆಗಳಲ್ಲಿ ಕೈ ಮೀರಿ ನಿಂತಿದೆ ಎನ್ನುವ ಸಂದರ್ಭದಲ್ಲಿ ಇಡೀ ವಿಶ್ವಕ್ಕೇ ಸವಾಲಾಗಿ ಕೋವಿಡ್ ಎಂಬ ವೈರಸ್‌ ನಿಂತಿದೆ. ಇದರಿಂದ ಎಷ್ಟೋ ಅಭಿವೃದ್ಧಿ ಕಾರ್ಯಗಳು ನಿಂತರೆ ಅತ್ತ ಪರಿಸರ ಕಳೆದು ಹೋಗಿದ್ದ ತನ್ನ ಜೀವಕಳೆ ಮರಳಿ ಪಡೆಯಿತು. ದೇವರ ಆಟ ಬಲ್ಲವರಾರು ಎಂಬಂತೆ ಈ ಸಮಯದ ಸದ್ವಿನಿಯೋಗವಾದಂತಾಯಿತು.

ಲೊಕ್ಡೌನ್‌ ಸಂದರ್ಭ ಅದೆಷ್ಟೋ ಧೂಳು ಮಿಶ್ರಿತ ಪ್ರದೇಶ ಕಡಿಮೆಯಾಯಿತು, ಕಲುಷಿತಗೊಂಡಿದ್ದ ನದಿಗಳು ಸ್ವಚ್ಛತೆಯಿಂದ ಕೂಡಿತು, ಅದಷ್ಟೇ ಅಲ್ಲದೆ ಪ್ರಾಣಿ- ಪಕ್ಷಿ ಸಂಕುಲಗಳು ನಿರ್ಭೀತಿಯಿಂದ ವಿಹರಿಸಿದವು. ಈ ಮಾತು ಏಕೆ ಬಂತೆಂದರೆ ಮನುಷ್ಯನ ದುರ್ಭುದ್ಧಿ ಹಾಗೂ ದುರಾಲೋಚನೆಯಿಂದ ಕಾಡು ಇದ್ದ ಜಾಗದಲ್ಲಿ ನಾಡು ಎದ್ದು ನಿಂತಿದೆ .ಇವೆಲ್ಲವೂ ಮುಖ್ಯ ಎಂದೆನಿಸಿದರೆ ಪರಿಸರ ರಕ್ಷಣೆ ಮಾತು ಏಕೆ ಬಹುಮುಖ್ಯವೆನಿಸಿಲ್ಲ? ಇವೆಲ್ಲ ಮನುಷ್ಯನ ಆಸೆ, ಆಕಾಂಕ್ಷೆಗಳನ್ನೂ ಮೀರಿ ದುರಾಸೆಯ ಪ್ರತಿಫ‌ಲವಾಗಿ ಇಂದು ಹಲವಾರು ಕಡೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿ ಗೋಚರಿಸಿದೆ. ಹಾಗೆಯೇ ವಾತಾವರಣದಲ್ಲಿ ಬಹಳಷ್ಟು ಬದಲಾವಣೆಗಳ ಜೊತೆಗೆ ವೈಪರೀತ್ಯದ ಪ್ರಭಾವ ತುಸು ಹೆಚ್ಚಾಗಿಯೇ ಇದೆ. ಇದೇ ಕಾರಣಕ್ಕಾದರೂ ಪರಿಸರ ರಕ್ಷಿಸಿ ಉಳಿಸಿ ಬೆಳೆಸಿಕೊಂಡರೆ ಪ್ರಸ್ತುತ ಪರಿಸ್ಥಿತಿ ತುಸು ಬದಲಾವಣೆಯ ಬಗ್ಗೆ ಯೋಚಿಸಬಹುದು. ಇದಲ್ಲದೇ ಕಟ್ಟು ನಿಟ್ಟಿನ ಕ್ರಮಗಳಿದ್ದರೂ ವಾಮ ಮಾರ್ಗದ ಮೂಲಕ ತಮ್ಮ ಕಾರ್ಯ ಸಫ‌ಲಗೊಳ್ಳುತ್ತದೆ.

ಇದಕ್ಕೆ ಮುನ್ಸೂಚನೆಯಂತೆ ಅತಿ ದಟ್ಟ ಅರಣ್ಯ ಎಂಬ ಖ್ಯಾತಿ ಗಳಿಸಿರುವ ಅಮೆಜಾನ್‌ ನ ಪಾಶ್ವ ಭಾಗ ಬೆಂಕಿಗಾಹುತಿ, ಆಸ್ಟ್ರೇಲಿಯಾದ ಬಹುತೇಕ ಹುಲ್ಲುಗಾವಲು ಪ್ರದೇಶ ಹಾಗೂ ಅರಣ್ಯ ಪ್ರದೇಶಗಳಲ್ಲಿ ವ್ಯಾಪಿಸಿದ ಬೆಂಕಿ ನಿಯಂತ್ರಣ ಸಾಧಿಸಲು ಹಲವಾರು ದಿನಗಳೇ ಬೇಕಾಯಿತು. ಹೀಗೆ ಹತ್ತು ಹಲವಾರು ದೇಶಗಳಲ್ಲಿ ವಿವಿಧ ಕಾರಣಗಳಿಂದ ಆದ ಅನಾಹುತ ನಮ್ಮ ಸಮಾಜದಲ್ಲಿ ಚರ್ಚೆ ನಡೆದದ್ದೂಇದೆ. ಮುಖ್ಯವಾಗಿ ಈಗಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿವೆ. ಮರಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ನಿರಾಯಾಸವಾಗಿ ಬದಲಿಸಬಹುದು ಈ ತಂತ್ರಜ್ಞಾನದ ಸಹಾಯದಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗವಿದೆ ಎಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರುವುದೋ ಅಷ್ಟೇ ಒಳಿತು ಕೆಡುಕಿನ ಸಂಭವವಿರುತ್ತದೆ. ಈಗಿನ ಬಹುತೇಕ ಕೆಲಸ ಕಾರ್ಯಗಳು ಕೇವಲ ಲಾಭ ನಷ್ಟದ ಪ್ರಮಾಣವನ್ನಾಧರಿಸಿದೆ. ಕಾರಣ ಲಾಭ ಮನುಷ್ಯನ ಗೌರವ ಪ್ರತಿಷ್ಠೆ ಮಾತಾದರೆ ನಷ್ಟ ಮಾನ ಮರ್ಯಾದೆ ಪ್ರಶ್ನೆಯಾಗಿ ಬದಲಾವಣೆಯಾಗಿದೆ. ಇದೇ ರೀತಿ ಪರಿಸರ ದಿನದ ಮಹತ್ವ ಪೂರ್ಣ ಸಾಕಾರಗೊಳಿಸುವ ಪ್ರಯತ್ನ ನಮ್ಮ ನಿಮ್ಮೆಲ್ಲರದಾಗಲಿ. ವೃಕ್ಷೊà ರಕ್ಷತಿ ರಕ್ಷಿತಃ

ನಾಗಪ್ರಸಾದ್‌, ಕಾಮತ್‌ , ಶ್ರೀಭುನೇಂದ್ರ ಕಾಲೇಜು ಕಾರ್ಕಳ

Advertisement
Advertisement

Udayavani is now on Telegram. Click here to join our channel and stay updated with the latest news.

Next