Advertisement

ತಂಬಾಕಿನಿಂದ ಮನುಷ್ಯನ ದೇಹಕ್ಕಲ್ಲದೆ, ಪರಿಸರಕ್ಕೂ ಹಾನಿ

03:30 PM May 28, 2022 | Team Udayavani |

ಚಿಕ್ಕಬಳ್ಳಾಪುರ: ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ವಿಶ್ವದಾದ್ಯಂತಆಚರಿಸಲಾಗುತ್ತಿದ್ದು, ಈ ವರ್ಷದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ತಂಬಾಕು ಪರಿಸರಕ್ಕೆಮಾರಕ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

Advertisement

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ನಂದಿ ಗಿರಿಧಾಮದಲ್ಲಿ ತಂಬಾಕಿನಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಪರಿಸರ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್‌. ಕಬಾಡೆ ಚಾಲನೆ ನೀಡಿ ಮಾತನಾಡಿ, ನಂದಿ ಗಿರಿಧಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳಾದ, ನಿಸರ್ಗ ಸೊಸೈಟಿ, ಕೂರ್‌ ಸಂಸ್ಥೆ, ಆಶಾಫೌಂಡೇಶನ್‌, ಸೌಖ್ಯ ಸಂಜೀವಿನಿ ಸಂಸ್ಥೆಗಳಸಹಭಾಗಿತ್ವದೊಂದಿಗೆ ಬೀಡಿ, ಸಿಗೇರೇಟ್‌ ಹಾಗೂಇತರೆ ತಂಬಾಕಿನ ಉತ್ಪನ್ನಗಳ ತ್ಯಾಜ್ಯವನ್ನು ಸ್ವಚ್ಛಗೊಳಿಸುವುದರ ಮೂಲಕ ಪರಿಸರ ಸ್ವತ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ತಂಬಾಕು ಜೀವ ಸಂಕುಲಕ್ಕೆ ಅಪಾಯ: ತಂಬಾಕು ಸೇವನೆಯಿಂದ ಮನುಷ್ಯನ ದೇಹಕ್ಕೆ ಅಷ್ಟೇಅಲ್ಲದೆ, ಪರಿಸರಕ್ಕೂ ಸಹ ಹಾನಿ ಉಂಟಾಗುತ್ತದೆ. ಪ್ರತಿ ವರ್ಷ 7,66,571 ಮೆಟ್ರಿಕ್‌ ಟನ್‌ನಷ್ಟುಸಿಗರೇಟ್‌ ತುಂಡುಗಳಿಂದ ತ್ಯಾಜ್ಯವು ಪರಿಸರದಲ್ಲಿ ವಿಲೀನಗೊಳ್ಳುತ್ತದೆ. ಈ ಸಿಗರೇಟ್‌ ತುಂಡುಗಳಲ್ಲಿರುವ ನಿಕೋಟಿನ್‌, ಲೆಡ್‌, ಪ್ಲಾಸ್ಟಿಕ್‌ನಂತಹ ವಸ್ತುಗಳಿಂದ ನೀರು ಕಲುಷಿತವಾಗಿ ನೀರಿನಲ್ಲಿ ವಾಸಿಸುವ ಜಲಚರಗಳು ಹಾಗೂನೀರನ್ನು ಸೇವಿಸುವ ದನಕರುಗಳು, ಪ್ರಾಣಿ-ಪಕ್ಷಿಗಳಿಗೆ ಅಪಾಯವಾಗುತ್ತಿದೆ ಎಂದು ತಿಳಿಸಿದರು.

ಧೂಮಪಾನದಿಂದ ಆರೋಗ್ಯ ಸಮಸ್ಯೆ: ಪ್ರತಿ ವರ್ಷ ವಿಶ್ವದಲ್ಲಿ 6 ಟ್ರಿಲಿಯನ್‌ ಸಿಗರೇಟುಉಪಯೋಗಿಸುವುದರಿಂದ ವಾತವರಣದಲ್ಲಿಇಂಗಾಲದ ಡೆ„ ಆಕ್ಸೆ„ಡ್‌ ಹೆಚ್ಚಾಗಿ ಹವಾಮಾನ ಬದಲಾವಣೆಯಾಗುತ್ತಿದೆ. ಪರೋಕ್ಷಧೂಮಪಾನದಿಂದ ಬರುವ ಹೊಗೆಯಿಂದಸಾರ್ವಜನಿಕರಿಗೂ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಯಲ್ಲಾರಮೇಶ್‌ ಬಾಬು, ಐಎಂಎ ಭಾರತೀಯವೈದ್ಯಕೀಯ ಸಂಘದ ಡಾ.ವಿಜಯ ಮತ್ತುಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next