ಗೌರಿಬಿದನೂರು: ಸಮಾಜಸೇವೆ ಜತೆಗೆ ಸುತ್ತಲಿನ ಪರಿಸರ ಸ್ವಚ್ಛವಾಗಿಸಿ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವಂತೆ ಗಿಡನೆಟ್ಟು, ನೀರುಣಿಸಿ ಪೋಷಿಸುವ ಕಾರ್ಯ ಬದುಕಿಗೆ ನೆಮ್ಮದಿ ನೀಡುತ್ತದೆಎಂದು ಲಯನ್ಸ್ ಸಂಸ್ಥೆ ಜಿಲ್ಲಾ
ಗರ್ವನರ್ ಎಂ.ಬಿ. ದೀಪಕ್ ಸುಮನ್ ತಿಳಿಸಿದರು. ತಾಲೂಕಿನ ಆರ್ಕುಂದ ಗ್ರಾಮದಲ್ಲಿ ಲಯನ್ ಸಂಸ್ಥೆ ವತಿಯಿಂದ ಆಯೋಜಿಸಿದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಗ್ರಾಮೀಣಭಾಗದಲ್ಲಿ ಕೃಷಿ ಚಟುವಟಿಕೆ ಜೊತೆಯಲ್ಲಿ ರೈತರ ಜಮೀನು ಹಾಗೂ ಸರ್ಕಾರಿ ಭೂಮಿಯಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಮುಂದಿನ ಪೀಳಿಗೆ ಉಳಿವಿಗೆ ಕೈ ಜೋಡಿಸಿದಂತಾಗುತ್ತದೆ. ಮನುಕುಲಕ್ಕೆ ಅತ್ಯವಶ್ಯವಾಗಿರುವ ಗಾಳಿ ಮತ್ತುನೀರನ್ನು ಉಳಿಸಿ ಸ್ವಚ್ಛವಾಗಿಸುವ ಪ್ರಯತ್ನ ನಿಜಕ್ಕೂ ಉತ್ತಮವಾಗಿದೆ. ಪ್ರಾಣಿ ಮತ್ತು ಸಸ್ಯ ಸಂಕುಲವನ್ನು ಅವನತಿಯ ಅಂಚಿನಿಂದ ಉಳಿಸಬೇಕಾದರೆ ಅಂತರ್ಜಲ ಮಟ್ಟ ವೃದ್ಧಿಸಿ ಮಾಲಿನ್ಯ ತಪ್ಪಿಸಬೇಕಾಗಿದೆ ಎಂದರು.
ಸಾಮಾಜಿಕ ಅರಣ್ಯ ಇಲಾಖೆ ವಲಯ ಅಧಿಕಾರಿ ಎನ್.ಪದ್ಮಶ್ರೀ ಮಾತನಾಡಿ, ಸ್ಥಳೀಯ ನಾಗರಿಕರ ಜೊತೆಗೆ ವಿವಿಧ ಸಂಘ-ಸಂಸ್ಥೆಗಳು ಸೇರಿ ಗಿಡ ನೆಟ್ಟು ಪೋಷಿಸುವ ಕಾರ್ಯ ನಡೆದಲ್ಲಿ ಎಲ್ಲಡೆ ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ತಾಲೂಕು ಲಯನ್ ಸಂಸ್ಥೆಯ ಅಧ್ಯಕ್ಷ ಆರ್. ಜೆ.ಶ್ರೇಣಿಕ್ ಮಾತನಾಡಿದರು. ಇದೇ ವೇಳೆ ಸಾಮಾಜಿಕ ಅರಣ್ಯ ಇಲಾಖೆ ವಲಯ ಅಧಿಕಾರಿ ಎನ್.ಪದ್ಮಶ್ರೀ ಹಾಗೂ ಗ್ರಾಪಂ ಆಡಳಿತಾಧಿಕಾರಿ ಮುರಳೀಧರ್ ಅವರನ್ನು ಸನ್ಮಾನಿಸಲಾಯಿತು.
ಲಯನ್ ಸಂಸ್ಥೆಯ ಪದಾಧಿಕಾರಿಗಳಾದ ರಾಜಶೇಖರಯ್ಯ, ಮನೋಹರನ್ ನಂಬಿಯಾರ್, ಪ್ರಭುಸ್ವಾಮಿ, ಶ್ರೀನಿವಾಸ್, ಜಿ.ಎನ್. ಸೂರಜ್, ಶ್ರೀಧರ್, ಜಗನ್ನಾಥ್ ರೆಡ್ಡಿ, ಇ.ಎಸ್. ಸತೀಶ್ ಕುಮಾರ್, ವಿ.ರವೀಂದ್ರನಾಥ್, ವೈ.ಎನ್. ಅಂಬಿಕಾ, ಲಕ್ಷ್ಮೀ, ಸಂಕೇತ್ ಶ್ರೀರಾಮ…, ನರಸಿಂಹ ಮೂರ್ತಿ, ರವಿಶಂಕರ್, ಡಿ. ಅಶ್ವತ್ಥ ರೆಡ್ಡಿ, ಪ್ರೊ.ಕೆ. ರಾಮಾಂಜ ನೇಯಲು, ಮುಖಂಡರಾದ ಕೆ.ಆರ್. ಸಪ್ತಗಿರಿ, ಎಸ್.ವಿ. ಕೃಷ್ಣಕುಮಾರಿ, ಶೈಲಜಾ, ಶಾಂತಿ ಸೂರಜ್, ಆನಂದ್, ದೇವರಾಜ್, ರವಿಕುಮಾರ್, ಪದ್ಮರಾಜ್, ಮುರಳೀಧರ್ ಭಾಗವಹಿಸಿದ್ದರು.