Advertisement

ಕಂದಾಯೋತ್ಸವದಲ್ಲಿ ಪರಿಸರ ಮಾಲಿನ್ಯ: ಆಕ್ರೋಶ

01:11 PM Feb 28, 2021 | Team Udayavani |

ಚನ್ನರಾಯಪಟ್ಟಣ: ಒಂದು ದಶಕದ ನಂತರ ತಾಲೂಕಿನಲ್ಲಿ ಕಂದಾಯೋತ್ಸವವನ್ನು ತಾಲೂಕುಆಡಳಿತ ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ ಸಂಘಟಿಸಿದೆ. ಆದರೆ, ಕ್ರೀಡಾಂಗಣದ ಪ್ರಾಂಗಣದಲ್ಲಿ ಮದ್ದು ಗುಂಡು ಸಿಡಿಸುವ ಮೂಲಕ ಪರಿಸರ ಮಾಲಿನ್ಯ ಮಾಡಿದ್ದು ಎಷ್ಟು ಸರಿ ಎಂದು ಪರಿಸರ ವಾದಿಗಳು ಪ್ರಶ್ನಿಸುತ್ತಿದ್ದಾರೆ.

Advertisement

ಸರ್ಕಾರ ಪರಿಸರ ಮಾಲಿನ್ಯ ತಪ್ಪಿಸಲು ಅದಕ್ಕಾಗಿಯೇ ಪ್ರತ್ಯೇಕ ಇಲಾಖೆ ತೆರೆದಿದೆ. ಆದರೆ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಸಭೆ ಸಮಾರಂಭದಲ್ಲಿ ಸಾವಿರಾರು ಪಟಾಕಿ ಸಿಡಿಸಿವಾಯುಮಾಲಿನ್ಯ ಉಂಟು ಮಾಡಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕಿರುವ ಜಿಲ್ಲಾಧಿಕಾರಿಗಳೇ ಇದನ್ನು ತಡೆಯಬಹುದಿತ್ತು. ಆದರೆ, ಇದಾಗಲಿಲ್ಲ, ಪರಿಸರ ಅಸಮತೋಲನವಾಗುತ್ತಿದ್ದು ತಾಪಮಾನ ಹೆಚ್ಚಾಗುತ್ತಿದೆ. ಇಂತಹವೇಳೆ ಪರಿಸರಕ್ಕೆ ಮಾರಕವಾಗುವ ಪಟಾಕಿಯ ಅಗತ್ಯವೇನಿತ್ತು ಎಂದು ದೂರುತ್ತಿದ್ದಾರೆ.

ಪ್ರಚಾರದ ಹುಚ್ಚೇಕೆ?: ಕಂದಾಯ ಮಹೋತ್ಸವ ನಡೆಸುವಾಗ ತಾಲೂಕಿನ ಪ್ರತಿ ಹೋಬಳಿಯವರು ತಮ್ಮ ಉಪತಹಶೀಲ್ದಾರ್‌ ಸೇರಿದಂತೆ ಎಲ್ಲಾಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳನ್ನುಒಳಗೊಂಡಂತೆ ಫ್ಲೆಕ್ಸ್‌ ಹಾಕುವ ಮೂಲಕ ಪ್ರಚಾರಕ್ಕೆ ಏಕೆ ಜೋತುಬಿದ್ದರು. ಪ್ಲಾಸ್ಟಿಕ್‌ ನಿಷೇಧ ಮಾಡಬೇಕಾಗಿರುವ ತಾಲೂಕಿನ ತಹಶೀಲ್ದಾರ್‌,ಸಿಬ್ಬಂದಿ ಒಳಗೊಂಡಂತೆ ಹತ್ತಾರು ಫ್ಲೆಕ್ಸ್‌ಗಳನ್ನುಹಾಕಿಸಿಕೊಂಡು ಫ್ಲೆಕ್ಸ್‌ ನಿಷೇಧ ಪಟ್ಟಣಕ್ಕೆ ಮಸಿ ಬಳಿದಿದ್ದಾರೆ.

ರಾಜಕಾರಣಿಗಳಂತಾದರು: ದಶಕದ ನಂತರ ನಡೆಯುತ್ತಿರುವ ಕಂದಾಯೋತ್ಸವ ಇತಿಹಾಸ ಪುಟ ಸೇರುವ ರೀತಿಯಲ್ಲಿ ನಡೆಯಬೇಕು. ಪರಿಸರಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯದಿಂದದೂರವಿದ್ದು ವಿನೂತನವಾಗಿ ಉತ್ಸವ ಸಂಘಟನೆ ಮಾಡಬೇಕು. ಆದರೆ, ರಾಜಕೀಯ ಪಕ್ಷದ ನಾಯಕರ ರೀತಿಯಲ್ಲಿ ರಸ್ತೆ ಇಕ್ಕೆಲದಲ್ಲಿ ಫ್ಲೆಕ್ಸ್‌ಗಳನ್ನು ಹಾಕಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸುವುದರಲ್ಲಿ ಅರ್ಥವೇನು, ಇಂತಹ ಪರಿಸರಕ್ಕೆ ಮಾರಕವಾಗುವ ಕಾರ್ಯಕ್ರಮಗಳು ತಾಲೂಕಿನಲ್ಲಿ ಮುಂದೆ ನಡೆದರೆಖಂಡಿಸಲಾಗುವುದು ಎಂದು ಪ್ರಗತಿಪರ ಚಿಂತಕರು ಎಚ್ಚರಿಸಿದ್ದಾರೆ.

ಬೇಲಿಯೇ ಎದ್ದು ಹೊಲ ಮೇಯಿತೆ? :  ಪರಿಸರದ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು, ಪ್ಲಾಸ್ಟಿಕ್‌ ಮುಕ್ತ ನಗರ ಮಾಡಲು ತಾಲೂಕು ಆಡಳಿತ ಮುಂದಾ ಗಬೇಕು. ಆದರೆ, ತಾಲೂಕಿನಲ್ಲಿ ಮಾತ್ರ ಬೇಲಿನೇ ಎದ್ದು ಹೊಲ ಮೇಯ್ದಂತಿದೆ. ಸರ್ಕಾರ ಪ್ಲಾಸ್ಟಿಕ್‌ ನಿಷೇಧಿಸಿದರೆ, ಇದರ ಉತ್ಪನ್ನವಾದ ಫ್ಲೆಕ್ಸ್‌ ಕೂಡ ಹಾಕುವಂತಿಲ್ಲ. ಸರ್ಕಾರದ ಕಾಯ್ದೆ ಜಾರಿಗೆ ತರಬೇಕಿರುವ ಅಧಿಕಾರಿಗಳು, ಕಾಯ್ದೆಯನ್ನು ಮೂಲೆ ಗುಂಪು ಮಾಡಿದ್ದಾರೆ. ಈ ಬಗ್ಗೆ ಯಾರನ್ನು ಪ್ರಶ್ನಿಸಬೇಕು ಎಂದು ಪರಿಸರವಾದಿ ಹಾಗೂ ಸಾವಯವ ಕೃಷಿಕ ರವಿಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

 

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next