ಮೈಸೂರು: ಪರಿಸರದ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಾಗಿರುವುದ ರಿಂದ ಜೀವ ವೈವಿಧ್ಯತೆಯ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ ಎಂದು ಮೈಸೂರು ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾ ಮಪ್ಪ ಚಳ್ಕಾಪುರೆ ಹೇಳಿದರು.
ಮೈಸೂರಿನ ಬಿ.ಎನ್.ರಸ್ತೆಯ ಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಣಿ ಶಾಸ್ತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಏರ್ಪಡಿಸಿದ್ದ ಪರಿಸರದ ಮೇಲಿನ ಮಾನವ ಅಡಚಣೆಗಳು: ಪರಿಕಲ್ಪನೆ ಮತ್ತು ಕಾಳಜಿ ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಜಗತ್ತಿನ ಜನಸಂಖ್ಯೆ 700 ಕೋಟಿ ದಾಟಿದ್ದು, ಜನವಸತಿಗಾಗಿ ಮನುಷ್ಯ ಶೇ.70 ಭಾಗ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾನೆ. ಜಗತ್ತಿನಲ್ಲಿ ಶೇ.30 ಮಾತ್ರ ಅರಣ್ಯ ಪ್ರದೇಶವಿದೆ. ಬುದ್ಧಿವಂತನಾಗಿರುವ ಮನುಷ್ಯನ ಹಸ್ತಕ್ಷೇಪದಿಂದಲೇ ಪರಿಸರ ಹಾಳಾ ಗುತ್ತಿದೆ.
ಅಂತರ್ಜಲ ಕುಸಿಯುತ್ತಿದೆ. ವಾಯುಮಾಲಿನ್ಯ, ಜಲಮಾಲಿನ್ಯ, ಕೃಷಿಯೇತರ ಚಟುವಟಿಕೆ, ವಾಣಿಜ್ಯೀ ಕರಣದಿಂದ ಪರಿಸರ ನಾಶವಾ ಗುತ್ತಿದೆ. ಆದ್ದರಿಂದ ಮನುಷ್ಯ ನಿಂದಾಗುತ್ತಿ ರುವ ಅರಣ್ಯನಾಶ, ಪ್ರಾಣಿ-ಪಕ್ಷಿಗಳ ಹತ್ಯೆಗಳಿಗೆ ಕಡಿವಾಣ ಹಾಕಿ ಪರಿಸರ ರಕ್ಷಣೆಗೆ ಪ್ರತಿಯೊ ಬ್ಬರು ಕೈ ಜೊಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಕಾಲೇಜು ಸಮುಚ್ಛಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯಮಾತನಾಡಿ, ವಾಯುಮಾಲಿನ್ಯದಿಂದ ಹೆಚ್ಚು ಪರಿಸರ ನಾಶವಾಗುತ್ತಿದೆ. ಮಿತಿ ಮೀರಿದ ಜನಸಂಖ್ಯೆ, ಕ್ಷಿಪ್ರ ಕೈಗಾರಿಕೆ ಮತ್ತು ತಾಂತ್ರಿಕ ಅಭಿವೃದ್ಧಿ, ನಗರೀಕರಣದಿಂದಲೂ ಪರಿಸರದಲ್ಲಿ ಏರುಪೇರಾಗಿ ಜೀವವೈವಿಧ್ಯತೆ ನಾಶವಾ ಗುತ್ತಿದೆ.
ಅದನ್ನು ಕಾಪಾಡಲು ಸರ್ಕಾರ ಸ್ಥಳೀಯ ಸಂಘಸಂಸ್ಥೆಗಳ ಸಹಾಯ ಪಡೆದು ಕ್ರಮ ಜರುಗಿಸಬೇಕು ಎಂದು ಹೇಳಿದರು. ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ, ವಿಚಾರ ಸಂಕಿರಣದ ಸಂಚಾಲಕ ಡಾ.ಕೆ. ಎಸ್.ರಘುನಂದನ್, ಸಂಘಟನಾ ಕಾರ್ಯದರ್ಶಿ ಡಾ.ಬಿ.ಎಸ್.ನಿಜಗಲ್ ಉಪಸ್ಥಿತರಿದ್ದರು.