Advertisement

‘ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ ಆವಶ್ಯಕ’

03:14 PM Nov 27, 2017 | Team Udayavani |

ಬನ್ನೂರು : ಗ್ರಾಮ ಮಟ್ಟದಲ್ಲಿ ಪರಿಸರ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ, ಗ್ರಾಮ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ | ಕೆ.ಎಂ. ಕೃಷ್ಣ ಭಟ್‌ ಹೇಳಿದರು.

Advertisement

ವಿವೇಕಾನಂದ ಪ. ಪೂ. ಕಾಲೇಜು, ಬನ್ನೂರು ಗ್ರಾ.ಪಂ. ಹಾಗೂ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಬನ್ನೂರು ಗ್ರಾ.ಪಂ. ಸಭಾಂಗಣದಲ್ಲಿ ರವಿವಾರ ನಡೆದ ಆರೋಗ್ಯ ತಪಾಸಣ ಶಿಬಿರ-2017 ಉದ್ಘಾಟಿಸಿ ಮಾತನಾಡಿದರು.

ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿ ಮನಮೋಹ ಪಿ.ಎಸ್‌ ಮಾತನಾಡಿ, ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡವರಿಗೆ ಹಸಿರು ಕಾರ್ಡ್‌ ಸೌಲಭ್ಯ ನೀಡಲಾಗುತ್ತದೆ. ಮುಂದಿನ 1 ತಿಂಗಳ ತನಕ ಆಸ್ಪತ್ರೆಗೆ ಬರುವವರಿಗೆ 10 ಸಾವಿರ ರೂ. ತನಕದ ಚಿಕಿತ್ಸೆಗೆ ಇದರಿಂದ ಪ್ರಯೋಜನ ಸಿಗಲಿದೆ ಎಂದರು.

ಇದೊಂದು ಅವಕಾಶ
ಉಪ್ಪಿಂಗಡಿ ಪ್ರಾ. ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ| ನೈನಾ ಫಾತಿಮಾ ಮಾತನಾಡಿ, ಶಿಬಿರದಲ್ಲಿ ಪಾಲ್ಗೊಂಡು, ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡಲು ಇದೊಂದು ಅವಕಾಶವಾಗಿದೆ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಬನ್ನೂರು ಗ್ರಾ.ಪಂ. ಉಪಾಧ್ಯಕ್ಷ ಜಿನ್ನಪ್ಪ ಗೌಡ ಮಾತನಾಡಿ, ಆರೋಗ್ಯ ಶಿಬಿರಗಳು ಬಡವರ ಪಾಲಿಗೆ ಪಂಚಾಮೃತ ಇದ್ದ ಹಾಗೆ. ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಗ್ರಾಮವು ಆರೋಗ್ಯವಾಗಿರುತ್ತದೆ ಎಂದರು. 

ಈ ಸಂದರ್ಭ ಗ್ರಾಮದಲ್ಲಿ ಪ್ಲಾಸ್ಟಿಕ್‌ ಕುರಿತು ಜಾಗೃತಿ ಮೂಡಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ಅವರನ್ನು ಸಮ್ಮಾನಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಪುತ್ತೂರು ತಾಲೂಕು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ವಿವೇಕಾನಂದ ಪ.ಪೂ. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಸಂತೋಷ್‌ ಐ., ಬನ್ನೂರು ಗ್ರಾಮ ಸಮಿತಿ ಗೌರವ ಸಲಹೆಗಾರ ಸೇಡಿಯಾಪು ಜನಾರ್ದನ ಭಟ್‌, ಉದ್ಯಮಿ ಡೆನ್ನಿಸ್‌ ಡಿ’ಸೋಜಾ ಉಪಸ್ಥಿತರಿದ್ದರು.

Advertisement

ವಿವೇಕಾನಂದ ಪ.ಪೂ. ಕಾಲೇಜಿನ ಧನ್ಯಾಶ್ರೀ ಪ್ರಾರ್ಥಿಸಿದರು. ಪಿಡಿಒ ಶಾಂತಾರಾಮ ಸ್ವಾಗತಿಸಿ, ಸಾಮಾಜಿಕ ಕಾರ್ಯಕರ್ತ ಸುದರ್ಶನ ಗೌಡ ವಂದಿಸಿದರು. ವಿದ್ಯಾರ್ಥಿನಿ ರೇಖಾ ನಿರೂಪಿಸಿದರು. ರತ್ನಾಕರ ಪ್ರಭು ಸಹಕರಿಸಿದರು.

ಶಿಬಿರದಲ್ಲಿ ಕೆಎಂಸಿ ವೈದ್ಯರಿಂದ ವಿವಿಧ ವಿಭಾಗಳಲ್ಲಿ ತಪಾಸಣೆ ನಡೆಯಿತು. ಬನ್ನೂರು ಗ್ರಾಮವಿಕಾಸ ಸಮಿತಿ, ತಾಲೂಕು ಆರೋಗ್ಯ ಇಲಾಖೆ, ಕೆಮ್ಮಾಯಿ ರೋಟರಿ ಗ್ರಾಮೀಣ ಸಮುದಾಯ ದಳ, ಶ್ರೀ ಧ.ಗ್ರಾ.ಯೋ. ಪುತ್ತೂರು ಮತ್ತು ಬನ್ನೂರು, ಪಟ್ನೂರು, ಅಡೆಂಚಿಲಡ್ಕ ಶ್ರೀ ಸದಾಶಿವ ಕಾಲೋನಿ, ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿ, ಸೇಡಿಯಾಪು ಕುಲಾಲ ಸಮಾಜ ಸೇವಾ ಸಂಘ, ಶ್ರೀ ಕೃಷ್ಣ ಯುವಕ ಮಂಡಲ, ಬನ್ನೂರು ಸ್ಫೂರ್ತಿ ಯುವ ಸಂಸ್ಥೆ, ಬನ್ನೂರು ಒಕ್ಕಲಿಗ ಗೌಡ ಗ್ರಾಮ ಸಮಿತಿ, ಕುಂಟಿಕಾನ ಶ್ರೀ ದುರ್ಗಾ ಭಜನ ಮಂದಿರ, ಕೆಮ್ಮಾಯಿ ಚಿಗುರು ಗೆಳೆಯರ ಬಳಗ ಸಹ ಸಂಸ್ಥೆಗಳಾಗಿ ಸಹಕಾರ ನೀಡಿದ್ದವು.

ಯುವಜನಾಂಗದಲ್ಲಿ ಜಾಗೃತಿ
ಯುವ ಪೀಳಿಗೆಗೆ ಗ್ರಾಮಗಳ ಸ್ಥಿತಿ-ಗತಿ ಅರಿವಾಗುವ ಅಗತ್ಯತೆ ಇದೆ. ಅಲ್ಲಿನ ಅನುಭವ ಯುವ ಸಮುದಾಯದ ಭವಿ ಷ್ಯದ ಬೆಳವಣಿಗೆಗೂ ಪ್ರಯೋಜನ ತರುತ್ತದೆ. ಪ್ಲಾಸ್ಟಿಕ್‌ನಿಂದ ಆಗುವ ಅಪಾಯದ ಕುರಿತು ಗ್ರಾಮ ಮಟ್ಟದಿಂದಲೇ ಜಾಗೃತಿ ಆರಂಭಗೊಳ್ಳಬೇಕು. ಗ್ರಾಮದಲ್ಲಿ ನವ ಚೇತನ ತುಂಬಿದರೆ ಅದು ಇಡೀ ದೇಶಕ್ಕೆ ಪಸರಿಸುತ್ತದೆ. ಆ ನಿಟ್ಟಿನಲ್ಲಿ ಆರೋಗ್ಯ ತಪಾಸಣ ಶಿಬಿರವೂ ಸಹಕಾರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next