Advertisement
ಶೀತಲೀಕರಣ ವ್ಯವಸ್ಥೆಯು ಒಂದು ಕೋಣೆಯ ಉಷ್ಣತೆ, ತೇವಾಂಶವನ್ನು ಹೆಚ್ಚು ಅನುಕೂಲಕರ ಸ್ಥಿತಿಗೆ ಬದಲಿಸುವ ಪ್ರಕ್ರಿಯೆಯಾಗಿದೆ. ಸಮಶೀತೋಷ್ಣ ಸೌಕರ್ಯ ಮನುಷ್ಯನ ಆರೋಗ್ಯ, ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ, ಅವನ ಕಾರ್ಯಕ್ಷಮತೆ ಹೆಚ್ಚುತ್ತದೆ. ಈ ಶೈತ್ಯಕಗಳು ತಾಪಮಾನವನ್ನು ಅನುಕೂಲಕರ ಸ್ಥಿತಿಗೆ ತಗ್ಗಿಸುವುದರ ಜತೆಯಲ್ಲಿ ಗಾಳಿಯ ಹರಿವನ್ನು ಹೆಚ್ಚಿಸುತ್ತದೆ.
ಇದರಲ್ಲಿ ಟರ್ಮೋ ಎಲೆಕ್ಟ್ರಿಕ್ ಜನರೇಟರ್ (ಟೆಗ್) ಎನ್ನುವ ಸಾಧನವನ್ನು ಬಳಸಿಕೊಳ್ಳಲಾಗಿದೆ. ಟೆಗ್‌ನಲ್ಲಿ ಎರಡು ವಿಭಾಗವಿರುತ್ತವೆ. ಒಂದು ಶೀತವಿರುವ ಭಾಗ, ಮತ್ತೊಂದು ಉಷ್ಣತಾ ಭಾಗ. ಶೀತವಿರುವ ಭಾಗಕ್ಕೆ ನೀರಿನ ಸಂಪರ್ಕವನ್ನು ಜೋಡಿಸಬೇಕು. ಇದರಿಂದ ನೀರಿನ ತೊಟ್ಟಿಯ ಉಷ್ಣತೆ ಕಡಿಮೆಯಾಗುತ್ತದೆ. ನೀರಿನ ತೊಟ್ಟಿಗೆ ಅಲ್ಟ್ರಾಸಾನಿಕ್ ಮಿಸ್ಟ್ ಮೇಕರನ್ನು ಜೋಡಿಸಲಾಗಿದೆ. ಇದು ಶೀತಲೀಕರಿಸಿದ ನೀರಿನ ಕಣಗಳನ್ನು ಮಂಜಾಗಿ ಪರಿವರ್ತಿಸಿ ವಾತಾವರಣಕ್ಕೆ ಬಿಡುಗಡೆಗೊಳಿಸಿ ಕೊಠಡಿ ತಂಪಾಗುವಂತೆ ಮಾಡುತ್ತದೆ. ಉಷ್ಣತೆಯನ್ನು ಅಳೆಯುವುದಕ್ಕಾಗಿ ಸೂಕ್ತ ಮಾಪಕವನ್ನು ಅಳವಡಿಸಲಾಗಿದೆ. ನೈಸರ್ಗಿಕವಾಗಿ ಸಿಗುವ ಹೈಡ್ರೋಕಾರ್ಬನ್ ಮತ್ತು ಗಾಳಿಯನ್ನು ಇದು ಉಪಯೋಗಿಸಿಕೊಳ್ಳುತ್ತದೆ. ಟೆಗ್ ಯಾವುದೇ ರೀತಿಯ ರಾಸಾಯನಿಕಗಳನ್ನು ಹೊರಸೂಸುವುದಿಲ್ಲವಾದ್ದರಿಂದ ಇದೊಂದು ಪರಿಸರ ಸ್ನೇಹಿ ಉಪಕರಣವಾಗಿದೆ.